
ಬೆಂಗಳೂರು: ಕೆರೆ ಜಾಗದಲ್ಲಿ ಬಿಡಿಎ ಬಡಾವಣೆ, ಇಸ್ರೋ ಕಟ್ಟಡ. ಅಷ್ಟೇ ಅಲ್ಲ, ಪ್ರಮುಖ ಬಿಲ್ಡರ್‍ಗಳ ಕಟ್ಟಡಗಳೂ ಕೆರೆ ಅಂಗಳದಲ್ಲಿ! ಇಂತದ್ದೊಂದು ಮಾಹಿತಿ ಭೂ ದಾಖಲೆ ಸರ್ವೆ ಇಲಾಖೆ ಸಿದ್ಧಪಡಿಸಿರುವ ವರದಿಯಲ್ಲಿ ದಾಖಲಾಗಿದೆ.
ಕರ್ನಾಟಕ ವಿಧಾನಸಭೆಯ ಸಮಿತಿಯ ನಿರ್ದೇಶದಂತೆ ಸಿದ್ದಪಡಿಸಲಾಗುತ್ತಿರುವ ವರದಿಯಲ್ಲಿ ಈ ಅಂಶಗಳು ಅಡಕವಾಗಿದ್ದು, ಆರ್‍ಎಂವಿ ಬಡಾವಣೆ ಎರಡನೇ ಹಂತದಲ್ಲಿರುವ ಇಸ್ರೋ ಕಚೇರಿ ಸಹ ಕೆರೆ ವ್ಯಾಪ್ತಿಯಲ್ಲಿ ಬರುತ್ತದೆ. ಇಡೀ ಆರ್‍ಎಂವಿ ಬಡಾವಣೆಯ ಎರಡನೇ ಹಂತವನ್ನು ಬಿಡಿಎ ಅಬಿsವೃದಿಟಛಿಪಡಿಸಿದೆ. ಅದಷ್ಟೂ ಕೆರೆ ಜಾಗವಾಗಿದೆ. ಪ್ರಮುಖ ರಾಜಕಾರಣಿಗಳ ಮನೆಗಳೂ ಕೆರೆ ಜಾಗದಲ್ಲಿ ಬರುತ್ತವೆ ಎಂದು ಅಂದಾಜಿಸಲಾಗಿದೆ. ಪ್ರಮುಖ ಬಿಲ್ಡರ್ ಗಳಾದ ಪ್ರೆಸ್ಟೀಜ್ ಮತ್ತು ಬ್ರಿಗೇಡ್ ಹೆಸರೂ ಸಹ ಒತ್ತುವರಿ ಪಟ್ಟಿಯಲ್ಲಿ ಸೇರಿದೆ.
ಬ್ರಿಗೇಡ್ ಗ್ರೂಪ್ ಹುಸ್ಕೂರು ಕೆರೆಗೆ ಸೇರಿದ 16 ಗುಂಟೆ ಜಾಗ ಮತ್ತು ಪ್ರೆಸ್ಟಿಜ್ ಗ್ರೂಪ್ ಹರಳೂರು ಕೆರೆಯ ನಾಲ್ಕು ಗುಂಟೆ ಜಾಗ ಒತ್ತುವರಿ ಮಾಡಿಕೊಂಡಿರುವುದು ವರದಿಯಲ್ಲಿ ದಾಖಲಾಗಿದೆ. ಈ ಎರಡೂ ಕೆರೆಗಳು ಬೆಂಗಳೂರು ನಗರ ಜಿಲ್ಲೆಯ ಪೂರ್ವ ತಾಲೂಕಿನ ವ್ಯಾಪ್ತಿಗೆ ಬರುತ್ತದೆ. ರೇಖಾಚಿತ್ರಗಳ ಮೂಲಕ ಅತಿಕ್ರಮಣವನ್ನು ಪತ್ತೆ ಹಚ್ಚಲಾಗಿದ್ದು, ಒತ್ತುವರಿದಾರರ ಪಟ್ಟಿಯಲ್ಲಿ ಆದರ್ಶ ಡೆವಲಪರ್ಸ್ , ದಿವ್ಯಶ್ರೀ ಟೆಕ್ ಪಾರ್ಕ್‍ನ ಹೆಸರೂ ಇದೆ. ಇನ್ನೂ ಅಚ್ಚರಿ ಎಂದರೆ, ಒಟ್ಟಾರೆ ಎರಡು ಜಿಲ್ಲೆಗಳಲ್ಲಿ 4205 ಕೆರೆಗಳ ಜಾಗವನ್ನು ಪತ್ತೆ ಹಚ್ಚಲಾಗಿದ್ದು, ಈ ಪೈಕಿ 1500 ಕೆರೆಗಳ ರೇಖಾಚಿತ್ರಗಳನ್ನು ವೆಬ್‍ಸೈಟ್‍ನಿಂದ ಈಗಾಗಲೇ ಡೌನ್‍ಲೋಡ್ ಮಾಡಲಾಗಿದೆ.
Advertisement