ಸ್ತ್ರೀ ಪರಂಪರೆ ಶ್ರೀಮಂತವಾದುದು: ಮೀನಾ ಚಂದಾವರ್ಕರ್
Published: 13th December 2015 02:00 AM | Last Updated: 13th December 2015 11:46 AM | A+A A-

ನಗರದಲ್ಲಿ ಶನಿವಾರ ನಡೆದ ಪ್ರಾಚೀನ ಕರ್ನಾಟಕದಲ್ಲಿ ಶಾಸನೋಕ್ತ ಸ್ತ್ರೀ ಸಮಾಜ ಎಂಬ ವಿಷಯದ ವಿಚಾರಸಂಕೀರಣದಲ್ಲಿ ಡಾ. ಮೀನಾ ರಾ. ಚಂದಾವರಕರ್ ಮತ್ತು ಸಾಹಿತಿ ಜೋತ್ಸ್ನಾ ಕಾಮತ್ ಉಪಸ್ಥಿತರಿ
ರಾಜವಂಶ ಅಥವಾ ಉನ್ನತ ವರ್ಗದ ಮಹಿಳೆಯರ ಸಾಮಾಜಿಕ ಜೀವನದಲ್ಲಿ ಬೆಳಕು ಬೀರಿರುವ ಅಂಶಗಳು ಇಂದಿಗೂ ಲಭ್ಯವಾಗಿವೆ. ಆ ಕಾಲದಲ್ಲಿ ಮಹಿಳೆಯರಿಗೆ ಸಿಕ್ಕ ಬಿರುದುಗಳನ್ನು ಗಮನಿಸಿದರೆ, ಮಹಿಳೆಯರಿಗೆ ಅಕ್ಷರ ಶಿಕ್ಷಣಕ್ಕಿಂತ, ಕಲಾ ಶಿಕ್ಷಣಕ್ಕೆ ಹೆಚ್ಚಿನ ಮಾನ್ಯತೆ ದೊರಕಿತ್ತು ಎಂಬುದು ಸ್ಪಷ್ಟವಾಗುತ್ತದೆ ಎಂದು ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಮೀನಾ ಆರ್ ಚಂದಾವರ್ಕರ್ ಅಭಿಪ್ರಾಯಪಟ್ಟರು.
ನಗರದ ಮಿಥಿಕ್ ಸೊಸೈಟಿಯಲ್ಲಿ ಶನಿವಾರ ಆಯೋಜಿಸಿದ್ದ ಎರಡು ದಿನಗಳ `ಪ್ರಾಚೀನ ಕರ್ನಾಟಕದ ಶಾಸನೋಕ್ತ ಸ್ತ್ರೀ ಸಮಾಜ' ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ``ಧಾರ್ಮಿಕ ಕ್ಷೇತ್ರದಲ್ಲಿ ತೊಡ ಗಿಸಿಕೊಳ್ಳುತ್ತಿದ್ದ ಮಹಿಳೆಯರು ಕೀರ್ತಿಗೆ ಪ್ರೇರಕವಾಗಿ ಧರ್ಮಪ್ರೇಮಿಗಳಾಗಿದ್ದರು. ಆತ್ಮಬಲಿದಾನ ಅವರಿಗೆ ಶ್ರೇಷ್ಠ ವಿಚಾರವಾಗಿತ್ತು. ಅನ್ನದಾಸೋಹದಂತಹ ಜನಹಿತ ಕಾರ್ಯಗಳಲ್ಲಿ ಆಸಕ್ತಿ ತಳೆದಿದ್ದರು. ಆದರೆ, ಆ ಸಮಾಜದಲ್ಲಿ ಪುತ್ರನಿಗಿರುವ ಸ್ಥಾನ ಪುತ್ರಿಗೆ ಇರಲಿಲ್ಲ. ಅಂತರ್ಜಾತಿ ವಿವಾಹ, ಬಹುಪತ್ನಿತ್ವಕ್ಕೆ ಸಾಮಾಜಿಕ ಮನ್ನಣೆ ಇತ್ತು. ಉನ್ನತ ವರ್ಗದ ಮಹಿಳೆಯರಲ್ಲಿ ದಾನಪ್ರವೃತ್ತಿ ಹೆಚ್ಚಾಗಿತ್ತು. ಯಾವುದೇ ಆರ್ಥಿಕ ಸ್ವಾತಂತ್ರ ್ಯವಿಲ್ಲ ದಿರುವಾಗಲೂ ದಾನ ಪ್ರವೃತ್ತಿ ಮೈಗೂಡಿಸಿಕೊಂಡ ಮಹಿಳೆಯರ ಗುಣ ಶ್ಲಾಘನೀಯ,'' ಎಂದರು.
