ತಿಂಗಳಾಂತ್ಯಕ್ಕೆ ವೈದ್ಯರ ಸರ್ಕಾರಿ ಸೇವೆ ಕಡ್ಡಾಯ

ರಾಜ್ಯದಲ್ಲಿ ವೈದ್ಯ ಪದವಿ ಪಡೆಯುವವರು ಕಡ್ಡಾಯವಾಗಿ ಒಂದು ವರ್ಷ ಸರ್ಕಾರಿ ಸೇವೆ ಮಾಡಬೇಕೆಂದು ರಾಜ್ಯ ಸರ್ಕಾರ ತಂದಿರುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ವೈದ್ಯ ಪದವಿ ಪಡೆಯುವವರು ಕಡ್ಡಾಯವಾಗಿ ಒಂದು ವರ್ಷ ಸರ್ಕಾರಿ ಸೇವೆ ಮಾಡಬೇಕೆಂದು ರಾಜ್ಯ ಸರ್ಕಾರ ತಂದಿರುವ ಕಾಯ್ದೆಯ ಮೊದಲ ಅನುಷ್ಠಾನ ಈ ತಿಂಗಳಾಂತ್ಯದಿಂದ ಆರಂಭವಾಗಲಿದೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ಈಗಾಗಲೇ ಸೂಪರ್ ಸ್ಪೆಷಾಲಿಟಿ ಕೋರ್ಸ್ ಮುಗಿಸಿರುವ 110 ಮಂದಿ, ಸೆಪ್ಟೆಂಬರ್ ನಲ್ಲಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಮುಗಿಸುವ 200 ಮಂದಿ, ಅಕ್ಟೋಬರ್ ನಲ್ಲಿ ಎಂಬಿಬಿಎಸ್ ಮುಗಿಸುವ 1300 ಮಂದಿ ಈ ವರ್ಷಾಂತದ ಸರ್ಕಾರಿ ವೈದ್ಯ ಸೇವೆಗೆ ಲಭ್ಯರಿರುತ್ತಾರೆ. ಈ ಪೈಕಿ ಎಂಬಿಬಿಎಸ್ ಮುಗಿಸಿದವರನ್ನು ಗ್ರಾಮೀಣ ಸೇವೆಗೆ ಬಳಸಿಕೊಳ್ಳಲಾಗುತ್ತದೆ ಎಂದರು.

ಮುಂದೆ 2016ರ ಮಾರ್ಚ್ ನಲ್ಲಿ ಸುಮಾರು ನಾಲ್ಕು ಸಾವಿರ ವೈದ್ಯರು, ಏಪ್ರಿಲ್ ನಲ್ಲಿ ಸ್ನಾತಕೋತ್ತರ ಕೋರ್ಸ್ ಮುಗಿಸುವ 1500 ಮಂದಿ ಮುಂದಿನ ಒಂದು ವರ್ಷದ ಅವಧಿಗೆ ಲಭ್ಯರಾಗುತ್ತಾರೆ. ಇವರೆಲ್ಲರನ್ನೂ ಕೌನ್ಸೆಲಿಂಗ್ ಮೂಲಕ ಸೇವೆಗೆ ಕಳುಹಿಸಲಾಗುತ್ತದೆ. ಇದೀಗ ಲಭ್ಯರಿರುವ ವೈದ್ಯರಿಗೆ ಈ ತಿಂಗಳಾಂತ್ಯದಲ್ಲೇ ಕೌನ್ಸೆಲಿಂಗ್ ನಡೆಸಿ ಹುದ್ದೆ ಖಾಲಿ ಇರುವ ಕಡೆ ನಿಯೋಜಿಸಲಾಗುತ್ತದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com