ಮಂಗಳೂರಿನ ಅಕ್ಷರ ಸಂತ ಹರೇಕಳ ಹಾಜಬ್ಬಗೆ ಹೊಸ ಮನೆ ಉಡುಗೊರೆ

ಅಕ್ಷರ ಸಂತ ಎಂದೇ ಪ್ರಸಿದ್ಧವಾಗಿರುವ ಮಂಗಳೂರಿನ ಹರೇಕಳ ಹಾಜಬ್ಬ ಅವರಿಗೆ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಹೊಸ ಮನೆಯೊಂದನ್ನು ...
ಹರೇಕಳ ಹಾಜಬ್ಬ
ಹರೇಕಳ ಹಾಜಬ್ಬ

ಮಂಗಳೂರು: ಅಕ್ಷರ ಸಂತ ಎಂದೇ ಪ್ರಸಿದ್ಧವಾಗಿರುವ ಮಂಗಳೂರಿನ ಹರೇಕಳ ಹಾಜಬ್ಬ ಅವರಿಗೆ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಹೊಸ ಮನೆಯೊಂದನ್ನು ನಿರ್ಮಿಸಿಕೊಟ್ಟಿದೆ.

ಮಂಗಳೂರಿನ ಬಸ್ ನಿಲ್ದಾಣದಲ್ಲಿ ಕಿತ್ತಳೆ ಹಣ್ಣಿನ ವ್ಯಾಪಾರ ಮಾಡಿ ತನಗೆ ಬಂದ ಪ್ರತಿಯೊಂದು ರೂಪಾಯಿ ಹಣವನ್ನು ಊರಿನ ಸರ್ಕಾರಿ ಶಾಲೆಗೆ ವ್ಯಯಿಸಿದ್ದಾರೆ. ಜೊತೆಗೆ ತಮಗೆ ಲಭಿಸಿದ ಪ್ರಶಸ್ತಿ ಪುರಸ್ಕಾರಗಳ ಮೊತ್ತವನ್ನೆಲ್ಲಾ ತನ್ನ ಊರಿನ ಶಾಲೆಗೆ ನೀಡಿದ್ದಾರೆ.

ಇದ್ದ ಬದ್ದ ಹಣವನ್ನೆಲ್ಲಾ ಸರ್ಕಾರಿ ಶಾಲೆಗೆ ಸುರಿದ ಹಾಜಬ್ಬ ತನ್ನ ವಾಸಕ್ಕೆ ಯೋಗ್ಯವಾದ ಮನೆಯನ್ನು ಹೊಂದುವುದು ಸಾಧ್ಯವಾಗಿರಲಿಲ್ಲ. ತನಗೊಂದು ಹೊಸ ಮನೆಯನ್ನು ಕಟ್ಟಿಕೊಳ್ಳುವ ಯೋಚನೆಯನ್ನೇ ಹಾಜಬ್ಬ ಮಾಡಿರಲಿಲ್ಲ. ಮಂಗಳೂರಿನ ಯುನೈಟೆಡ್ ಕ್ರಿಶ್ಚಿಯನ್ ಅಸೊಶಿಯೇಶನ್ ಸಂಘಟನೆ ನೇತೃತ್ವದಲ್ಲಿ ಹಾಜಬ್ಬರಿಗೆ ಸುಮಾರು 17 ಲಕ್ಷ ರುಪಾಯಿ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಿಕೊಟ್ಟಿದೆ.

ಯುನೈಟೆಡ್ ಕ್ರಿಶ್ಚಿಯನ್ ಎಸೊಶೀಯೇಶನ್ ಹಲವರಿಗೆ ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಹಾಜಬ್ಬ ಅವರಿಗೆ ಮನೆ ಕಟ್ಟಿಕೊಡಲು ಯುನೈಟೆಡ್ ಕ್ರಿಶ್ಚಿಯನ್ ಎಸೊಶೀಯೇಶನ್ ಗೆ ಹಲವು ಸ್ಥಳೀಯರು ಸುಮಾರು 1.5 ಲಕ್ಷ ರೂ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಹಾಜಬ್ಬ ಅವರು ತಮ್ಮ ಊರಿನ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗೆ ಹೊಸ ಕಟ್ಟಡ ನಿರ್ಮಿಸಲು ಜಾಗವೊಂದನ್ನು ಖರೀದಿಸಿದ್ದಾರೆ. ಪ್ರೌಢಾ ಶಾಲೆ ಮಕ್ಕಳಿಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಟ್ಟಿರುವ ಹಾಜಬ್ಬ ಮುಂದೆ ಪಿಯು ಕಾಲೇಜು ಸ್ಥಾಪಿಸುವ ಉದ್ದೇಶ ಹೊಂದಿದ್ದಾರೆ.

ತಾವು ಬದುಕಿರುವಷ್ಟು ದಿನವೂ ಮಕ್ಕಳ ಶಿಕ್ಷಣಕ್ಕಾಗಿ ಸಹಾಯ ಮಾಡುವುದು ತಮ್ಮ ಕನಸಾಗಿದೆ ಎಂದು ಹಾಜಬ್ಬ ತಿಳಿಸಿದ್ದಾರೆ.
.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com