ಟಿಪ್ಪು ಜಯಂತಿ ಆಚರಣೆ ಮಾಡಿದರೆ ಪ್ರತಿಭಟನೆ: ಸರ್ಕಾರಕ್ಕೆ ಚಿಮೂ ಎಚ್ಚರಿಕೆ

ಟಿಪ್ಪು ಸುಲ್ತಾನ್ ಕರ್ನಾಟಕ ಕಂಡಂತಹ ಅತ್ಯಂತ ದೊಡ್ಡ ಕ್ರೂರಿ ಎಂದಿರುವ ಡಾ.ಎಂ.ಚಿದಾನಂದಮೂರ್ತಿಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ...ಎನ್ನುವುದು ಮೂರ್ಖತನದ
ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ರಂಗಭೂಮಿ ಕೊಡಗು ಪ್ರಕಾಶನ ಹೊರತಂದಿರುವ ಟಿಪ್ಪು ಮತ್ತು ಕೊಡವರು ಪುಸ್ತಕ ಲೋಕಾರ್ಪಣೆ ಮಾಡಿದ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ನಿವೃತ್ತ ಪೊಲೀಸ್ ಅಧ
ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ರಂಗಭೂಮಿ ಕೊಡಗು ಪ್ರಕಾಶನ ಹೊರತಂದಿರುವ ಟಿಪ್ಪು ಮತ್ತು ಕೊಡವರು ಪುಸ್ತಕ ಲೋಕಾರ್ಪಣೆ ಮಾಡಿದ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ನಿವೃತ್ತ ಪೊಲೀಸ್ ಅಧ

ಬೆಂಗಳೂರು: ಟಿಪ್ಪು ಸುಲ್ತಾನ್ ಕರ್ನಾಟಕ ಕಂಡಂತಹ ಅತ್ಯಂತ ದೊಡ್ಡ ಕ್ರೂರಿ ಎಂದಿರುವ  ಡಾ.ಎಂ.ಚಿದಾನಂದಮೂರ್ತಿ, ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ ಎನ್ನುವುದು     ಮೂರ್ಖತನದ ಹೇಳಿಕೆ ಎಂದು ತಿಳಿಸಿದರು.

ರಂಗಭೂಮಿ ಕೊಡಗು ಪ್ರಕಾಶನ ಮಿಥಿಕ್ ಸೊಸೈಟಿಯಲ್ಲಿ ಶನಿವಾರ ಹಮ್ಮಿ ಕೊಂಡಿದ್ದ `ಟಿಪ್ಪು  ತ್ತು ಕೊಡವರು' ಎಂಬ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಟಿಪ್ಪು  ಬ್ರಿಟಿಷರ ವಿರುದ್ಧದ ಹೋರಾಟ ಮಾಡಿರುವುದು ಕೇವಲ ತನ್ನ  ರಾಜ್ಯ ರಕ್ಷಣೆಗೆ ವಿನಃ ಸ್ವಾತಂತ್ರ್ಯ ಹೋರಾಟಕ್ಕಲ್ಲ. ಆದ ಕಾರಣ ಮುಂದಿನ ವರ್ಷದಿಂದ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ  ಟಿಪ್ಪುಸುಲ್ತಾನ್ ದಿನಾಚರಣೆ ಮಾಡುವುದಕ್ಕೆ ಅವಕಾಶ ನೀಡಬಾರದು ಎಂದರು.

