28ಕ್ಕೆ ಕಸಾಪ ಚುನಾವಣೆ: ಅಭ್ಯರ್ಥಿಗಳಿಂದ ಮತಯಾಚನೆ

ಇದೀಗ ಕನ್ನಡ ಸಾಹಿತ್ಯಾಭಿಮಾನಿಗಳ ದೃಷ್ಟಿ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಮೇಲೆ ನೆಟ್ಟಿದೆ. ಪರಿಷತ್ತಿನ 25ನೇ ಅಧ್ಯಕ್ಷ ಸ್ಥಾನಕ್ಕೆ...
ಬೆಂಗಳೂರಿನಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಕಚೇರಿ
ಬೆಂಗಳೂರಿನಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಕಚೇರಿ

ಬೆಂಗಳೂರು: ಇದೀಗ ಕನ್ನಡ ಸಾಹಿತ್ಯಾಭಿಮಾನಿಗಳ ದೃಷ್ಟಿ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಮೇಲೆ ನೆಟ್ಟಿದೆ. ಪರಿಷತ್ತಿನ 25ನೇ ಅಧ್ಯಕ್ಷ ಸ್ಥಾನಕ್ಕೆ ಇದೇ ತಿಂಗಳ 28ರಂದು ನಡೆಯಲಿರುವ ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ 14 ಮಂದಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

ಹತ್ತು ಹಲವು ಪ್ರಣಾಳಿಕೆಗಳನ್ನು ಹೊತ್ತು ಅಭ್ಯರ್ಥಿಗಳು ತಮ್ಮದೇ ಆದ ರೀತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಅಂಚೆ ಇಲಾಖೆ, ಎಸ್ಸೆಮ್ಮೆಸ್ಸು, ವಾಟ್ಸಾಪ್, ಕಾರ್ಯಕರ್ತರು, ಭಿತ್ತಿಪತ್ರಗಳು, ವಾಯ್ಸ್ ಎಸ್ಸೆಮ್ಮೆಸ್, ಜಾಹೀರಾತು, ಸಾಮಾಜಿಕ ಜಾಲತಾಣ, ಅಂತರ್ಜಾಲ ಹೀಗೆ ಯಾವೆಲ್ಲ ಮುಖೇನ ಸಾಧ್ಯತೆಯಿದೆಯೋ ಅವುಗಳ ಮೂಲಕ ಪ್ರಚಾರ ಮಾಡಿ ಮತಯಾಚಿಸುತ್ತಿದ್ದಾರೆ.
ಈ ಬಾರಿ ಚುನಾವಣಾ ಕಣದಲ್ಲಿ ಡಾ.ಮನು ಬಳಿಗಾರ್, ನಿವೃತ್ತ ಪ್ರಾಧ್ಯಾಪಕ ಜಯಪ್ರಕಾಶ್ ಗೌಡ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪಟೇಲ್ ಪಾಂಡು ಮೊದಲಾದವರಿದ್ದಾರೆ.

28ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾನದ ಬಳಿಕ ಮತ ಎಣಿಕೆ ಆರಂಭವಾಗಲಿದೆ. ಮಾರ್ಚ್ 1ರಂದು ಅಂಚೆ ಮತ ಪತ್ರಗಳನ್ನು ಸ್ವೀಕರಿಸಲು ಕಡೆಯ ದಿನವಾಗಿದೆ. ಮಾರ್ಚ್ 2ರಂದು ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಫಲಿತಾಂಶ ಘೋಷಣೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com