• Tag results for ಸರ್ಕಾರಿ

ಆಂಗ್ಲ ಮಾಧ್ಯಮಕ್ಕೆ ಒಲವು: 1,400 ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ಆರಂಭ

ಆಂಗ್ಲಭಾಷೆಯಲ್ಲಿ ಶಿಕ್ಷಣ ನೀಡುವ ರಾಜ್ಯದ 1,400ಕ್ಕೂ ಹೆಚ್ಚು ಶಾಲೆಗಳನ್ನು ರಾಜ್ಯ ಸರ್ಕಾರ ಗುರುತಿಸಿದೆ. ಒಂದನೇ ತರಗತಿಯಿಂದ ಇಲ್ಲಿ ಮಕ್ಕಳಿಗೆ ಆಂಗ್ಲಭಾಷೆಯಲ್ಲಿ ಬೋಧಿಸಲಾಗುತ್ತದೆ.

published on : 25th September 2020

ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನ: ದೆಹಲಿಯ ಸರ್ಕಾರಿ ಕಚೇರಿಗಳಲ್ಲಿ ಇಂದು ರಾಷ್ಟ್ರಧ್ವಜ ಅರ್ಧ ಮಟ್ಟದಲ್ಲಿ ಹಾರಾಟ

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕರ್ನಾಟಕದ ಬೆಳಗಾವಿ ಸಂಸದ ಸುರೇಶ್ ಅಂಗಡಿ ನಿಧನ ಹಿನ್ನೆಲೆಯಲ್ಲಿ ಗುರುವಾರ ದೆಹಲಿಯಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜ ಅರ್ಧಕ್ಕೆ ಹಾರಾಟ ನಡೆಸಲಿದೆ.

published on : 24th September 2020

ಸರ್ಕಾರಿ ವೈದ್ಯರ ಮುಷ್ಕರ ಸೆ.18ವರೆಗೂ ಮುಂದುವರಿಕೆ!

ಸರ್ಕಾರಿ ವೈದ್ಯರ ವೇತನ ಪರಿಷ್ಕರಣೆ, ಬಡ್ತಿ ಸೇರಿದಂತೆ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಸಮ್ಮತಿ ನೀಡಿದ್ದರೂ, ಕೆಲವು ಬೇಡಿಕೆಗಳ ಬಗ್ಗೆ ಹಗ್ಗ ಜಗ್ಗಾಟ ನಡೆಯುತ್ತಿದೆ. ಹೀಗಾಗಿ ಮಂಗಳವಾರದಿಂದ ಆರಂಭಿಸಿರುವ ಅಸಹಕಾರ ಮುಷ್ಕರವನ್ನು ಸೆ.18ರವರೆಗೆ ಮುಂದುವರಿಸಲು ಸರ್ಕಾರಿ ವೈದ್ಯರು ನಿರ್ಧರಿಸಿದ್ದಾರೆ. 

published on : 16th September 2020

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಬೇರೆ ಹುದ್ದೆ ಆಯ್ಕೆಗೆ ಅರ್ಜಿ ಸಲ್ಲಿಸಲು ಇನ್ನೂ ಎನ್ಒಸಿ ಬೇಕಿಲ್ಲ!

ಈಗಾಗಲೇ ಸರ್ಕಾರಿ  ಹುದ್ದೆಯಲ್ಲಿದ್ದು. ಮತ್ತೊಂದು ಸರ್ಕಾರಿ ಹುದ್ದೆಗೆ ಆಯ್ಕೆಗಾಗಿ ಅರ್ಜಿ ಸಲ್ಲಿಸುವ ಮುನ್ನ ಎನ್ ಒ ಸಿ ಪಡೆಯುವ ಹಳೆ ನಿಯಮಕ್ಕೆ ವಿನಾಯಿತಿ ಕಲ್ಪಿಸಿ, ಸರಕಾರ ನೌಕರರ ಪಾಲಿಗೆ ಸಹಿ ಸುದ್ದಿ ನೀಡಿದೆ.

published on : 9th September 2020

ಐಎಂಎ ಹಗರಣ: 2 ಸರ್ಕಾರಿ ಅಧಿಕಾರಿಗಳ ವಿರುದ್ಧ ಸಿಬಿಐ ಚಾರ್ಜ್'ಶೀಟ್

ಐಎಂಎ ಕಂಪನಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸರ್ಕಾರಿ ಅಧಿಕಾರಿಗಳ ವಿರುದ್ಧ ಸಿಬಿಐ ಚಾರ್ಜ್'ಶೀಟ್ ಸಲ್ಲಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

