ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್. ಆರ್. ಹಿರೇಮಠ
ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್. ಆರ್. ಹಿರೇಮಠ

ಲೋಕಾ ಹುದ್ದೆಗೆ ನ್ಯಾ. ನಾಯಕ್ ಶಿಫಾರಸು ಬೇಡ

ರಾಜ್ಯ ಕಾನೂನು ಆಯೋಗದ ಅಧ್ಯಕ್ಷ, ನಿವೃತ್ತ ನ್ಯಾಯಮೂತಿರ್ ಎಸ್.ಆರ್. ನಾಯಕ್ ಅವರನ್ನು ಲೋಕಾ ಯುಕ್ತ ಸ್ಥಾನಕ್ಕೆ ಶಿಫಾರಸು ಮಾಡುವ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿಯಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್. ಆರ್. ಹಿರೇಮಠ ಆಗ್ರಹಿಸಿದರು...

ಧಾರವಾಡ: ರಾಜ್ಯ ಕಾನೂನು ಆಯೋಗದ ಅಧ್ಯಕ್ಷ, ನಿವೃತ್ತ ನ್ಯಾಯಮೂತಿರ್  ಎಸ್.ಆರ್. ನಾಯಕ್ ಅವರನ್ನು ಲೋಕಾ ಯುಕ್ತ ಸ್ಥಾನಕ್ಕೆ ಶಿಫಾರಸು ಮಾಡುವ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿಯಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್. ಆರ್. ಹಿರೇಮಠ ಆಗ್ರಹಿಸಿದರು.

ನಿವೃತ್ತ ನ್ಯಾ. ನಾಯಕ್ ಅವರ ಮೇಲೆ ಹಲವು ಆರೋಪಗಳಿವೆ. ಛತ್ತೀಸ್‍ಗಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಗಿದ್ದಾಗ ಅವರು 2002ರಲ್ಲಿ ಬೆಂಗಳೂರಿನಲ್ಲಿ 6175.5 ಚದರ ಅಡಿಯ ಸಿಎ ಸೈಟ್ ಅನ್ನು ರು.3,70,500ಕ್ಕೆ ಖರೀದಿಸಿದ್ದಾರೆ. ಅಂದು ಇದರ ಸರ್ಕಾರಿ ದರ ರು.13.59 ಲಕ್ಷ. ಸಿಎ ಸೈಟ್‍ಗಳನ್ನು ಸಾರ್ವಜನಿಕ ಕೆಲಸಗಳಿಗೆ ಮಾತ್ರ ಖರೀದಿಸಬಹುದಿತ್ತು. ಆದರೆ, ವೈಯಕ್ತಿಕ ಉದ್ದೇಶಕ್ಕೆ ಖರೀದಿಸಿದ್ದು ವಿವಾದ ಎಬ್ಬಿಸಿದೆ.

ಅಕ್ರಮವಾಗಿ ಸೈಟ್ ಪಡೆದ 404 ಮಂದಿ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾ. ನಾಯಕ್ ಅವರು ಕುಮಟಾದಲ್ಲಿ ಕರ್ನಾಟಕ ಜ್ಯುಡಿಷಿಯಲ್ ಹೌಸಿಂಗ್ ಸೊಸೈಟಿಯ
4.14 ಗುಂಟೆ ಜಾಗೆಯನ್ನು ಪತ್ನಿ ಹೆಸರಿನಲ್ಲಿ ಖರೀದಿಸಿರುವುದೂ ವಿವಾದಕ್ಕೆ ಕಾರಣವಾಗಿದೆ. ಸೊಸೈಟಿಯಿಂದ ಜಾಗೆ ಖರೀದಿಸಲು ನ್ಯಾಯಾಂಗ ಇಲಾಖೆ ನೌಕರರಿಗಷ್ಟೇ ಅವಕಾಶ ಇದೆ. ಹೈಕೋರ್ಟ್ ನ್ಯಾಯಮೂರ್ತಿ ಖರೀದಿಸಿದ್ದು ನಿಯಮಬಾಹಿರ ಎಂದು ಹಿರೇಮಠ ಆರೋಪಿಸಿದರು.

ಜತೆಗೆ, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿದ್ದಾಗ ನ್ಯಾ. ನಾಯಕ್ ಅವರು ಬೇಲೆಕೇರಿಗೆ ಅದಿರು ಸಾಗಿಸುವ ವೇಳೆ ಸಾಕಷ್ಟು ಅಪಘಾತ ಸಂಭವಿಸಿ ಜೀವ ಹಾನಿಯಾದರೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್ ಹಾಗೂ ಪ್ರತಿಪಕ್ಷದ ಮುಖಂಡರು ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ಪ್ರಾಮಾಣಿಕ ವ್ಯಕ್ತಿಯನ್ನು ಲೋಕಾಯುಕ್ತರನ್ನಾಗಿ ನೇಮಿಸಬೇಕು ಎಂದು ಹಿರೇಮಠ ಒತ್ತಾಯಿಸಿದರು.

Related Stories

No stories found.

Advertisement

X
Kannada Prabha
www.kannadaprabha.com