ಸದ್ಯದಲ್ಲೇ ಇಟಿಎಂ ಯಂತ್ರ

ತಿಂಗಳೊಳಗೆ ಸಾವಿರ ಬಿಎಂಟಿಸಿ ಬಸ್‍ಗಳಿಗೆ ಜಿಪಿಎಸ್ ಹಾಗೂ ಸಿಸಿಟಿವಿ ಅಳವಡಿಸಲಾಗುವುದು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕ್‍ರೂಪ್ ಕೌರ್ ತಿಳಿಸಿದರು...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ತಿಂಗಳೊಳಗೆ ಸಾವಿರ ಬಿಎಂಟಿಸಿ ಬಸ್‍ಗಳಿಗೆ ಜಿಪಿಎಸ್ ಹಾಗೂ ಸಿಸಿಟಿವಿ ಅಳವಡಿಸಲಾಗುವುದು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕ್‍ರೂಪ್ ಕೌರ್ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಸಹಭಾಗಿತ್ವದಲ್ಲಿ ಐಟಿಎಸ್(ಇನ್ ಫರ್ಮೇಷನ್ ಟ್ರಾನ್ಸಿಸ್ಟ್ ಸಿಸ್ಟಮ್) ಯೋಜನೆಯಡಿ ತಿಂಗಳಾಂತ್ಯದಲ್ಲಿ ಸಾವಿರ ಬಸ್‍ಗಳಿಗೆ ಅಳವಡಿಸಿ, ಕ್ರಮೇಣವಾಗಿ ಎಲ್ಲಾ 6,500 ಬಸ್‍ಗಳಿಗೆ ಸಿಸಿಟಿವಿ, ಜಿಪಿಎಸ್ ಅಳವಡಿಸಲಾಗುವುದು ಎಂದರು. ಬಸ್‍ಗಳು ಸೂಕ್ತ ಸಮಯಕ್ಕೆ ಬರುತ್ತಿಲ್ಲ, ನಿಲ್ದಾಣದಲ್ಲಿ ನಿಲುಗಡೆ ಮಾಡುವುದಿಲ್ಲ ಎಂಬಿತ್ಯಾದಿ ದೂರುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಜಿಪಿಎಸ್ ಅಳವಡಿಸುವ ಮೂಲಕ ಎಲ್ಲಾ ಸಮಸ್ಯೆಗಳಿಗೆ ಇತಿಶ್ರೀ ಹಾಡಲಾಗುವುದು ಎಂದರು.

ರು.79 ಕೋಟಿ ವೆಚ್ಚದಲ್ಲಿ ಈ ಯೋಜನೆ ಜಾರಿಗೆ ತರಲಾಗುತ್ತಿದೆ. ಇದು ಸಂಪೂರ್ಣ ಜಾರಿಯಾದ ನಂತರ ಪ್ರಯಾಣಿಕರು ಆಪ್ ಬಳಸಿ ಬಸ್ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು. ಬಸ್ ಎಲ್ಲಿ ಬರುತ್ತಿದೆ, ಅದರಲ್ಲಿ ಆಸನ ಖಾಲಿ ಇದೆಯೇ ಇಲ್ಲವೆ ಎಂಬಿತ್ಯಾದಿ ತಿಳಿಯಬಹುದು ಎಂದು ಏಕ್ ರೂಪ್ ಕೌರ್ ಹೇಳಿದರು.

ಬಸ್‍ಗಳಲ್ಲಿ ಇಟಿಎಂ ಯಂತ್ರ: ಬಿಎಂಟಿಸಿ ಬಸ್‍ಗಳಲ್ಲಿ ಚಾಲಕರಿಗೆ ಇನ್ನು ಮುಂದೆ ಟಿಕೆಟ್ ವಿತರಿಸಲು ಇಟಿಎಂ ಯಂತ್ರ ನೀಡಲಾಗುವುದು. ಮೊದಲ ಹಂತದಲ್ಲಿ ಸಾವಿರ ಬಸ್‍ಗಳಿಗೆ, ನಂತರ ಎಲ್ಲಾ ಬಸ್ ಗಳಿಗೆ ಈ ಯಂತ್ರ ನೀಡಲಾಗುವುದು. ಈ ವ್ಯವಸ್ಥೆಯಿಂದ ಬಿಎಂಟಿಸಿಯ ಆದಾಯ ಸೋರಿಕೆಗೆ ಕಡಿವಾಣ ಬೀಳಲಿದ್ದು, ವಿದ್ಯುನ್ಮಾನ ಟಿಕೆಟ್ ಯಂತ್ರ ಅಳವಡಿಕೆಯಿಂದ ಶೇ. 5 ರಷ್ಟು ಆದಾಯದ ಹೆಚ್ಚಳವನ್ನು ನಿರೀಕ್ಷಿಸಲಾಗಿದೆ. ವಿದ್ಯುನ್ಮಾನ ಟಿಕೆಟ್ ಯಂತ್ರ ಅಳವಡಿಸಿದ ನಂತರ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ತರಲಾಗುವುದು. ಇದರಿಂದ ದೂರುಗಳಿಗೆ ಪರಿಹಾರ ಸಿಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com