ಬಾಂಬ್ ಇದೆ ಎಂದು ಹೇಳಿ ಸಿಎಂ ಸಿದ್ದರಾಮಯ್ಯ ಕಡೆಗೆ ಕವರ್ ಎಸೆದ ಅಪರಿಚಿತ

ಬಾಂಬ್ ಇದೆ ಎಂದು ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಡೆಗೆ ವಸ್ತುವೊಂದನ್ನು ಎಸೆದ ಅಪರಿಚಿತ ವ್ಯಕ್ತಿಯನ್ನು ಪೊಲೀಸರು...
ಸಿಎಂ ಕಡೆಗೆ ಕವರ್ ಎಸೆದ ಪ್ರಸಾದ್-ಸಿಎಂ ಸಿದ್ದರಾಮಯ್ಯ
ಸಿಎಂ ಕಡೆಗೆ ಕವರ್ ಎಸೆದ ಪ್ರಸಾದ್-ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಬಾಂಬ್ ಇದೆ ಎಂದು ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಡೆಗೆ ವಸ್ತುವೊಂದನ್ನು ಎಸೆದ ಅಪರಿಚಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿಗಳು ಭಾಷಣ ಮಾಡುತ್ತಿದ್ದ ವೇಳೆ, ಇದು ಬಾಂಬ್ ಎಂದು ಹೇಳಿ, ಕೈಯಲ್ಲಿದ್ದ ಕವರೊಂದನ್ನು ಸಿಎಂ ಕಡೆಗೆ ಎಸೆದಿದ್ದಾನೆ.
ತಕ್ಷಣ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಸವಿತಾ ಸಮಾಜದ ಬಿ ಹೆಚ್ ಪ್ರಸಾದ್ ಎಂದು ತಿಳಿದು ಬಂದಿದೆ. ಬಾಲ್ಕಾನಿಯಲ್ಲಿ ನಿಂತು ನಮ್ಮ ಸಮಾಜಕ್ಕೆ ನೀವು ಏನು ಮಾಡಿದ್ದೀರಿ ಎಂದು ಹೇಳಿ, ಆಮೇಲೆ ನೀವು ಮಾತಾಡಿ ಎಂದು ಕಿರುಚಾಡಿದ್ದಾನೆ. ಆದರೆ, ಆತ ಎಸೆದಿದ್ದು, ಬಾಂಬ್ ಅಲ್ಲ. ಅದು ಒಂದು ಚಾಕಲೇಟ್ ಕವರ್ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com