ಉದ್ಯೋಗಕ್ಕಾಗಿ ಕೃಷಿ ಡಿಪ್ಲೋಮಾ ವಿದ್ಯಾರ್ಥಿಗಳ ಪ್ರತಿಭಟನೆ

ಕೃಷಿಯಲ್ಲಿ ಡಿಪ್ಲೋಮಾ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೃಷಿಯಲ್ಲಿ ಡಿಪ್ಲೋಮಾ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ ಪ್ರತಿಭಟನೆ ನಡೆಸಿತು.

ಫ್ರೀಡಂ ಪಾರ್ಕ್‍ನಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಸಂಘದ ಸದಸ್ಯ ರಾಕೇಶ್, ಕೃಷಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ 44 ವಿವಿಗಳಿವೆ. ಕೃಷಿ ಡಿಪ್ಲೋಮಾ ಎರಡು ವರ್ಷಗಳ ಕೋರ್ಸ್ ಆಗಿದ್ದು, ಸುಮಾರು 2 ಸಾವಿರ ಮಂದಿ ವ್ಯಾಸಂಗ ಪಡೆದು ಹೊರಬಂದಿದ್ದಾರೆ.

ರೈತ ಸಂಪರ್ಕ ಕೇಂದ್ರ ಸೇರಿದಂತೆ ಕೃಷಿ ಇಲಾಖೆಯ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಈ ವಿದ್ಯಾರ್ಥಿಗಳನ್ನು ಸರ್ಕಾರ ನೇಮಕ ಮಾಡಿಕೊಳ್ಳಬೇಕಿತ್ತು. ಇಲಾಖೆಯಲ್ಲಿ 4 ಸಾವಿರಕ್ಕಿಂತಲೂ ಅಧಿಕ ಹುದ್ದೆ ಖಾಲಿಯಿದ್ದರೂ, ನೇಮಕ ಆರಂಭಿಸಿಲ್ಲ ಎಂದು ದೂರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com