ಕಸವಿಲೇವಾರಿ ಸ್ಥಗಿತಗೊಳಿಸಲು ಸಿಗೆಹಳ್ಳಿ ಗ್ರಾಮಸ್ಥರಿಂದ ಗಡುವು
ಬೆಂಗಳೂರು: ಸೀಗೆಹಳ್ಳಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡುವುದಕ್ಕೆ ಸುತ್ತಲ ಗ್ರಾಮಸ್ಥರಿಂದ ಮತ್ತೊಮ್ಮೆ ಗಂಭೀರ ವಿರೋಧ ವ್ಯಕ್ತವಾಗಿದ್ದು, ಹೋರಾಟ ತೀವ್ರಗೊಳ್ಳುವ ಸೂಚನೆ ದೊರೆತಿದೆ.
ಯಶವಂತಪುರ ಹೋಬಳಿಯ ಕನ್ನಳ್ಳಿ, ಸಿಗೆಹಳ್ಳಿ ಗ್ರಾಮಗಳಲ್ಲಿನ ಕಸ ವಿಲೇವಾರಿ ಘಟಕ ಸ್ಥಗಿತಗೊಳಿಸದಿದ್ದರೆ ಎಂಟು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಸ್ಥರು, ವಿದ್ಯಾರ್ಥಿಗಳು ಸೇರಿ ಜ.25 ರಂದು ಬೆಳಿಗ್ಗೆ 9 :30 ಕ್ಕೆ ಸೀಗೇಹಳ್ಳಿ ಗೇಟ್ ಬಳಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಕಸ ವಿಲೇವಾರಿ ಘಟಕ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಚನ್ನಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಗ್ರಾಮಗಳಿಗೆ ಸೇರಿದ ಸುಮಾರು 30 ಎಕರೆ ಭೂಮಿಯಲ್ಲಿ ಬೃಹತ್ ತ್ಯಾಜ್ಯ ಸಂಸ್ಕರಣೆ ಮಾಡುವ ಉದ್ದೇಶದಿಂದ ನಿತ್ಯ ಕಸ ವಿಲೇವಾರಿ ಮಾಡಲು ನೆಕ್ಸ್ ಸಂಸ್ಥೆಯೊಂದಿಗೆ ಬಿಬಿಎಂಪಿ ಒಪ್ಪಂದ ಮಾಡಿಕೊಂಡಿದೆ. ಘಟಕಕ್ಕೆ ದಿನ ನಿತ್ಯ 100 ವಾರ್ಡ್ ಗಳ ತ್ಯಾಜ್ಯವನ್ನು ಸುಮಾರು 100 ಲಾರಿಗಳಲ್ಲಿ ತಂದು ಸುರಿಯಲಾಗುತ್ತಿದೆ ಎಂದರು. ಘಟಕದ ಸುತ್ತಮುತ್ತಲ ಶಾಲಾ- ಕಾಲೇಜುಗಳಿವೆ. ಬೇರೆ ಬೇರೆ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳು ಇಲ್ಲಿಯೇ ನೆಲೆಸಿ ವಿದ್ಯಾವ್ಭ್ಯಾಸ ಮಾಡುತ್ತಿದ್ದಾರೆ. ಕಸ ವಾರಗಟ್ಟಲೆ ಕೊಳೆತು ದುರ್ವಾಸನೆ ಬೀರುತ್ತಿರುವುದರಿಂದ ಸುತ್ತಮುತ್ತಲ ನಿವಾಸಿಗಳಿಗೆ ಜೀವನ ನಡೆಸಲೂ ಕಷ್ಟವಾಗಿದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