1374 ಎಂಜಿನಿಯರುಗಳ ನೇಮಕಕ್ಕೆ ಸಂಪುಟ ಒಪ್ಪಿಗೆ

ಲೋಕೋಪಯೋಗಿ, ಜಲಸಂಪನ್ಮೂಲ ಹಾಗೂ ಪಂಚಾಯತ್ ರಾಜ್ ಇಲಾಖೆಗಳಲ್ಲಿ ಖಾಲಿ ಇರುವ 1374 ಸಹಾಯಕ ಹಾಗೂ ಕಿರಿಯ...
ಎಂಜಿನಿಯರ್ಸ್
ಎಂಜಿನಿಯರ್ಸ್

ಬೆಂಗಳೂರು: ಲೋಕೋಪಯೋಗಿ, ಜಲಸಂಪನ್ಮೂಲ ಹಾಗೂ ಪಂಚಾಯತ್ ರಾಜ್ ಇಲಾಖೆಗಳಲ್ಲಿ ಖಾಲಿ ಇರುವ 1374 ಸಹಾಯಕ ಹಾಗೂ ಕಿರಿಯ ಎಂಜಿನಿಯರುಗಳ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ ಸೇರಿದಂತೆ ಮಹತ್ವದ ನಿರ್ಧಾರಗಳಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಮೂರೂ ಇಲಾಖೆಗಳಲ್ಲಿ ಬಹುದಿನಗಳ ಖಾಲಿ ಇದ್ದ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಮೆರಿಟ್ ಆಧಾರದ ಮೇಲೆ ಕಾಲಮಿತಿಯಲ್ಲಿ ನೇರ ನೇಮಕಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕಳೆದ 2001 ರ ವಿಶೇಷ ನೇಮಕ ನಿಯಮಾವಳಿ ಅನ್ವಯ ಸುಪ್ರೀಂಕೋರ್ಟ್ ತೀರ್ಪಿನ ಅನುಸಾರ ಹುದ್ದೆ ಭರ್ತಿಗೆ ಸಂಪುಟ ಅನುಮೋದನೆ ನೀಡಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾಯಂ ಸಿಬ್ಬಂದಿಗೆ ನೂತನ ಪಿಂಚಣಿ ಯೋಜನೆಗೂ ಸಂಪುಟ ಸಭೆ ಸಮ್ಮತಿಸಿದೆ.

ಉಳಿದ ಪ್ರಮುಖ ತೀರ್ಮಾನಗಳು
* ಕೃಷಿ ವಲಯದ ಸುಧಾರಣೆ ಹಾಗೂ ರೈತರಿಗೆ ಉಪಯುಕ್ತ ಮಾಹಿತಿ, ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಅಳವಡಿಕೆ ಹಾಗೂ ಸುಧಾರಿತ ತಳಿಗಳ ಪರಿಚಯಿಸಲು ಶಿವಮೊಗ್ಗದ ಸಾಗರ ಬಳಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸಲು ಸಮ್ಮತಿ. ವಿವಿ ಕ್ಯಾಂಪಸ್ ನಿರ್ಮಾಣ ಹಾಗೂ ಮೂಲ ಸೌಕರ್ಯ ಕಲ್ಪಿಸಲು ರು. 150 ಕೋಟಿ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ.

* ರಾಜ್ಯದಲ್ಲಿ ಹೊಸದಾಗಿ ಪ್ಯಾರಾ ಮೆಡಿಕಲ್ ಹಾಗೂ ಸಂಂುÉೂೀಜಿತ ಕೋರ್ಸ್‍ಗಳಿಗೆ ಸಂಬಂಧಿಸಿದ ಹೊಸ ಕಾಲೇಜು ತೆರೆಯಲು ಮತ್ತು ಹಾಲಿ ಕಾಲೇಜುಗಳಲ್ಲಿ ಹೊಸ ಕೋರ್ಸ್ ಪ್ರಾರಂಬಿsಸಲು ಮತ್ತು ಕೆಲವು ಕಾಲೇಜುಗಳಲ್ಲಿ ಪ್ರವೇಶ ಸಂಖ್ಯೆ ಹೆಚ್ಚಿಸಲು ಸಂಪುಟ ಒಪ್ಪಿಗೆ ನೀಡಿದೆ.

