ಕಸ ಸಮಸ್ಯೆಗೆ ತಿಂಗಳ ಮಟ್ಟಿಗೆ ಪರಿಹಾರ

ಕಳೆದ ಆರು ದಿನಗಳಿಂದ ಬಿಂಗಿಪುರದಲ್ಲಿ ಕಸ ಸುರಿಯಲು ಸ್ಥಳೀಯರು ವಿರೋಧಿಸಿದ್ದ ಹಿನ್ನೆಲೆಯಲ್ಲಿ ಉಂಟಾಗಿದ್ದ ಸಮಸ್ಯೆ ಕೊನೆಗೂ ತಾತ್ಕಾಲಿಕವಾಗಿ ಬಗೆಹರಿದಿದೆ. ತಿಂಗಳ ಮಟ್ಟಿಗೆ ಕಸ ಸುರಿಯಲು ಗ್ರಾಮಸ್ಥರು ಪಾಲಿಕೆಗೆ ಸಮ್ಮತಿ ನೀಡಿರುವುದರಿಂದ ಮಂಗಳವಾರದಿಂದಲೇ ಲಾರಿಗಳು ಕಸ ವಿಲೇವಾರಿ ಮಾಡಿವೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ಕಳೆದ ಆರು ದಿನಗಳಿಂದ ಬಿಂಗಿಪುರದಲ್ಲಿ ಕಸ ಸುರಿಯಲು ಸ್ಥಳೀಯರು ವಿರೋಧಿಸಿದ್ದ ಹಿನ್ನೆಲೆಯಲ್ಲಿ ಉಂಟಾಗಿದ್ದ ಸಮಸ್ಯೆ ಕೊನೆಗೂ ತಾತ್ಕಾಲಿಕವಾಗಿ ಬಗೆಹರಿದಿದೆ. ತಿಂಗಳ ಮಟ್ಟಿಗೆ ಕಸ ಸುರಿಯಲು ಗ್ರಾಮಸ್ಥರು ಪಾಲಿಕೆಗೆ ಸಮ್ಮತಿ ನೀಡಿರುವುದರಿಂದ ಮಂಗಳವಾರದಿಂದಲೇ ಲಾರಿಗಳು ಕಸ ವಿಲೇವಾರಿ ಮಾಡಿವೆ.

ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರ ಜೊತೆಗೆ ಮೇಯರ್ ಮಂಜುನಾಥರೆಡ್ಡಿ, ಸಂಸದ ಡಿ.ಕೆ. ಸುರೇಶ್, ಆಯುಕ್ತ ಕುಮಾರ್ ನಾಯಕ್ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ.

ನಗರದ ಹೊರವಲಯಗಳಲ್ಲಿ 7 ಹೊಸ ಘಟಕಗಳು ಕಾರ್ಯಾರಂಭ ಮಾಡಲಿದ್ದು, ಇದಕ್ಕೆ ಒಂದು ತಿಂಗಳ ಕಾಲಾವಕಾಶ ಬೇಕಿದೆ. ಅಷ್ಟರವರೆಗೆ ನಗರದ ಕಸವನ್ನು ಬಿಂಗಿಪುರದಲ್ಲಿ
ಹಾಕಲಾಗುವುದು. ಗ್ರಾಮದ ಸುರಕ್ಷತೆಗೆ ಕುಡಿಯುವ ನೀರು. ಆರೋಗ್ಯ ಸೇರಿದಂತೆ ಹಲವು ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಕೇವಲ ಒಂದು ತಿಂಗಳ ಕಾಲಾವಕಾಶದಲ್ಲಿ
ಎಲ್ಲ ವ್ಯವಸ್ಥೆ ಮಾಡಲಾಗುವುದು ಎಂದು ಮುಖಂಡರು ಗ್ರಾಮಸ್ಥರಿಗೆ ಭರವಸೆ ನೀಡಿದ ಬಳಿಕ ಸಮ್ಮತಿಸಿದ್ದಾರೆ.

