ಮಣ್ಣಿನ ಗಣೇಶ ಪ್ರಾತ್ಯಕ್ಷಿಕೆ, ಬುಡಕಟ್ಟು ಸಂಗೀತದ ಸುಧೆ

ಪರಿಸರ ಸ್ನೇಹಿ ಗಣಪನನ್ನು ಬಳಸಿ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಲಾಲ್‍ಬಾಗ್‍ನ ಗಾಜಿನ ಅರಮನೆ ಮುಂಭಾಗ ಮಾ್ಯಜಿಕ್ ಶೊ ನಡೆಸಿತು. ಮಾಲಿನ್ಯ ನಿಯಂತ್ರಣ ಮಂಡಳಿ ಅಭಿಯಾನದಲ್ಲಿ ಒಟ್ಟು 25 ಸ್ಥಳಗಳನ್ನು...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಪರಿಸರ ಸ್ನೇಹಿ ಗಣಪನನ್ನು ಬಳಸಿ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಲಾಲ್‍ಬಾಗ್‍ನ ಗಾಜಿನ ಅರಮನೆ ಮುಂಭಾಗ ಮಾ್ಯಜಿಕ್ ಶೊ ನಡೆಸಿತು. ಮಾಲಿನ್ಯ ನಿಯಂತ್ರಣ ಮಂಡಳಿ ಅಭಿಯಾನದಲ್ಲಿ ಒಟ್ಟು 25 ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.

ಬೆಳಗ್ಗೆ 6 ರಿಂದ 7.30ರವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಬ್ಯಾಂಡ್ ಸ್ಟ್ಯಾಂಡ್ ಆವರಣದಲ್ಲಿ ಬಿ.ಸಿದ್ದರಾಮಯ್ಯ ಅವರಿಂದ ಸಂಗೀತ ಕಾರ್ಯಕ್ರಮ ಹಾಗೂ ಪೊಲೀಸ್ ಬ್ಯಾಂಡ್ ನಡೆಯಿತು. ಕಬ್ಬನ್‍ನಲ್ಲಿ ಬುಡಕಟ್ಟು ಸಂಗೀತ: ಇದೇ ಮೊದಲ ಬಾರಿಗೆ ಕಬ್ಬನ್ ಉದ್ಯಾನದಲ್ಲಿ ಬುಡಕಟ್ಟು ವಾದ್ಯಗಳ ಸಂಗೀತವೊಂದು ಮೊಳಗಿತು. ಗಣೇಶ ಗೋವಿಂದ ಸ್ವಾಮಿ ಮತ್ತು ತಂಡದವರು ಬೀಟ್‍ಗುರೂಸ್ ಎಂಬ ಬುಡಕಟ್ಟು ವಾದ್ಯಗಳನ್ನು ಮೊಳಗಿಸಿದ್ದು ಈ ಬಾರಿಯ ಕಬ್ಬನ್ ವಿಶೇಷವಾಗಿತ್ತು.

ಯೂನಿವರ್ಸ್ ಆರ್ಟ್ ಫೌಂಡೇಶನ್ ಸಹಯೋಗದಲ್ಲಿ ಶಿವರಂಜಿನಿ ಸೀತಾರಾಮ್ ಹಾಗು ಸ್ವಾಮಿನಾಥನ್ ಅವರ ಮೃದಂಗ, ಭಾರಧ್ವಾಜ್‍ರವರ ವೀಣೆ ಮತ್ತು ಲಕ್ಷಿ ್ಮೀನಾರಾಯಣ ಅವರ ಮೋರ್ಚಿಂಗ್ ನೊಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಮೂಡಿಬಂದಿತ್ತು. ಮಾಸ್ತಿ ಸಾಹಿತ್ಯ ಚಿಂತನೆ: ಸಾಹಿತಿ ಕೆ. ಅಣ್ಣಮ್ಮ ಅವರು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಾಹಿತ್ಯ ಹಾಗು ಕನ್ನಡ ಚಿಂತನೆ ಕುರಿತ ಉಪನ್ಯಾಸ ಹಾಗೂ ಬಾಲಪ್ರತಿಭೆ ದರ್ಶನ್ ನಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಆಯುಷ್ ಕಚೇರಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಮನೆ ಮದ್ದು ಮತ್ತು ಆಯುಷ್ ಅರಿವು ಕಾರ್ಯಕ್ರಮ, ಹೋಲಿಸ್ಟಿಕ್ ಇಂಟಿಗ್ರೇಟಿವ್ ಆಸ್ಪತ್ರೆಯಿಂದ ಆಯುರ್ವೇದ, ಹೋಮಿಯೋಪತಿ, ಗಿಡಮೂಲಿಕೆಗಳ ಸಿದಟಛಿ ಔಷಧಗಳ ಬಗ್ಗೆ ಮಾಹಿತಿ ನೀಡಲಾಯಿತು. ಪ್ರತಿ ವಾರದಂತೆ ಈ ವಾರವೂ ಕೂಡ ವಿವಿಧ ರೀತಿಯ ಹಣ್ಣುಗಳ ಮಾರಾಟ ನಡೆಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com