published on : 8th September 2020

ಸರ್ಕಾರಿ ಹುದ್ದೆ ನೇಮಕಾತಿಗೆ ನಿರ್ಬಂಧ ಅಥವಾ ನಿಷೇಧ ಹೇರಿಲ್ಲ:ಕೇಂದ್ರ ಸರ್ಕಾರ ಸ್ಪಷ್ಟನೆ

ಕೊರೋನಾ ವೈರಸ್ ಸಾಂಕ್ರಾಮಿಕದ ನಡುವೆ ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿರುವಾಗ ಸರ್ಕಾರಿ ಅಧಿಕಾರಿಗಳು ಖರ್ಚುವೆಚ್ಚಗಳಲ್ಲಿ ಕಡಿತ ಮಾಡಬೇಕೆಂದು ಖರ್ಚುವೆಚ್ಚಗಳ ಇಲಾಖೆ ಹೊರಡಿಸಿರುವ ಸುತ್ತೋಲೆ ಸರ್ಕಾರಿ ಉದ್ಯೋಗಗಳ ನೇಮಕಾತಿಯ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

published on : 6th September 2020

ಸರ್ಕಾರಿ ಕೋಟಾದಲ್ಲಿ 42, 291 ಕೋವಿಡ್ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ- ಆರೋಗ್ಯ ಇಲಾಖೆ  

ಕೋವಿಡ್‌ ಸೋಂಕು ಆರಂಭಗೊಂಡಂದಿನಿಂದ ಇಂದಿನವರೆಗೆ ಸರ್ಕಾರದ ಪೂರ್ವಾನುಮತಿ ಪಡೆದು ಖಾಸಗಿ ಆಸ್ಪತ್ರೆಗಳಲ್ಲಿ ಆ.28ರವರೆಗೆ 42,291 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಒಟ್ಟು 169.55 ಕೋಟಿ ರೂ. ವೆಚ್ಚವಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

published on : 30th August 2020

ಬಸ್ಸುಗಳ ಮುಖಾಮುಖಿ ಡಿಕ್ಕಿ: ಉತ್ತರ ಪ್ರದೇಶದಲ್ಲಿ ಆರು ಸಾವು, 12 ಮಂದಿಗೆ ಗಾಯ

ಮುಂದೆ ಚಲಿಸುತ್ತಿದ್ದ ಟ್ರಕ್ ಹಿಂದಕ್ಕೆ ಹಾಕುವ ಭರದಲ್ಲಿ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ ಎರಡು ಬಸ್ಸುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕನಿಷ್ಟ ೬ ಮಂದಿ ಪ್ರಯಾಣಿಕರು ಮೃತಪಟ್ಟು, ಇತರ ೨೦ ಮಂದಿ ಗಾಯಗೊಂಡಿರುವ ದುರ್ಘಟನೆ ಲಕ್ನೋ- ಹರದೋಯ್ ರಾಜ್ಯ ಹೆದ್ದಾರಿಯ ಬಜನ್ ಗರ್ ಸಮೀಪ ಬುಧವಾರ ಬೆಳಗ್ಗೆ ಸಂಭವಿಸಿದೆ.

published on : 26th August 2020

'ಸರ್ಕಾರಿ ಹಿ.ಪ್ರಾ. ಶಾಲೆ..' ನನ್ನನ್ನು ಕೆರಾಡಿಯಿಂದ ದೆಹಲಿಗೆ ಕರೆದೊಯ್ದ ಚಿತ್ರ:  ರಿಷಬ್ ಶೆಟ್ಟಿ

ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶದಲ್ಲಿ ಮೂಡಿಬಂದ ಕಡೆಯ ಚಿತ್ರ "ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು"ಗೆ ಎರಡು ವರ್ಷಗಳಾಗಿದೆ. "ಸರ್ಕಾರಿ ಹಿ.ಪ್ರ. ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ" ಚಿತ್ರ ಎರಡು ವರ್ಷದ ಹಿಂದೆ . ಆಗಸ್ಟ್ 24 ರಂದುತೆರೆಗೆ ಬಂದಿತ್ತು. ನಿರ್ದೇಶಕ ಹಾಗೂ  ಇಡೀ ತಂಡವು ಇಂದಿಗೂ ಜನರು ಈ ಚಿತ್ರದ ಮೇಲೆ ತೋರಿದ  ಪ್ರೀತಿಗಾಗಿ ಕೃತಜ್ಞರಾಗಿರಬೇಕು. ಎ

published on : 25th August 2020

ಕೇಂದ್ರ ಸರ್ಕಾರಿ ಉದ್ಯೋಗಗಳಿಗೆ ಸಿಇಟಿ ನಡೆಸಲು ರಾಷ್ಟ್ರೀಯ ನೇಮಕಾತಿ ಏಜೆನ್ಸಿ ಸ್ಥಾಪನೆಗೆ ಸಂಪುಟ ಅನುಮೋದನೆ

ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಕಂಪ್ಯೂಟರ್ ಆಧಾರಿತ ಸಾಮಾನ್ಯ ಅರ್ಹತಾ ಪರೀಕ್ಷೆಯನ್ನು ನಡೆಸುವ ಸಲುವಾಗಿ ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್‌ಆರ್‌ಎ) ರಚಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ

published on : 19th August 2020

ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ ಕ್ಯಾ.ದೀಪಕ್ ಸಾಠೆ ಅಂತ್ಯಕ್ರಿಯೆ

ಕಳೆದ ಆಗಸ್ಟ್ 7ರಂದು ಕೇರಳದ ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್ ಕ್ಯಾಪ್ಟನ್ ದೀಪಕ್ ಸಾಠೆ(58ವ) ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನಡೆಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

published on : 11th August 2020

ಉಡುಪಿ ಸರ್ಕಾರಿ ಆಸ್ಪತ್ರೆ ಹೊರಗಿನ ಕಸದ ಬುಟ್ಟಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ!

ಉಡುಪಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಹೊರಗಿನ ಕಸದ ಬುಟ್ಟಿಯಲ್ಲಿ ನವಜಾತ ಶಿಶು ಪತ್ತೆಯಾಗಿದೆ. 

published on : 10th August 2020

ಕೊರೋನಾ ಸಂದರ್ಭದಲ್ಲೂ 52 ಹೆರಿಗೆ: ಸೋಂಕಿತ ಮಹಿಳೆಯರ ಡೆಲಿವರಿ ಮಾಡಿಸಿ ಹೆಗ್ಗಳಿಕೆಗೆ ಪಾತ್ರವಾದ ಮೈಸೂರು ಆಸ್ಪತ್ರೆ!

ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಅದರಲ್ಲೂ ಕೊರೋನಾ ಬಂದ್ಮೇಲಂತೂ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಒಂದಿಲ್ಲೊಂದು ಭಯಾನಕ ವರದಿಗಳು ಬರುತ್ತಲೇ ಇವೆ. ಆದರೆ. ಇಲ್ಲೆದರ ನಡುವೆ 52 ಸೋಂಕಿತರ ಮಹಿಳೆಯರಿಗೆ ಹೆರಿಗೆ ಮಾಡಿಸಿದ ಹೆಗ್ಗಳಿಕೆಗೆ ಮೈಸೂರು ಆಸ್ಪತ್ರೆ ಪಾತ್ರವಾಗಿದೆ. 

published on : 3rd August 2020

ಉತ್ತಮ ಆಡಳಿತ ವ್ಯವಸ್ಥೆ-ನಿರ್ವಹಣೆಯ ಶಾಲೆಗಳಿಗೆ 'ಸ್ವಾಭಿಮಾನಿ ಸರ್ಕಾರಿ ಶಾಲೆ' ಪ್ರಶಸ್ತಿ: ಸುರೇಶ್ ಕುಮಾರ್

ನಮ್ಮ ಸರ್ಕಾರಿ ಶಾಲೆಗಳಲ್ಲಿನ ಉತ್ತಮ ಆಡಳಿತ ವ್ಯವಸ್ಥೆ ಮತ್ತು ಶೈಕ್ಷಣಿಕ ನಿರ್ವಹಣೆಯಲ್ಲಿನ ವಿಶೇಷ ಸಾಧನೆಯನ್ನು ಗುರುತಿಸಿ ಈ ವರ್ಷದಿಂದಲೇ ರಾಜ್ಯಮಟ್ಟದಲ್ಲಿ ‘ಸ್ವಾಭಿಮಾನಿ ಸರ್ಕಾರಿ ಶಾಲೆ’ ಎಂಬ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. 

published on : 29th July 2020

ಇಲ್ಲೇ ಇದ್ದರೆ, ಬೇರೆ ರೋಗ ಬರುವ ಸಾಧ್ಯತೆ ಇದೆ. ದಯವಿಟ್ಟು ನನ್ನನ್ನು ಅಥಣಿಗೆ ಸ್ಥಳಾಂತರಿಸಿ: ಸರ್ಕಾರಿ ಆಸ್ಪತ್ರೆ ದುಃಸ್ಥಿತಿ ಕಂಡು ಸೋಂಕಿತ ವ್ಯಕ್ತಿ ಆತಂಕ

ಇಲ್ಲೇ ಇದ್ದರೆ, ನನಗೆ ಬೇರೆ ರೋಗಗಳು ಬರುವ ಸಾಧ್ಯತೆಗಳಿವೆ. ದಯವಿಟ್ಟು ನನ್ನನ್ನು ನನ್ನೂರು ಅಥಣಿಗೆ ಸ್ಥಳಾಂತರಿಸಿ ಎಂದು ಸೋಂಕಿತ ವ್ಯಕ್ತಿಯೊಬ್ಬ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಟ್ಟಿರುವ ಜಿಲ್ಲಾಸ್ಪತ್ರೆಯ ದುಃಸ್ಥಿತಿ ಕಂಡು ಆತಂಕ ಹೊರಹಾಕಿದ್ದು, ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

published on : 19th July 2020
1 2 3 4 5 6 >