ಸಂಶೋಧಕಿ ಡಾ.ಜ್ಯೋತ್ಸಾನ ಕಾಮತ್ ಮಾತನಾಡಿ, ಪ್ರಸ್ತುತ ಸಮಾಜದಲ್ಲಿನ ಕ್ಷೋಭೆ, ಹಿಂಸೆ, ಅತ್ಯಾಚಾರಗಳಿಗೆ ಮಹಿಳೆಯರು ಹಾಗೂ ಮಕ್ಕಳೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಏರುಪೇರಾದ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯೇ ಇದಕ್ಕೆ ಕಾರಣ. ಸ್ತ್ರೀಯರ ಶಕ್ತಿಯನ್ನು ಹತ್ತಿಕ್ಕುವ ಕಾರ್ಯ ನಡೆಯುತ್ತಿರುವುದು ದುರಂತ. ದೇಶದ ಮೆಟ್ರೋ ಸಂಸ್ಕೃತಿ ಒಂದೆ ಆಗಿದ್ದರೂ, ಮಧ್ಯಮ ಹಾಗೂ ಬಡವರ್ಗದ ಮಹಿಳೆಯರ ಜನಜೀವನ ಕಷ್ಟಕರವಾಗಿದೆ ಎಂದರು. ವೇದಿಕೆಯಲ್ಲಿ ದಿ ಮಿಥಿಕ್ ಸೊಸೈಟಿ ಅಧ್ಯಕ್ಷ ಡಾ.ಎಂ.ಕೆ.ಎಲ್.ಎನ್.ಶಾಸ್ತ್ರಿ, ಸಂಕಿರ
ಣದ ಸಂಚಾಲಕಿ ಡಾ.ಕೆ.ವಸಂತಲಕ್ಷ್ಮೀ ಉಪಸ್ಥಿತರಿದ್ದರು.
ವೇದಕಾಲದಲ್ಲಿ ಮಹಿಳೆಯರಿಗೆ ಆದ್ಯತೆ : ಜನತೆಯ ಚಾರಿತ್ರ್ಯ, ಸಂಸ್ಕೃತಿ, ಸೃಜನಶೀಲ ಸಾಮಥ್ರ್ಯ, ಕಾರ್ಯಕ್ಷಮತೆ ದೇಶದ ಆಸ್ತಿ. ಮಾನವ ಸಂಪನ್ಮೂಲದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಬಹು ದೊಡ್ಡದು. ದೇಶದ ಪ್ರಗತಿಯಲ್ಲಿ ನಮ್ಮ ಕೊಡುಗೆಯ ಕುರಿತು ಚಿಂತನೆ ಅಗತ್ಯ. ಮಾನವೀಯ ಸಂಬಂಧ ಹಾಗೂ ವೈಚಾರಿಕ ಸಾಮಥ್ರ್ಯ ಹಂಚಿಕೆಯಲ್ಲಿ ಮಹಿಳೆಯರ ಕೊಡುಗೆ ಅಪಾರ. ವೇದ ಕಾಲದಲ್ಲಿ ಮಹಿಳೆಯರಿಗೆ ದೊರೆತ ಸ್ಥಾನಮಾನ ಪುರಾಣ ಕಾಲದಲ್ಲಿ ಲಭ್ಯವಾಗಿರಲಿಲ್ಲ ಎಂದು ಮೀನಾ ಚಂದಾವರ್ಕರ್ ವಿಷಾದ ವ್ಯಕ್ತಪಡಿಸಿದರು.