
ಉಳ್ಳಾಲ: ಹಾಸನದಿಂದ ಮಂಗಳೂರಿನಗೆ ಬೈಕ್ ನಲ್ಲಿ ಲಾಂಗ್ ಡ್ರೈವ್ ಗೆ ಹೋಗಿದ್ದ ಆರು ಮಂದಿ ಯುವಕರ ಪೈಕಿ ನಾಲ್ವರು ಯುವಕರು ಮಂಗಳೂರಿನ ಸೋಮೇಶ್ವರ ಬೀಚ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಹಾಸನ ಮೂಲದ ಆರು ಮಂದಿ ಯುವಕರು 3 ಬೈಕ್ ಗಳಲ್ಲಿ 6 ಮಂದಿ ಯುವಕರು ಮಂಗಳೂರಿನ ಉಳ್ಳಾಲದ ದರ್ಗಾವೊಂದಕ್ಕೆ ತೆರಳಿದ್ದರು. ದರ್ಗಾಗೆ ತೆರಳುವ ಮುನ್ನ ಮಂಗಳೂರಿನ ಸೋಮೇಶ್ವರ ಬೀಚ್ ನಲ್ಲಿ ಸ್ನಾನಕ್ಕೆ ಇಳಿದಿದ್ದಾರೆ. ಈ ವೇಳೆ ಅಲೆಗಳ ರಭಸಕ್ಕೆ ನಾಲ್ವರು ಯುವಕರು ಕೊಚ್ಚಿ ಹೋಗಿದ್ದಾರೆ. ಉಳ್ಳಾಲ ಜೀವರಕ್ಷಕ ಸಿಬ್ಬಂದಿ ಶವಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮೃತರನ್ನು ಇಮ್ರಾನ್, ಖಲೀಲ್, ಹನೀಫ್ ಹಾಗೂ ಮೊಹಮ್ಮದ್ ಎಂದು ಗುರುತಿಸಲಾಗಿದೆ.
Advertisement