ಕೆರೆಯಲ್ಲಿ ಮುಳುಗಿ 3 ವಿದ್ಯಾರ್ಥಿಗಳ ದುರ್ಮರಣ

ಶಾಲೆಗೆ ರಜೆ ನಿಮಿತ್ತ ಈಜಲು ತೆರಳಿದ್ದ ಏಳನೇ ತರಗತಿಯ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ...
ನೀರಿನಲ್ಲಿ ಮುಳುಗಿ ಸಾವು(ಸಾಂದರ್ಭಿಕ ಚಿತ್ರ)
ನೀರಿನಲ್ಲಿ ಮುಳುಗಿ ಸಾವು(ಸಾಂದರ್ಭಿಕ ಚಿತ್ರ)
Updated on

ಉರುಳುಗೆರೆ(ತುಮಕೂರು): ಶಾಲೆಗೆ ರಜೆ ನಿಮಿತ್ತ ಈಜಲು ತೆರಳಿದ್ದ ಏಳನೇ ತರಗತಿಯ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಉರುಳುಗೆರೆ ಗ್ರಾಮದ ಸಮೀಪವಿದ್ದ ಕೆರೆಯಲ್ಲಿ ಮೂವರು ಬಾಲಕರು ತೆರಳಿದ್ದು ಮೃತಪಟ್ಟಿದ್ದಾರೆ.

ಮೃತ ಬಾಲಕರು 13 ವರ್ಷದವರಾಗಿದ್ದು ವೇಣು, ಶಶಿಧರ್ ಹಾಗೂ ಚೇತನ್ ಎಂದು ಗುರುತಿಸಲಾಗಿದೆ. ಇವರೆಲ್ಲಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದರು.

ಸಿಎಸ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com