ಕಸದ ಟಿಪ್ಪರ್ ಗೆ ಬಿಬಿಎಂಪಿ ಪೌರ ಕಾರ್ಮಿಕ ಬಲಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುತ್ತಿಗೆ ನೌಕರ ಲಾರಿಯಿಂದ ಕಸ ಸುರಿಯುವಾಗ ಸಾವನ್ನಪ್ಪಿರುವ ಘಟನೆ ನಡೆದಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುತ್ತಿಗೆ ನೌಕರ ಲಾರಿಯಿಂದ ಕಸ ಸುರಿಯುವಾಗ ಸಾವನ್ನಪ್ಪಿರುವ ಘಟನೆ ನಡೆದಿದೆ.

ನರಸಪ್ಪ ಮೃತ ವ್ಯಕ್ತಿ, ಪೀಣ್ಯದಲ್ಲಿ ಟಿಪ್ಪರ್ ಲಾರಿ ಕಸವನ್ನು ಡಂಪ್ ಮಾಡುತಿತ್ತು. ಈ ವೇಳೆ ಟಿಪ್ಪರ್ ಲಾರಿ ರಿವರ್ಸ್ ತೆಗೆದುಕೊಳ್ಳುವಾಗ ನರಸಪ್ಪ ಆಯತಪ್ಪಿ ಟಿಪ್ಪರ್ ನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ.

ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ನರಸಪ್ಪ ಸಾವನ್ನಪ್ಪಿದ್ದಾನೆ. 2012 ರಲ್ಲೂ ದೊಡ್ಡ ನಾನ ಮಂಗಲದಲ್ಲೂ ಇದೇ ರೀತಿ ಘಟನೆ ನಡೆದು ಬಿಬಿಎಂಪಿ ಲಾರಿ ಚಾಲಕ ಲಿಂಗಮಯ್ಯ ಸಾವನ್ನಪ್ಪಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com