ಲಾಲ್‍ಬಾಗ್ ಪ್ರವೇಶ ಶುಲ್ಕ ಏಕಾಏಕಿ ರು.20ಗೆ ಏರಿಕೆ

ಲಾಲ್‍ಬಾಗ್‍ನ ಪ್ರವೇಶ ಶುಲ್ಕವನ್ನು ಏಕಾಏಕಿ ರು.10ರಿಂದ ರು.20ಗೆ ಏರಿಸುವ ಮೂಲಕ ರಾಜ್ಯ ತೋಟಗಾರಿಕೆ ಇಲಾಖೆ ಸಾರ್ವಜನಿಕರಿಗೆ ಪೆಟ್ಟು ನೀಡಿದೆ. ಸದ್ದಿಲ್ಲದೆ ಜ.1ರಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ...
ಲಾಲ್ ಬಾಗ್ (ಸಂಗ್ರಹ ಚಿತ್ರ)
ಲಾಲ್ ಬಾಗ್ (ಸಂಗ್ರಹ ಚಿತ್ರ)

ಬೆಂಗಳೂರು: ಲಾಲ್‍ಬಾಗ್‍ನ ಪ್ರವೇಶ ಶುಲ್ಕವನ್ನು ಏಕಾಏಕಿ ರು.10ರಿಂದ ರು.20ಗೆ ಏರಿಸುವ ಮೂಲಕ ರಾಜ್ಯ ತೋಟಗಾರಿಕೆ ಇಲಾಖೆ ಸಾರ್ವಜನಿಕರಿಗೆ ಪೆಟ್ಟು ನೀಡಿದೆ. ಸದ್ದಿಲ್ಲದೆ ಜ.1ರಿಂದಲೇ  ಪರಿಷ್ಕೃತ ದರ ಜಾರಿಗೆ ಬಂದಿದೆ.

ಏ.10ರಿಂದ ಮಾ.31ರವರೆಗೆ ಅನ್ವಯವಾಗುವಂತೆ ಕಳೆದ ವರ್ಷ ರು.2ಕೋಟಿಗೂ ಅಧಿಕ ಮೊತ್ತದ ಟೆಂಡರ್ ಅನ್ನು ಖಾಸಗಿಯವರಿಗೆ ನೀಡಲಾಗಿತ್ತು. ಆದರೆ ಅವಧಿ ಇನ್ನೂ ಮೂರು ತಿಂಗಳಿರುವಾಗಲೇ  ಅವಸರವಾಗಿ ಏರಿಕೆ ಮಾಡಿರುವುದರ ಹಿಂದಿನ ಗುಟ್ಟೇನು ಎಂದು ಯಾರಿಗೂ ತಿಳಿದಿಲ್ಲ. ಕಳೆದ ವರ್ಷ ಇದೇ ರೀತಿ ಶುಲ್ಕ ಏರಿಸುವ ಪ್ರಸ್ತಾವನೆ ಕೇಳಿಬಂದಾಗ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಆ ನಿರ್ಧಾರ ಕೈಬಿಡಲಾಗಿತ್ತು. ಇದೀಗ ಪ್ರಸ್ತಾಪ ಸಲ್ಲಿಸದೆ ಸಾರ್ವಜನಿಕರ ಹಾಗೂ ನಡಿಗೆದಾರರ ಗಮನಕ್ಕೂ ತರದೆ ಶುಲ್ಕವನ್ನು ಏರಿಸಲಾಗಿದೆ. ಉದ್ಯಾನ ವೀಕ್ಷಿಸಲು
ಹೋದವರು ಏಕಾಏಕಿ ಶುಲ್ಕ ಏರಿಕೆಯಿಂದ ಬೇಸರಗೊಂಡಿದ್ದಾರೆ. 12ವರ್ಷ ಮೇಲ್ಪಟ್ಟ ಮಕ್ಕಳಿಗೂ ರು.20ಶುಲ್ಕ ನಿಗದಿಪಡಿಸಲಾಗಿದೆ. ಟೆಂಡರ್‍ಗೂ ಮುನ್ನವೇ ಶುಲ್ಕ ಏರಿಕೆ: ಲಾಲ್‍ಬಾಗ್‍ನಲ್ಲಿ  ಯಾವುದೇ ಅಭಿವೃದಿಟಛಿ ಕಾರ್ಯಗಳು ನಡೆಯುತ್ತಿಲ್ಲ. ಆದರೆ ಶುಲ್ಕ ಏರಿಸುವುದು, ಪಾರ್ಕಿಂಗ್ ಮಾಡುವುದು ಇಂತಹ ಹಣ ಸಂಪಾದನೆ ಕೆಲಸಗಳು ಹೆಚ್ಚಾಗುತ್ತಿವೆ. ಇದನ್ನು ಕೂಡಲೇ ಹಿಂಪಡೆಯಬೇಕು.  ಟೆಂಡರ್ ಪೂರ್ಣಗೊಳ್ಳುವವರೆಗೂ ಶುಲ್ಕ ಏರಿಕೆ ಮಾಡಬಾರದು. ಇದರ ಹಿಂದೆ ಯಾವುದೋ ಹುನ್ನಾರವಿದೆ ಎನ್ನುತ್ತಾರೆ ಮೋಹನ್. ಲಾಲ್‍ಬಾಗ್ ನಿರ್ವಹಣೆಗೆ ಹಣದ ಸಮಸ್ಯೆಯಿದೆ. ಹೀಗಾಗಿ ಪ್ರವೇಶ  ಶುಲ್ಕವನ್ನು ಹೆಚ್ಚಿಸಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ವಾಸ್ತವದಲ್ಲಿ ಲಾಲ್‍ಬಾಗ್‍ಗೆ ಸರ್ಕಾರ ಪ್ರತಿವರ್ಷ ಬಜೆಟ್‍ನಲ್ಲಿ ಹಣ ಮೀಸಲಿಡುತ್ತಿದೆ. ಜತೆಗೆ ವರ್ಷಕ್ಕೆ ಎರಡು ಬಾರಿ ಫಲಪುಷ್ಪ ಪ್ರದರ್ಶನ ನಡೆಸಿ ಕೋಟ್ಯಂತರ ಆದಾಯ ಗಳಿಸುತ್ತದೆ. ಇದಲ್ಲದೆ ಹಲಸು  ಮೇಳ, ಮಾವು ಮೇಳಗಳ ಮೂಲಕ ಆದಾಯಗಳಿಸುತ್ತದೆ. ಹಾಗಿರುವಾಗ ನಷ್ಟದ ಮಾತೆಲ್ಲಿ ಎನ್ನುವುದು ಸಾರ್ವಜನಿಕರಲ್ಲಿ ಮೂಡಿರುವ ಪ್ರಶ್ನೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com