(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ರು.5 ಸಾವಿರಕ್ಕಾಗಿ ಶೂಟೌಟ್

ಕೆ.ಆರ್.ಪುರಂ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದ್ದ ಶೂಟೌಟ್ ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಲು ಎರಡು ತಂಡ ರಚನೆ ಮಾಡಲಾಗಿದೆ.ಅಲ್ಲದೆ, ಶೂಟೌಟ್‍ಗೆ ಕೇವಲ ರು.5 ಸಾವಿರ ಹಣಕಾಸಿನ ವ್ಯವಹಾರವೇ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ...

ಕೃಷ್ಣರಾಜಪುರ: ಕೆ.ಆರ್.ಪುರಂ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದ್ದ ಶೂಟೌಟ್ ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಲು ಎರಡು ತಂಡ ರಚನೆ ಮಾಡಲಾಗಿದೆ.ಅಲ್ಲದೆ, ಶೂಟೌಟ್‍ಗೆ ಕೇವಲ ರು.5 ಸಾವಿರ ಹಣಕಾಸಿನ ವ್ಯವಹಾರವೇ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈಗಾಗಲೇ ಒಂದು ತಂಡ ಮಧ್ಯಪ್ರದೇಶಕ್ಕೆ ತೆರಳಿದ್ದು ಮತ್ತೊಂದು ತಂಡ ಬೆಂಗಳೂರಿನಲ್ಲಿ ಶೋಧ ಕಾರ್ಯ ನಡೆಸುತ್ತಿದೆ. ಮುಖೇಶ್ ಹಾಗೂ ಮನೀಶ್ ಎಂಬುವರು ಈ ಪ್ರಕರಣದ
ಆರೋಪಿಗಳು. ಮಧ್ಯಪ್ರದೇಶಕ್ಕೆ ತೆರಳಿರುವ ತಂಡ ಮುಖೇಶ್ ಸಂಬಂಧಿಕರು, ಸ್ನೇಹಿತರ ಮನೆಗಳಲ್ಲಿ ಹುಡುಕಾಟ ನಡೆಸುತ್ತಿದೆ. ಅಲ್ಲಿಯ ಠಾಣೆಗೂ ವಿಷಯ ತಿಳಿಸಲಾಗಿದೆ. ಮತ್ತೊಂದು ತಂಡ ಬೆಂಗಳೂರಿನಲ್ಲಿರುವ ಮನೀಶ್ ಮನೆ ಮತ್ತು ಸ್ನೇಹಿತರ ಮನೆಗಳು, ರೇಲ್ವೆ ಸ್ಟೇಷನ್‍ಗಳು, ಬಸ್ ನಿಲ್ದಾಣಗಳು ಶೋಧ ಕಾರ್ಯ ನಡೆಸುತ್ತಿದೆ ಎಂದು ಡಿಸಿಪಿ ಸತೀಶ್ ಕುಮಾರ್ ತಿಳಿಸಿದ್ದಾರೆ.

ಸೋಮವಾರ ಮಧ್ಯಾಹ್ನ ರಾಮಮೂರ್ತಿನಗರದ ಬಳಿಯ ಶಾಂತಿ ಬಡಾವಣೆಯಲ್ಲಿನ ಮನೆಯೊಂದರಲ್ಲಿ ನಡೆದಿದ್ದ ಶೂಟೌಟ್‍ನಲ್ಲಿ ಬಿನೋದ್ ಎಂಬಾತನಿಗೆ ಮೂರು ಗುಂಡುಗಳು ತಗುಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಬಿನೋದ್‍ಗೆ ಶಸ್ತ್ರ ಚಿಕಿತ್ಸೆ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ರು.5 ಸಾವಿರಕ್ಕೆ ಜಗಳ: ಮುಖೇಶ್ ಮತ್ತು ಮನೀಶ್ ಇಬ್ಬರು ಸಹೋದರರು. ಮುಖೇಶ್ ಜೊತೆ ಬಿನೋದ್ ಹಣಕಾಸಿನ ವ್ಯವಹಾರ (ರು.5 ಸಾವಿರ ರೂಪಾಯಿ) ನಡೆಸಿದ್ದು, ಇದೇ ವಿಚಾರವಾಗಿ ಬಿನೋದ್ ಮತ್ತು ಸ್ನೇಹಿತರು ಮುಖೇಶ್ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ದ್ವೇಷ ಸಾಧಿಸುತ್ತಿದ್ದ ಮುಖೇಶ್ ಬೆಂಗಳೂರಿನಲ್ಲೇ ವಾಸವಿರುವ ಸಹೋದರ ಮನೀಶ್ ಜೊತೆಗೂಡಿ ಬಿನೋದ್‍ನ ಮೇಲೆ ಹಲ್ಲೆ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com