* ಮಂಡ್ಯದ ದುದ್ದ ಬಳಿ ಗಾಂಧಿ ಗ್ರಾಮ ಸ್ಥಾಪಿಸಲು ಹತ್ತು ಎಕರೆ ಮಂಜೂರು ಮಾಡುವುದಕ್ಕೆ ಅನುಮತಿ. ಹಿರಿಯ ಮುಖಂಡ ಮಾದೇಗೌಡ ಅವರ ಮಾರ್ಗದರ್ಶನದಲ್ಲಿ ಸ್ಮಾರಕ ಟ್ರಸ್ಟ್ ಆರಂಭವಾಗುತ್ತಿದ್ದು ಇದಕ್ಕಾಗಿ 20 ಎಕರೆ ಜಮೀನು ಮಂಜೂರು ಮಾಡುವಂತೆ ಕೋರಿದ್ದರು. ಆದರೆ, ದುದ್ದ ಹೋಬಳಿ ಮಲ್ಲಿಗೆರೆ ಗ್ರಾಮದ ರೇಷ್ಮೆ ಇಲಾಖೆಗೆ ಸೇರಿದ ಹತ್ತು ಎಕರೆ ಬಿಟ್ಟುಕೊಡಲು ಸಂಪುಟ ತೀರ್ಮಾನಿಸಿದೆ.

* ಮಡಿಕೇರಿಯ ಹೊದ್ದೂರು ಗ್ರಾಮದ ಬಳಿ 12.70 ಎಕರೆ ಜಮೀನಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ ನಿರ್ಮಾಣಕ್ಕಾಗಿಗುತ್ತಿಗೆ ಆಧಾರದ ಮೇಲೆ ಭೂ ಮಂಜೂರು ಮಾಡಲು ಸಂಪುಟ ಒಪ್ಪಿದೆ.

* 2014-15 ನೇ ಸಾಲಿನಲ್ಲಿ ಪ್ರಕೃತಿ ಕೋಪದಿಂದ ಹಾನಿಯಾಗಿರುವ ಬೆಳೆಗಳಿಗೆ ಪ್ರತಿ ಹೆಕ್ಟೇರ್‍ಗೆ ರು. 4000 ದಿಂದ 4500 ರು. ಪರಿಹಾರ ನೀಡಲು ಸಂಪುಟದ ತಾತ್ವಿಕ ಒಪ್ಪಿಗೆ. ಈ ಹಿಂದೆ ಆಲಿಕಲ್ಲು ಮಳೆಯಿಂದ ತೋಟಗಾರಿಕೆ ಬೆಳೆಗಳಿಗೆ ರು. 343 ಕೋಟಿ ಪರಿಹಾರವಾಗಿ ನೀಡಲಾಗಿತ್ತು. ಇದೇ ಮಾನದಂಡ ಆಧಾರವಾಗಿಟ್ಟು ಕೊಂಡು ತೋಟಗಾರಿಕೆ ಸೇರಿದಂತೆ ಇತರೆ ಬೆಳೆಗಳಿಗೂ ಪರಿಹಾರ ನೀಡುವುದು. ಪರಿಹಾರ ನೀಡುವ ಮುನ್ನ ಕಂದಾಯ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಸಹಕಾರ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಮದ ಲೆಕ್ಕಾಚಾರ ಮಾಡಬೇಕು ಎಂದು ತಿಳಿಸಲಾಗಿದೆ.

* ತೋಟಗಾರಿಕೆ ರೈತ ಉತ್ಪಾದಕ ಸಂಸ್ಥೆಗಳಿಗೆ ರು. 25 ಲಕ್ಷ ವ್ಯವಹಾರಿಕ ಬಂಡವಾಳ ಆವರ್ತನ ನಿಧಿ ಅನುದಾನದ ರೂಪದಲ್ಲಿ ನೀಡಲು ಸಂಪುಟ ಒಪ್ಪಿದೆ.

* ಸರ್.ಎಂ.ವಿಶ್ವೇಶ್ವರಯ್ಯ ರಾಷ್ಟ್ರೀಯ ನಿರ್ಮಾಣ ಅಕಾಡೆಮಿಯನ್ನು ಓಬುದೇನಹಳ್ಳಿಯಲ್ಲಿ ನಿರ್ಮಿಸಲು ಸಮ್ಮತಿಸಿರುವ ಸಂಪುಟ, ಯೋಜನೆಯ ಕಟ್ಟಡ ಮತ್ತು ಕಾಮಗಾರಿಯನ್ನು ಹಿಂದೂಸ್ಠಾನ್ ಸ್ಟೀಲ್ ಮತ್ತು ಕನ್ ಸ್ಟ್ರಕ್ಷನ್ ಸಂಸ್ಥೆಗೆ ವಹಿಸಲು ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com