ಉಳಿಕೆ ಕಸ ವಿಲೇವಾರಿ: ಬಿಂಗಿಪುರದಲ್ಲಿ ಈಗ ಕಸದ ಲಾರಿಗಳನ್ನು ಬಿಡಲಾಗುತ್ತಿದೆ. ಆದರೆ, ಕಳೆದ 6 ದಿನಗಳಿಂದ ದಕ್ಷಿಣ, ಬಸವನಗುಡಿ, ಬನಶಂಕರಿ, ಬೊಮ್ಮನಹಳ್ಳಿ ಹಾಗೂ ಜಯನಗರ ವಿಧಾಸಭಾ ಕ್ಷೇತ್ರಗಳ ಹೆಚ್ಚಿನ ಕಡೆಗಳಲ್ಲಿ ಕಸದ ರಾಶಿ ವಿಲೇವಾರಿಯಾಗದೆ ಉಳಿದುಕೊಂಡಿದೆ. ಬಿಬಿಎಂಪಿಯ ದಕ್ಷಿಣ ವಲಯ ಹಾಗೂ ಬೊಮ್ಮನಹಳ್ಳಿ ವಲಯದ ವ್ಯಾಪ್ತಿಯಲ್ಲಿನ ಕಸವನ್ನು ಬಿಂಗಿಪುರಕ್ಕೆ ಕಳುಹಿಸಲಾಗುತ್ತಿತ್ತು. ಗ್ರಾಮಸ್ಥರ ಪ್ರತಿಭಟನೆ ಹೆಚ್ಚಾದಾಗ ಕಸವನ್ನು ಕನ್ನಹಳ್ಳಿ, ಸಿಗೇಹಳ್ಳಿಯ ಹೊಸ ಘಟಕಗಳಿಗೆ ಕಳುಹಿಸಲಾಗುತ್ತಿದೆ. ಈ ಘಟಕಗಳು ಈಗಷ್ಟೇ ಆರಂಭವಾಗಿರುವುದರಿಂದ ನಿರ್ವಹಣೆ ಸುಲಭವಲ್ಲ. ಎರಡು ವಲಯಗಳಲ್ಲಿ 45 ಲೋಡ್ ಪ್ರಮಾಣದ ಕಸ ಉತ್ಪತ್ತಿಯಾಗುತ್ತಿದೆ. ಕನ್ನಹಳ್ಳಿ ಘಟಕ 500 ಹಾಗೂ ಸಿಗೇಹಳ್ಳಿ ಘಟಕ 150 ಟನ್
ಕಸದ ಸಾಮಥ್ರ್ಯ ಹೊಂದಿದೆ.

ಹೆಚ್ಚಿನ ಪ್ರಮಾಣದ ಕಸ ಕಳುಹಿಸುತ್ತಿರುವುದರಿಂದ ಎರಡೂ ಘಟಕಗಳಿಗೆ ಹೊರೆಯಾಗಿತ್ತು. ಈಗ ಬಿಂಗಿಪುರದಲ್ಲಿ ಒಂದು ತಿಂಗಳ  ಕಾಲಾವಕಾಶ ದೊರೆತಿರುವುದರಿಂದ, ಈ ಘಟಕಗಳ ಮೇಲಿನ ಹೊರೆ ಸದ್ಯ ತಗ್ಗಲಿದೆ. ಬಯೋಗ್ಯಾಸ್ ಘಟಕ: ಅಶೋಕ ಬಯೋಗ್ರೀನ್ ಸಂಸ್ಥೆ ಬಿಬಿಎಂಪಿ ಜೊತೆ ಒಪ್ಪಂದ ಮಾಡಿಕೊಂಡು 10 ಕಡೆಗಳಲ್ಲಿ ಬಯೋಗ್ಯಾಸ್ ಘಟಕ ಆರಂಬಿsಸಿದೆ.  ಸದಿಂದ ಮೀಥೇನ್ ಅನಿಲ ತಯಾರಿಸಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ಕೆ.ಆರ್.ಮಾರುಕಟ್ಟೆ ಹಾಗೂ ಜಯನಗರದಲ್ಲಿ ಘಟಕಗಳು ನಡೆಯುತ್ತಿವೆ. ಬೇಗೂರು ಮುಖ್ಯರಸ್ತೆ ಹಾಗೂ ಪಟ್ಟಾಬಿsರಾಮನಗರ ವಾರ್ಡ್‍ನಲ್ಲಿ ಘಟಕಗಳ ನಿರ್ಮಾಣ ಕಾರ್ಯ ಶೀಘ್ರದಲ್ಲಿ ಪೂರ್ಣವಾಗಲಿದೆ.

150 ಒಣ ತ್ಯಾಜ್ಯ ಸಂಗ್ರಹಣ ಕೇಂದ್ರ:
ನಗರದೊಳಗೆ ಕಸ ಸಂಸ್ಕರಿಸಲು ವಾರ್ಡ್ ಮಟ್ಟದಲ್ಲಿ ಒಣ ತ್ಯಾಜ್ಯ ಸಂಗ್ರಹಣೆ ಮಾಡಲಾಗುತ್ತಿ ದೆ. ಹೊಸದಾಗಿ ಆರಂಭವಾದ 9 ಕೇಂದ್ರ ಸೇರಿದಂತೆ ಒಟ್ಟು 151 ಕೇಂದ್ರಗಳು ನಗರದೊಳಗೆ ಕಾರ್ಯನಿರ್ವಹಿಸುತ್ತಿವೆ. ನಗರದಲ್ಲಿ ಉತ್ಪತ್ತಿಯಾಗುವ ಒಟ್ಟು ಕಸದಲ್ಲಿ 60 ಮೆ.ಟನ್ ಕಸ ಈ ಕೇಂದ್ರಗಳಿಗೆ ಹೋಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com