ಕಿದ್ವಾಯಿ ಆಸ್ಪತ್ರೆಗೆ ಇನ್ಫೋಸಿಸ್ ಫೌಂಡೇಷನ್ ನಿಂದ 50 ಕೋಟಿ ದೇಣಿಗೆ
ಬೆಂಗಳೂರು: ಕಿದ್ವಾಯಿ ಆಸ್ಪತ್ರೆಯಲ್ಲಿ ಧರ್ಮಶಾಲಾ ಜೀರ್ಣೋದ್ಧಾರ ಮತ್ತು ನೂತನ ಶಸ್ತ್ರಚಿಕಿತ್ಸೆ ವಿಭಾಗ ನಿರ್ಮಾಣಕ್ಕಾಗಿ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ 50 ಕೋಟಿ ರುಪಾಯಿ ದೇಣಿಗೆ ನೀಡಿದ್ದಾರೆ.
ಕಿದ್ವಾಯಿ ಆಸ್ಪತ್ರೆಯಲ್ಲಿ ಇನ್ಫೋಸಿಸ್ ಧರ್ಮಶಾಲಾ ಜೀರ್ಣೋದ್ಧಾರ ಮತ್ತು ನೂತನ ಶಸ್ತ್ರಚಿಕಿತ್ಸೆ ವಿಭಾಗ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇರಿಸಲಾಯಿತು. ಸುಮಾರು 40 ಕೋಟಿ ವೆಚ್ಚದಲ್ಲಿ ಶಸ್ತ್ರಚಿಕಿತ್ಸಾ ವಿಭಾಗ ಹಾಗೂ ಎರಡು ಕೋಟಿ ವೆಚ್ಚದಲ್ಲಿ ಪ್ರಸ್ತುತ ಇರುವ ಧರ್ಮಶಾಲೆಯನ್ನು ನವೀಕರಣ, ಎಂಟು ಕೋಟಿ ವೆಚ್ಚದಲ್ಲಿ ಹೊಸದಾಗಿ ಶಸ್ತ್ರಚಿಕಿತ್ಸೆ ವಿಭಾಗ ನಿರ್ಮಾಣವನ್ನು ಇಸ್ಫೋಸಿಸ್ ಫೌಂಡೇಷನ್ ಮಾಡಲಿದೆ.
ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದ ಸುಧಾಮೂರ್ತಿ ಅವರು, ಕಿದ್ವಾಯಿ ಸಂಸ್ಥೆಗೆ ಅಗತ್ಯ ನೆರವು ನೀಡಲು ಇನ್ಫೋಸಿಸ್ ಪ್ರತಿಷ್ಠಾನ ಸದಾ ಸಿದ್ಧವಿರುತ್ತದೆ. ಕ್ಯಾನ್ಸರ್ ನಿಂದ ಬಳಲುತ್ತಿರುವವರಿಗೆ ಉತ್ತಮ ಜೀವನ ಕಲ್ಪಿಸುವುದು ನಮ್ಮ ಗುರಿಯಾಗಿದೆ ಎಂದು ಸುಧಾಮೂರ್ತಿ ಹೇಳಿದ್ದಾರೆ.
ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಡಾ. ಲಿಂಗೇಗೌಡ ಅವರು ಮಾತನಾಡಿ, ಸುಧಾಮೂರ್ತಿ ದಂಪತಿಗಳು ನೀಡಿರುವ ಹಣದಲ್ಲಿ ಧರ್ಮಶಾಲಾ ಜೀರ್ಣೋದ್ಧಾರ ಹಾಗೂ ನೂತನ ಶಸ್ತ್ರ ಚಿಕಿತ್ಸಾ ವಿಭಾಗವನ್ನು ನಿರ್ಮಿಸಲಾಗುವುದು ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