ರು.33 ಲಕ್ಷಕ್ಕೆ ಹ್ಯಾಕರ್ ಕನ್ನ!

ಇತ್ತೀಚಿನ ದಿನಗಳಲ್ಲಿ ಆನ್‍ಲೈನ್‍ನಲ್ಲಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈಗ ಮತ್ತದೆ ಇಂತಹದ್ದೆ ಘಟನೆ ನಡೆದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆನ್‍ಲೈನ್‍ನಲ್ಲಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈಗ ಮತ್ತದೆ ಇಂತಹದ್ದೆ ಘಟನೆ ನಡೆದಿದೆ.

ನೆಲಮಂಗಲ ಮೂಲದ ಡಿಎಫ್ ಪವರ್ ಸಿಸ್ಟಂ ಕಂಪನಿ ಆನ್‍ಲೈನ್‍ನಲ್ಲಿ ಕಳುಹಿಸಿದ ಲಕ್ಷಾಂತರ ರುಪಾಯಿ ಹಣವನ್ನು ಹ್ಯಾಕರ್ಸ್ ಗಳು ಹ್ಯಾಕ್ ಮಾಡಿ ತಮ್ಮ ಖಾತೆಗೆ ಜಮಾಮಾಡಿಕೊಂಡಿದ್ದಾರೆ.

ಕಲ್ಲಿದ್ದಿಲಿನಿಂದ ವಿದ್ಯುತ್ ಉತ್ಪಾದಿಸಲು ಬಳಸುವ ಬಾಯ್ಲರ್ ಗಳನ್ನು ಖರೀದಿಸುವ ಸಲುವಾಗಿ ನೆಲಮಂಗಲದ ಡಿಎಫ್ ಪವರ್ ಕಂಪನಿ ಚೀನಾ ಮೂಲದ ಸಿಂಗಪುರದಲ್ಲಿರುವ ಕಂಪನಿಯೊಂದಿಗೆ ಬ್ಯಾಂಕ್ ಆಫ್ ಬರೋಡಾ ಮೂಲಕ ವ್ಯವಹಾರ ನಡೆಸಿದೆ.

ಬಾಯ್ಲರ್ ಖರೀದಿದಾಗಿ 55 ಸಾವಿರ ಡಾಲರ್ (ರು.33 ಲಕ್ಷ) ಹಣವನ್ನು ಆನ್‍ಲೈನ್‍ನಲ್ಲಿ ಜಮಾ ಮಾಡಿದೆ. ಇಂತಹ ವ್ಯವಹಾರಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುವ ಹ್ಯಾಕರ್‍ಗಳು ಚೀನಾ ಮೂಲದ ಸಿಂಗಪುರದ ಕಂಪನಿಯ ಇ ಮೇಲ್ ಐಡಿಯನ್ನು ಹ್ಯಾಕ್ ಮಾಡಿದ್ದಾರೆ. ಅಲ್ಲದೆ, ``ನಮ್ಮ ಕಂಪನಿಯ ಖಾತೆಯಲ್ಲಿ ಕೆಲ ತೊಂದರೆಗಳಿವೆ. ಹೀಗಾಗಿ ಬೇರೆ ಖಾತೆಗೆ ಹಣ ಜಮಾ ಮಾಡಿ, ಎಂದು ಇ ಮೇಲ್ ಕಳುಹಿಸಿದ್ದಾರೆ.

ಇದನ್ನು ನಂಬಿದ ಡಿಎಫ್ ಕಂಪನಿಯ ಮ್ಯಾನೇಜರ್ ರವಿಶಂಕರ್ ಡಿ.2 ರಂದು 55 ಸಾವಿರ ಡಾಲರ್ (33ಲಕ್ಷ) ಹಣವನ್ನು ಹ್ಯಾಕರ್ ಗಳು ಕೊಟ್ಟ ಖಾತೆಗೆ ಜಮಾ ಮಾಡಿ ದ್ದಾರೆ. ತಮ್ಮ ಖಾತೆಗೆ ಹಣ ಬಾರದ ಹಿನ್ನೆಲೆಯಲ್ಲಿ ಸಿಂಗಪುರ ಕಂಪನಿಯ ಪ್ರತಿನಿಧಿ ಜರ್ಫಿ ಎಂಬುವವರು ಡಿ.8ರಂದು ಡಿಎಫ್ ಕಂಪನಿಗೆ ಭೇಟಿ ನೀಡಿ ರವಿಶಂಕರ್ ಜೊತೆ ಚರ್ಚಿಸಿದ್ದಾರೆ. ಜಮಾ ಮಾಡಿರುವ ಎಲ್ಲ ದಾಖಲೆಗಳನ್ನು ತೋರಿಸಿದ್ದಾರೆ. ಕೂಡಲೇ ತಮ್ಮ ಖಾತೆಯನ್ನು ಪರಿಶೀಲಿಸಿದ ಜರ್ಫಿ ತಮ್ಮ ಇ ಮೇಲ್ ಐಡಿಯನ್ನು ಹ್ಯಾಕರ್ ಗಳು ಹ್ಯಾಕ್ ಮಾಡಿ ಲಕ್ಷಾಂತರ ರುಪಾಯಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ರವಿಶಂಕರ್ ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಂಗಪುರದಲ್ಲಿಯೂ ಜರ್ಫಿ ಸ್ಥಳೀಯ ಠಾಣೆಗೆ ದೂರು ನೀಡಿದ್ದಾರೆ.

ರು.6 ಕೋಟಿ ನೀಡಬೇಕಿತ್ತು!:
ಬಾಯ್ಲರ್ ಖರೀದಿಸಲು ಸಿಂಗಪುರದ ಕಂಪನಿಗೆ ಸುಮಾರು ರು.6 ಕೋಟಿ ಹಣ ವರ್ಗಾವಣೆ ಮಾಡಬೇಕಿತ್ತು. ಮೊದಲ ಕಂತಿನ ಹಣ ಎಂದು ರು.33 ಲಕ್ಷ ಜಮಾ ಮಾಡಿದ್ದರು. ಉಳಿದ ಹಣವನ್ನು ಮತ್ತೊಂದು ಕಂತಿನಲ್ಲಿ ಪಾವತಿ ಮಾಡುವು ದಾಗಿ ರವಿಶಂಕರ್ ಹೇಳಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com