ಮಹಿಳೆಯರಿಗೆ ಪಿಎಚ್.ಡಿ ನಿಯಮ ಸರಳಗೊಳಿಸಿ: ಸ್ಮೃತಿ

ಮಹಿಳೆಯರು ಯಾವಾಗ, ಎಲ್ಲಿ ಬೇಕಾದರೂ ಪಿಎಚ್.ಡಿ ಮಾಡಲು ಸಾಧ್ಯವಾಗುವಂತೆ ಬೋಧನಾ ಮತ್ತು ಸಂಶೋಧನಾ ವಲಯದಲ್ಲಿ ಸಮಾನತೆಯ ವಾತಾವರಣ ಸೃಷ್ಟಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಸಲಹೆ ನೀಡಿದ್ದಾರೆ...
ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ
ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ

ಮೈಸೂರು: ಮಹಿಳೆಯರು ಯಾವಾಗ, ಎಲ್ಲಿ ಬೇಕಾದರೂ ಪಿಎಚ್.ಡಿ ಮಾಡಲು ಸಾಧ್ಯವಾಗುವಂತೆ ಬೋಧನಾ ಮತ್ತು ಸಂಶೋಧನಾ ವಲಯದಲ್ಲಿ ಸಮಾನತೆಯ ವಾತಾವರಣ ಸೃಷ್ಟಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಸಲಹೆ ನೀಡಿದ್ದಾರೆ.

ಭಾರತ ವಿಜ್ಞಾನ ಕಾಂಗ್ರೆಸ್‍ನ ಅಂಗವಾಗಿ ಆಯೋಜಿಸಿರುವ 3ದಿನದ ಐದನೇ ಮಹಿಳಾ ವಿಜ್ಞಾನ ಸಮಾವೇಶಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು,`ಉನ್ನತ ವ್ಯಾಸಂಗ, ಕುಟುಂಬ ನಿರ್ವಹಣೆ ಎರಡನ್ನೂ ಒಟ್ಟೊಟ್ಟಿಗೆ ಮಾಡಲಾಗದ ಸ್ಥಿತಿ ಇರುವುದರಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆ ಇದೆ ಎಂದು ತಿಳಿಸಿದರು.

ನಿಯಮಗಳನ್ನು ಸರಳಗೊಳಿಸಿ, ಪೂರಕ ವಾತಾವರಣ ಸೃಷ್ಟಿಸಿದರೆ ಈ ಪ್ರಮಾಣ ಹೆಚ್ಚಬಹುದು' ಎಂದು ಆಶಿಸಿದರು. ಮಹಿಳೆಯರ ವಿಷಯದಲ್ಲಿ ಪುರುಷರ ಹೃದಯಗಳು ಕಠಿಣ ಮತ್ತು ಸಾಮಾಜಿಕ ಪೂರ್ವಗ್ರಹಗಳಿಂದ ಕೂಡಿವೆ ಎಂದು ಛೇಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com