ಜನ ಬೆಂಬಲ ಇದ್ದರೂ ಕಾಯ್ದೆ ರಚನೆಗೆ ಸರ್ಕಾರದ ಹಿಂದೇಟು: ನಿಡುಮಾಮಿಡಿ ಶ್ರೀ

ಸಂಶೋಧಕ ಪ್ರೊ.ಎಂ.ಎಂ. ಕಲಬುರ್ಗಿ ಅವರ ಹತ್ಯೆ ಹಿನ್ನೆಲೆಯಲ್ಲಿ ಕರ್ನಾಟಕ ಮೌಢ್ಯಾಚರಣೆ ಪ್ರತಿ ಬಂಧಕ ಕಾಯ್ದೆಯನ್ನು ಜಾರಿಗೆ ತರಬೇಕು...
ನಿಡುಮಾಮಿಡಿ ಮಠದ ಚನ್ನಮಲ್ಲ ವೀರಭದ್ರ ಸ್ವಾಮೀಜಿ
ನಿಡುಮಾಮಿಡಿ ಮಠದ ಚನ್ನಮಲ್ಲ ವೀರಭದ್ರ ಸ್ವಾಮೀಜಿ

ಬೆಂಗಳೂರು: ಸಂಶೋಧಕ ಪ್ರೊ.ಎಂ.ಎಂ. ಕಲಬುರ್ಗಿ ಅವರ ಹತ್ಯೆ ಹಿನ್ನೆಲೆಯಲ್ಲಿ ಕರ್ನಾಟಕ ಮೌಢ್ಯಾಚರಣೆ ಪ್ರತಿ ಬಂಧಕ ಕಾಯ್ದೆಯನ್ನು ಜಾರಿಗೆ ತರಬೇಕು. ಈ ಕಾಯ್ದೆ ಜಾರಿ ಬಗ್ಗೆ ವಿರೋಧ ವ್ಯಕ್ತವಾದರೂ ಸರ್ಕಾರ ಯಾವುದೇ ಕಾರಣಕ್ಕೂ ಹಿಂಜರಿಯಬಾರದು ಎಂದು ನಿಡುಮಾಮಿಡಿ ಮಠದ ಚನ್ನಮಲ್ಲ ವೀರಭದ್ರ ಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದರು.

ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೌಢ್ಯಾಚರಣೆ  ಪ್ರತಿಬಂಧಕ ಕಾಯ್ದೆ ಜಾರಿಗೆ ತರಲು ಸರ್ಕಾರ ಮುಂದಾಗಿತ್ತು.ಈ ನಡುವೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಯ್ದೆ ಜಾರಿ ಮೊಡಕುಗೊಂಡಿತ್ತು. ಆದರೆ ಕಲಬುರ್ಗಿ ಅವರ ಹತ್ಯೆ ನಂತರ ಈ ಕಾಯ್ದೆ ಜಾರಿಗೆ ಸಾಕಷ್ಟು ಒತ್ತಾಯಗಳು ಬರುತ್ತಿವೆ. ರಾಜ್ಯಾದ್ಯಂತ ಜನಾಭಿಪ್ರಾಯ ಪ್ರಬಲವಾಗಿ ಕೇಳಿಬರುತ್ತಿದೆ. ಆದ್ದರಿಂದ ಸರ್ಕಾರ ಕೂಡಲೇ ಕಾಯ್ದೆ ಜಾರಿಗೆ ತರಬೇಕು ಎಂದರು.

ಇಷ್ಟೆಲ್ಲಾ ಜನಬೆಂಬಲ ವ್ಯಕ್ತ ವಾಗುತ್ತಿದ್ದರೂ ಕಾಯ್ದೆ ರಚನೆಗೆ ಸರ್ಕಾರ ಇನ್ನೂ ಹಿಂದೇಟು ಹಾಕುತ್ತಿದೆ. ಹಾಗಾಗಿ ಈ ಬಗ್ಗೆ ಚರ್ಚಿಸಲು ಕಾನೂನು ಜಾರಿಗೆ ಆಗ್ರಹಿಸಲು ಸಭೆ ಕರೆಯಲಾಗಿದೆ. ಅಕ್ಟೋಬರ್ 4 ರಂದು ಸಂಜೆ ಬಸವನಗುಡಿಯ ನಿುಮಾಮಿಡಿ ಮಠದಲ್ಲಿ ಸಭೆ ನಡೆಯಲಿದೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರಗತಿಪರ ಚಿಂತಕರು, ವಕೀಲರು ಸೇರಿದಂತೆ ಪ್ರಮುಖರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆ ನಂತರ ಕ್ರಿಯಾ ಸಮಿತಿ ರಚಿಸಲಾಗುವುದು. ಈ ಬಗ್ಗೆ ಜನಾಭಿಪ್ರಾಯ ಸಂಘಟನೆ ಅಧ್ಯಕ್ಷೆ ಕೆ.ಎಸ್ ವಿಮಲಾ ಮಾತನಾಡಿ ಮಹಿಳೆಯರು ಮತ್ತು ಮಕ್ಕಳು ಈ ಮೌಢ್ಯದಿಂದ ಬಂಧಿತರಾಗಿದ್ದು, ಇದರಿಂದ ಅವರನ್ನು ಬಿಡುಗಡೆ ಮಾಡಬೇಕು. ಹಾಗಾಗಿ ಕೂಡಲೇ ಸರ್ಕಾರ ಈ ಕಾಯ್ದೆ  ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com