ಪಾರಂಪರಿಕ ಕಟ್ಟಡಗಳ ಚಿತ್ರ ಪ್ರದರ್ಶನ(ಸಂಗ್ರಹ ಚಿತ್ರ)
ಜಿಲ್ಲಾ ಸುದ್ದಿ
ಕಬ್ಬನ್ ಪಾರ್ಕ್ ನಲ್ಲಿ ಚಿತ್ರ ಪ್ರದರ್ಶನ: ನೋಡ ಬನ್ನಿ ಬೆಂಗಳೂರಿನ ಗತವೈಭವ
ಎಲ್ಲೆಲ್ಲೂ ಬೆಂಗಳೂರು ಹಿಂದಿನ ಚರಿತ್ರೆ ಸಾರುವ ಅನೇಕ ಪಾರಂಪರಿಕ ಕಟ್ಟಡಗಳ ಚಿತ್ರಗಳು, ಹಿಂದೆ ಹೀಗಿತ್ತು ಈಗ ಆ ಕಟ್ಟಡಗಳ ಸ್ಥಳದಲ್ಲಿ ಏನೇನು ಬೇರೆ ಕಟ್ಟಡಗಳು ಬಂದಿವೆ ಎಂಬುದರ ಬಗ್ಗೆ...
ಬೆಂಗಳೂರು: ಎಲ್ಲೆಲ್ಲೂ ಬೆಂಗಳೂರು ಹಿಂದಿನ ಚರಿತ್ರೆ ಸಾರುವ ಅನೇಕ ಪಾರಂಪರಿಕ ಕಟ್ಟಡಗಳ ಚಿತ್ರಗಳು, ಹಿಂದೆ ಹೀಗಿತ್ತು. ಈಗ ಆ ಕಟ್ಟಡಗಳ ಸ್ಥಳದಲ್ಲಿ ಏನೇನು ಬೇರೆ ಕಟ್ಟಡಗಳು ಬಂದಿವೆ ಎಂಬುದರ ಬಗ್ಗೆ ಬೆಂಗಳೂರು ಇಂಟಾಕ್ ಚಾಪ್ಟರ್ ಕೈಗೊಂಡಿದ್ದ ಚಿತ್ರ ಪ್ರದರ್ಶನ ಕಬ್ಬನ್ ವಿಹಾರಿಗಳ ಮನವನ್ನು ನಿಬ್ಬೆರಗಾಗುವಂತೆ ಮಾಡಿತ್ತು.
ಪ್ರತಿ ಭಾನುವಾರ ಕಬ್ಬನ್ ಉದ್ಯಾನದಲ್ಲಿ ವಾಹನ ಸಂಚಾರ ನಿರ್ಬಂಧವಿರುವ ಹಿನ್ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದರ ಅಂಗವಾಗಿ ಬೆಂಗಳೂರು ಚಾಪ್ಟರ್ ನ ಇಂಟಾಕ್ ಸಂಸ್ಥೆ 40 ರಿಂದ 50 ಚಿತ್ರಗಳ ಪ್ರದರ್ಶನ ಏರ್ಪಡಿಸಿತ್ತು. ಇದು ಜ.10 ರವರೆಗೆ ನಡೆಯಲಿದೆ.
ಉದ್ಯಾನವದಲ್ಲಿ ಉದಯರಾಗ ಕಾರ್ಯಕ್ರಮದಲ್ಲಿ ಜನಪದ ಗೀತೆಗಳು, ತತ್ವಪದ ಗಾಯನ ನಡೆಯಿತು. ಯೂನಿವರ್ಸ್ ಆರ್ಟ್ ಫೌಂಡೇಶನ್ ಸಂಸ್ಥೆಯಿಂದ ಭರತನಾಟ್ಯ, ಕೆಎಸ್ ಆರ್ ಪಿ ಪೊಲೀಸ್ ಇಲಾಖೆಯಿಂದ ಪೊಲೀಸ್ ಬ್ಯಾಂಡ್ ವಿಶೇಷವಾಗಿತ್ತು.
An exhibition, Bengaluru, Then and Now


