
ಬೆಂಗಳೂರು: ಹಳೆಯ ಪಂಪ್‍ಸೆಟ್‍ಗಳಿಂದ ಪ್ರತಿ ವರ್ಷ ರಾಜ್ಯ ಸರ್ಕಾರಕ್ಕೆ 7ರಿಂದ 8 ಸಾವಿರ ಕೋಟಿ ಹೊರೆಯಾಗುತ್ತಿದ್ದು, ವಿದ್ಯುತ್ ಉಳಿತಾಯಕ್ಕಾಗಿ ರಾಜ್ಯ ಸರ್ಕಾರ ನೂತನ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳೆಯ ಕಾಲದ ಪಂಪ್ ಸೆಟ್‍ಗಳು ಹೆಚ್ಚು ವಿದ್ಯುತ್ ಬಳಸಿ ನೀರನ್ನು ಮೇಲೆತ್ತುತ್ತವೆ. ಇದರಿಂದ ಸರ್ಕಾರದ ಮೇಲೆ ಹೆಚ್ಚು ಹೊರೆಯಾಗುತ್ತಿದ್ದು, ಕಡಿಮೆ ವಿದ್ಯುತ್ ಬಳಸಿ ಹೆಚ್ಚು ನೀರು ಮೇಲೆತ್ತುವ ಪಂಪ್ ಸೆಟ್‍ಗಳ ಬಳಕೆಯನ್ನು ರಾಜ್ಯದಲ್ಲಿ ಕಡ್ಡಾಯಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದಲ್ಲಿ 22 ಲಕ್ಷ ಪಂಪ್ ಸೆಟ್ ಗಳಿದ್ದು, ಅದರಲ್ಲಿ 1 ಲಕ್ಷ ಕುಡಿಯುವ ನೀರು ಪೂರೈಸುವ ಪಂಪ್ ಸೆಟ್ ಗಳಿವೆ. ಇವುಗಳ ಬದಲಿಗೆ ನೂತನ ಪಂಪ್ ಸೆಟ್ ಗಳನ್ನು ಅಳವಡಿಸುವುದರಿಂದ ಶೇಕಡಾ 40ರಷ್ಟು ವಿದ್ಯುತ್ ಉಳಿತಾಯವಾಗಲಿದೆ ಎಂದು ಮಾಹಿತಿ ನೀಡಿದರು.
ಈ ಯೋಜನೆಯನ್ನು ಈಗಾಗಲೇ ಮಳವಳ್ಳಿ, ದೊಡ್ಡಬಳ್ಳಾಪುರ ಹಾಗೂ ಹಾವೇರಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದು, ನೂತನ ಪಂಪ್‍ಸೆಟ್‍ಗಳು ಕಡಿಮೆ ವಿದ್ಯುತ್‍ನಿಂದ ಹೆಚ್ಚು ನೀರನ್ನು ಮೇಲೆತ್ತುವುದು ಕಂಡು ಬಂದಿದ್ದು, ಹಳೆಯ ಪಂಪ್‍ಸೆಟ್‍ಗಳಿಗೆ ಹೋಲಿಕೆ ಮಾಡಿದಾಗ ಶೇ.40ರಷ್ಟು ವಿದ್ಯುತ್ ಉಳಿತಾಯವಾಗಿದೆ.ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸಲು ಯೋಜನೆ ರೂಪಿಸಿದ್ದು, ಈ ಕುರಿತು ಕೇಂದ್ರ ಸರ್ಕಾರದ ಇಲಾಖೆಯೊಂದಿಗೆ ಚರ್ಚೆ ನಡೆಸಿದ್ದು, ಶುಕ್ರವಾರ ಕೊಚ್ಚಿಯಿಂದ ತಜ್ಞರ ತಂಡ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.
ಮಂಡ್ಯದಲ್ಲಿ ನಾಯಕರಲ್ಲಿ ಯಾವುದೇ ಭಿನ್ನಮತವಿಲ್ಲ
ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಕಾಂಗ್ರೆಸ್ ಪಕ್ಷದ ಗ್ರಾಮ ಪಂಚಾಯಿತಿ ಸದಸ್ಯರಿಲ್ಲದಿರುವುದು ಪರಿಷತ್ ಚುನಾವಣೆಯಲ್ಲಿನ ಸೋಲಿಗೆ ಕಾರಣವಾಯಿತು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಳಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ 500-600 ಮತಗಳಿಂದ ಸೋತಿದ್ದು, ಗ್ರಾಪಂ ಚುನಾವಣೆಗೆ ಮೊದಲು ಕಾಂಗ್ರೆಸ್ ನಾಯಕರಲ್ಲಿನ ಭಿನ್ನಮತವನ್ನು ಶಮನಗೊಳಿಸಿದ್ದರೆ ಖಂಡಿತ ಪರಿಷತ್ ಚುನಾವಣೆಯನ್ನು ಗೆಲ್ಲಬಹುದಾಗಿತ್ತು. ಸದ್ಯ ಮಂಡ್ಯ ನಾಯಕರು ಒಂದಾಗಿದ್ದು, ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಇದು ಪಕ್ಷಕ್ಕೆ ಸಹಕಾರಿಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
Advertisement