ಹೈದರಾಲಿ ಮೈಸೂರು ಸಂಸ್ಥಾನವನ್ನು ಮೋಸದಿಂದ ವಶಕ್ಕೆ ಪಡೆದಿದ್ದರು.ಅಂತಹವರ ಮಗ  ಟಿಪ್ಪು ಸುಲ್ತಾನ್  ಹಿಂದುಗಳು ಮತ್ತು ಕೊಡವರನ್ನು  ಅಮಾನುಷವಾಗಿ ಕೊಂದಿದ್ದಾರೆ. ಅಂತಹವರನ್ನು ರಾಜ್ಯ ಸರ್ಕಾರ ವೈಭವೀಕರಿಸುವುದಕ್ಕೆ ಮುಂದಾಗಿದೆ. ಇದಕ್ಕೆ ನಾವೆಲ್ಲ  ಅವಕಾಶ ನೀಡಬಾರದು. ಮುಂದಿನ ವರ್ಷ ಟಿಪ್ಪು ಸುಲ್ತಾನ್ ಜಯಂತಿಯನ್ನು ಮಾಡಿದರೆ  ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು   ಹೇಳಿದರು.  ಹಲವಾರು ಹಿಂದು ದೇವಾಲಯಗಳನ್ನು ಧ್ವಂಸಗೊಳಿಸಿ ಮಸೀದಿಗಳನ್ನಾಗಿ  ಪರಿವರ್ತಿಸಿದ್ದಾನೆ. ಇತಿಹಾಸದಲ್ಲಿ ಹಿಂದು ರಾಜರು ಕೇವಲ ರಾಜ್ಯ ವಿಸ್ತರಣೆಗಾಗಿ ಮಾತ್ರ ಯುದ್ದಗಳನ್ನು ನಡೆಸುತ್ತಿದ್ದರು. ಅಮಾಯಕರ ಮೇಲೆ ಎಂದಿಗೂ ಕೈ ಮಾಡಿಲ್ಲ. ಹೈದರ್ ಮತ್ತು ಟಿಪ್ಪು ಹೆಚ್ಚಿನ ಪ್ರಮಾಣದಲ್ಲಿ ಕೊಡವ ಜನಾಂಗದವರನ್ನು ಕೊಂದವರಿಗೆ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದ ಉದಾಹರಣೆಗಳಿವೆ ಎಂದು ಚಿದಾನಂದ ಮೂರ್ತಿ ಅಭಿಪ್ರಾಯಪಟ್ಟರು. 

ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ ಅಶೋಕ್ ಕುಮಾರ್ ಮಾತನಾಡಿ, ಸಮಾಜದಲ್ಲಿ  ನಡೆಯುವ ಬಹುತೇಕ ಗಲಭೆಗಳಿಗೆ ರಾಜಕಾರಣಿಗಳೇ ಕಾರಣರಾಗುತ್ತಾರೆ. ಟಿಪ್ಪು ಸುಲ್ತಾನ್  ರನಲ್ಲ ಎಂಬುದು  ಹಿಂದಿನ ನಾಯಕರಿಗೆ ತಿಳಿದ್ದಿದ್ದರ ಪರಿಣಾಮ ಕಳೆದ 60 ವರ್ಷಗಳಲ್ಲಿ ಅವರ  ಯಂತಿ ಮಾಡಿರಲಿಲ್ಲ. ಆದರೆ, ಈಗ ಯಾವ ಕಾರಣಕ್ಕೆ ಟಿಪ್ಪು ದಿನಾಚರಣೆ   ಡುವುದಕ್ಕೆ  ಮುಂದಾದರು ಎಂದು  ಅವರು ಪ್ರಶ್ನಿಸಿದರು. ಟಿಪ್ಪು ಜಯಂತಿಯಿಂದ ಕೊಡಗಿನಲ್ಲಿ  ನಡೆದ ಘಟನೆಗೆ ಅಲ್ಲಿನ ಡಿಸಿ ಮತ್ತು ಎಸ್‍ಪಿ ನಿರ್ಲಕ್ಷ್ಯತನವೇ ಮುಖ್ಯ ಕಾರಣ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಡ್ಡಂಡ ಕಾರ್ಯಪ್ಪ, ನಮ್ಮ ದೇಶದ ಸೇನೆಯನ್ನು ಕಟ್ಟಿದ ಜನರಲ್ ತಿಮ್ಮಯ್ಯ ಮತ್ತು ಕಾರ್ಯಪ್ಪನವರನ್ನು ಸ್ಮರಿಸದ ನಮ್ಮ   ಸರ್ಕಾರಗಳು ಇಂಥ ವ್ಯಕ್ತಿಗಳ ಮೂಲಕ ಕೊಡವರನ್ನು ಅವಮಾನಿಸಲಾಗುತ್ತಿದೆ.  ಸ್ವಾತಂತ್ರ್ಯ  ಹೋರಾಟದಲ್ಲಿ  ಸಾಮಾನ್ಯನಂತೆ ಯುದ್ಧ ರಣರಂಗದಿಂದ ಓಡಿ ಹೋದವನು ಟಿಪ್ಪು. ಅವನನ್ನು  ನಾಯಕನಂತೆ ಬಿಂಬಿಸುತ್ತಿದ್ದಾರೆ. ಇದೇ ರೀತಿಯಲ್ಲಿ ಮುಂದುವರೆದರೆ ಕಾಶ್ಮೀರ ಪಂಡಿತರಂತೆ ಕೊಡವರೂ ಸಹ ಅತಂತ್ರರಾಗಬೇಕಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com