ಬೆಂಗಳೂರಿನ ಹಲವು ಮನೆಗಳಿಗೆ ಶೀಘ್ರದಲ್ಲೇ ಕೊಳವೆ ಮೂಲಕ ಅಡುಗೆ ಅನಿಲ ಪೂರೈಕೆ

ಮುಂದಿನ ತಿಂಗಳಿನಿಂದ ಬೆಂಗಳೂರಿನ ಹಲವು ಮನೆಗಳಿಗೆ ಕೊಳವೆ ಮೂಲಕ ಅಡುಗೆ ಅನಿಲ(ಪಿಎನ್ ಜಿ) ಪೂರೈಕೆಯಾಗಲಿದ್ದು ಸಿಲೆಂಡರ್ ಬಳಕೆ ಅಗತ್ಯ ಇರುವುದಿಲ್ಲ.
ಕೊಳವೆ ಮೂಲಕ ಅಡುಗೆ ಅನಿಲ (ಸಂಗ್ರಹ ಚಿತ್ರ)
ಕೊಳವೆ ಮೂಲಕ ಅಡುಗೆ ಅನಿಲ (ಸಂಗ್ರಹ ಚಿತ್ರ)

ಬೆಂಗಳೂರು: ಮುಂದಿನ ತಿಂಗಳಿನಿಂದ ಬೆಂಗಳೂರಿನ ಹಲವು ಮನೆಗಳಿಗೆ ಕೊಳವೆ ಮೂಲಕ ಅಡುಗೆ ಅನಿಲ(ಪಿಎನ್ ಜಿ) ಪೂರೈಕೆಯಾಗಲಿದ್ದು ಸಿಲೆಂಡರ್ ಬಳಕೆ ಅಗತ್ಯ ಇರುವುದಿಲ್ಲ. ಭಾರತೀಯ ಅನಿಲ ಪ್ರಾಧಿಕಾರ (ಜಿಐಎಎಲ್) ದ ಪಿಎನ್ ಜಿ ಯೋಜನೆಯ ಮೊದಲ ಹಂತದಲ್ಲಿ ಬಿಇಎಲ್ ಟೌನ್ ಶಿಪ್ ಹಾಗೂ ಹೆಚ್ ಎಸ್ ಆರ್ ಲೇ ಔಟ್ ನ ಮನೆಗಳಿಗೆ ಅಡುಗೆ ಅನಿಲ ಪೈಪ್ ಮೂಲಕ ಪೂರೈಕೆಯಾಗಲಿದೆ.
2020 ವೇಳೆಗೆ ನಗರದ 1.35 ಲಕ್ಷ ಮನೆಗಳಿಗೆ ಪೈಪ್ ಮೂಲಕ ಅಡುಗೆ ಅನಿಲ ಪೂರೈಕೆಯಾಗಲಿದೆ ಎಂದು  ಭಾರತೀಯ ಅನಿಲ ಪ್ರಾಧಿಕಾರ (ಜಿಐಎಎಲ್)ದ ಸಿಇಒ ಪಂಕಜ್ ಕುಮಾರ್ ಪಾಲ್ ಸಂದರ್ಶನವೊಂಡರಲ್ಲಿ ಹೇಳಿದ್ದಾರೆ.
ಈ ಯೋಜನೆ ನಗರದಾದ್ಯಂತ ಸಂಪೂರ್ಣ ಜಾರಿಗೊಳ್ಳುವುದಕ್ಕೆ  25 ವರ್ಷ ತೆಗೆದುಕೊಳ್ಳುತ್ತದೆ. ದಾಭೋಲ್ ನಿಂದ ಬೆಂಗಳೂರಿನ ವರೆಗೆ ಕೊಳವೆ ಅನಿಲ ಮಾರ್ಗ ಸಂಪೂರ್ಣವಾಗಿದೆ. ಹೆಚ್ ಎಸ್ ಆರ್ ಲೇಔಟ್, ಬೆಳ್ಳಂದೂರು, ಕಾಡಬಿಸನಹಳ್ಳಿ ಹಾಗೂ ಬಿಇಎಲ್ ಕಾಲೋನಿಯಲ್ಲಿ ಸುಮಾರು 100 ಕಿ.ಮಿ ನಷ್ಟು ಕೊಳವೆ ಅಳವಡಿಕೆ ಕಾರ್ಯ ಮುಕ್ತಾಯವಾಗಿದ್ದು ಮಾರ್ಚ್ 31 ರ ಒಳಗೆ 1,250 ಮನೆಗಳಿಗೆ ಕೊಳವೆ ಮೂಲಕ ಅಡುಗೆ ಅನಿಲ( ಪಿಎನ್ ಜಿ) ಪೂರೈಕೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com