ಪ್ರತಿ ಲೀಟರ್ ಹಾಲಿಗೆ ಸರ್ಕಾರ ನೀಡುತ್ತಿದ್ದ 2 ರು. ಸಹಾಯಧನ ಕಡಿತ, ರೈತರ ಆಕ್ರೋಶ

ಒಂದು ಕಡೆ ನಾಳೆಯಿಂದ ಜಾರಿಗೆ ಬರುವಂತೆ ನಂದಿನ ಹಾಲಿನ ದರ ಪ್ರತಿ ಲೀಟರ್ 4 ರುಪಾಯಿ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರ ಮತ್ತೊಂದು..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೊಪ್ಪಳ: ಒಂದು ಕಡೆ ನಾಳೆಯಿಂದ ಜಾರಿಗೆ ಬರುವಂತೆ ನಂದಿನ ಹಾಲಿನ ದರ ಪ್ರತಿ ಲೀಟರ್ 4 ರುಪಾಯಿ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರ ಮತ್ತೊಂದು ಕಡೆ ಪ್ರತಿ ಲೀಟರ್ ಹಾಲಿನ ಮೇಲೆ ರೈತರಿಗೆ ನೀಡುತ್ತಿದ್ದ ಎರಡು ರುಪಾಯಿ ಸಹಾಯಧನವನ್ನು ಕಡಿತಗೊಳಿಸಿದ್ದು, ಈ ಬಗ್ಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಕೈಯಿಂದ ಕೊಟ್ಟು ಮತ್ತೊಂದು ಕೈಯಿಂದ ಕಿತ್ತುಕೊಂಡ ರಾಜ್ಯ ಸರ್ಕಾರ ನೀತಿಯಿಂದಾಗಿ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳನ್ನೊಳಗೊಂಡ ಒಕ್ಕೂಟದ ರೈತರಿಗೆ ಪ್ರತಿ ಲೀಟರ್ ಹಾಲಿನ ಮೇಲೆ ಎರಡು ರುಪಾಯಿ ಸಹಾಯಧನ ನೀಡಲಾಗುತ್ತಿತ್ತು. ಆದರೆ ಹಾಲಿನ ದರ 4 ರುಪಾಯಿ ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಂದಿನಿಂದ ಜಾರಿಗೆ ಬರುವಂತೆ ಸಹಾಯಧನವನ್ನು ಕಡಿತಗೊಳಿಸಿದೆ. 
ಹಾಲಿನ ದರ ಏರಿಕೆಯಿಂದಾಗಿ ನಾಲ್ಕು ರುಪಾಯಿ ಹೆಚ್ಚಿಗೆ ಸಿಗಲಿದೆ ಎಂದು ಭಾವಿಸಿದ್ದ ರೈತರಿಗೆ 2 ರುಪಾಯಿ ಕಡಿತಗೊಳಿಸಿರುವುದು ರೈತರ ಆಕ್ರೋಶ ಮತ್ತು ಅಸಹನೆಗೆ ಕಾರಣವಾಗಿದ್ದು, ಒಕ್ಕೂಟದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.
ಸದ್ಯ ರೈತರಿಗೆ ಪ್ರತಿ ಲೀಟರ್ ಹಾಲಿಗೆ 23 ರುಪಾಯಿ ದೊರೆಯುತ್ತಿದ್ದು, ಅದು ಈಗ 21 ರುಪಾಯಿಗೆ ಇಳಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com