ಮೇಯರ್‍ಗೆ ಗೌಡರ ಆಶೀರ್ವಾದ

ಬಿಬಿಎಂಪಿ ನೂತನ ಮೇಯರ್ ಮಂಜುನಾಥ ರೆಡ್ಡಿ ಶನಿವಾರ ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರ ಮನೆಗೆ ತೆರಳಿ ಸಿಹಿ ಹಂಚುವುದರೊಂದಿಗೆ ಸಲಹೆಗಳನ್ನೂ ಪಡೆದರು...
ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ
ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ
Updated on

ಬೆಂಗಳೂರು: ಬಿಬಿಎಂಪಿ ನೂತನ ಮೇಯರ್ ಮಂಜುನಾಥ ರೆಡ್ಡಿ ಶನಿವಾರ ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರ ಮನೆಗೆ
ತೆರಳಿ ಸಿಹಿ ಹಂಚುವುದರೊಂದಿಗೆ ಸಲಹೆಗಳನ್ನೂ ಪಡೆದರು.

ಪದ್ಮನಾಭನಗರದಲ್ಲಿರುವ ದೇವೇಗೌಡ ಅವರ ನಿವಾಸಕ್ಕೆ ಶನಿವಾರ ಬೆಳಗ್ಗೆ ತೆರಳಿ ಸಿಹಿ ಹಂಚಿದ ಮೇಯರ್ ಮಂಜುನಾಥರೆಡ್ಡಿ, ಬಿಬಿಎಂಪಿ ಆಡಳಿತ ಕುರಿತು ಸಲಹೆ ಪಡೆದರು. ಬಿಬಿಎಂಪಿ ಆಡಳಿತವನ್ನು ಉತ್ತಮವಾಗಿ ನಡೆಸಬೇಕು. ನಗರದ ಅಭಿವೃದ್ಧಿಗೆ ಶ್ರಮಿಸಲು ಎಲ್ಲ ಸದಸ್ಯರೂ ಸಹಕರಿಸ ಬೇಕು. ಪಾಲಿಕೆಯ ಎಲ್ಲ ಸದಸ್ಯರೊಂದಿಗೆ ಸೇರಿಕೊಂಡು ಆಡಳಿತ ನಡೆಸಬೇಕು. ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ಮೂಲಸೌಕರ್ಯ ಕೊರತೆಯಿ ದ್ದು, ಸ್ಥಳೀಯರು ಹಲವು ವರ್ಷ ಗಳಿಂದ ತೊಂದರೆಗೊಳಗಾಗಿದ್ದಾರೆ. ಈ
ಬಾರಿಯಾದರೂ ಮೈತ್ರಿ ಆಡಳಿತದಲ್ಲಿ ಈ ಹಳ್ಳಿಗಳಿಗೆ ಮೊದಲ ಆದ್ಯತೆ ನೀಡಿ, ಅಬಿsವೃದಿಟಛಿ ಮಾಡಬೇಕು ಎಂದು ಎಚ್.ಡಿ. ದೇವೇಗೌಡ ಆಡಳಿತದ ಪಾಠವನ್ನು ಹೇಳಿಕೊಟ್ಟರು.

ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ , ಶಾಸಕ ಮುನಿರತ್ನ, ಜೆಡಿಎಸ್‍ನ ಶಾಸಕರಾದ ಜಮೀರ್ ಅಹ್ಮದ್, ಅಖಂಡ ಶ್ರೀನಿವಾಸಮೂರ್ತಿ ಅವರ ಜೊತೆ ಮೇಯರ್ ಮಂಜುನಾಥ ರೆಡ್ಡಿ ಬಂದರು. ಇದಕ್ಕೂ ಮುನ್ನ ಸಚಿವ ರಾಮಲಿಂಗಾರೆಡ್ಡಿ ಅವರ ಮನೆಗೆ ತೆರಳಿದ ಮೇಯರ್ ಮಂಜುನಾಥರೆಡ್ಡಿ ಅಲ್ಲಿಯೂ ಸಿಹಿ ಹಂಚಿ ಮಾರ್ಗದರ್ಶನ ಪಡೆದರು. ನಂತರ ದಕ್ಷಿಣ ವಲಯದ ಅಧಿಕಾರಿಗಳನ್ನು ಭೇಟಿ ಮಾಡಿದ ಮಂಜುನಾಥ ರೆಡ್ಡಿ, ಬಿಂಗಿಪುರ ಕಸದ ಸಮಸ್ಯೆ ಬಗ್ಗೆ ಮಾಹಿತಿ ಪಡೆದರು ಸಮನ್ವಯ ಸಮಿತಿ ಇಲ್ಲ: ಪದ್ಮನಾಭನಗರದ ದೇವಗೌಡರ ನಿವಾಸದಲ್ಲಿ ಸುದ್ದಿಗಾರರೊಂ ದಿಗೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ ಅವರು, ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಯಿಂದ ರಚನೆಯಾಗಿರುವ ಬಿಬಿಎಂಪಿ ಆಡಳಿತ ಸುವ್ಯವಸ್ಥೆಯಿಂದಿರಿಸುವ ಸಮನ್ವಯ ಸಮಿತಿ ಬಗ್ಗೆ ಯಾವುದೇ ವಿಷಯ ಇದುವರೆಗೆ ಎರಡೂ ಪಕ್ಷದಲ್ಲಿ ಪ್ರಸ್ತಾಪವಾಗಿಲ್ಲ ಎಂದರು.

ಸಮನ್ವಯ ಸಮಿತಿಯ ಅವಶ್ಯಕತೆಯೇ ಇಲ್ಲ. ಏಕೆಂದರೆ, ಆಡಳಿತದ ವಿಷಯವಾಗಿ ಏನೇ ಸಮಸ್ಯೆಗಳಿದ್ದರೂ, ತಾವು ಹಾಗೂ ಶಾಸಕ ಜಮೀರ್ ಅಹ್ಮದ್ ಪರಿಹರಿಸಲಿದ್ದೇವೆ. ಮೇಯರ್ ಆಯ್ಕೆ ನಂತರ ಮತ್ತೊಮ್ಮೆ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ್ದು, ನಗರದ ಸಮಗ್ರ ಅಬಿsವೃದಿಟಛಿಗೆ ಶ್ರಮಿಸಲು ಸಲಹೆ ನೀಡಿದ್ದಾರೆ ಎಂದರು. ಈ ಮಧ್ಯೆ ಉಪ ಮೇಯರ್ ಹೇಮಲತಾ ಅವರು ತಮ್ಮ ಪತಿ ಶಾಸಕ ಕೆ. ಗೋಪಾಲಯ್ಯ ಜತೆಗೂಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ಶಾಸಕರಾದ ಜಮೀರ್, ಚಲುವರಾಯಸ್ವಾಮಿ ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com