ಪ್ರತ್ಯೇಕ ರಸ್ತೆ ಅಪಘಾತ: 8 ಮಂದಿ ಸಾವು

ಬೀದರ್ ನ ಹುಮನಾಬಾದ್ ಮತ್ತು ರಾಯಚೂರಿನ ಮಸ್ಕಿಯಲ್ಲಿ ಭಾನುವಾರ ಸಂಭವಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ 8 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು...
ಅಪಘಾತ(ಸಾಂದರ್ಭಿಕ ಚಿತ್ರ)
ಅಪಘಾತ(ಸಾಂದರ್ಭಿಕ ಚಿತ್ರ)
Updated on

ಹುಮನಾಬಾದ್/ಮಸ್ತಿ: ಬೀದರ್ ನ ಹುಮನಾಬಾದ್ ಮತ್ತು ರಾಯಚೂರಿನ ಮಸ್ಕಿಯಲ್ಲಿ ಭಾನುವಾರ ಸಂಭವಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ 8 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ಕು ಮಂದಿ ಗಾಯಗೊಂಡಿದ್ದಾರೆ.

ಹುಮನಾಬಾದ್-ಕಲಬುರಗಿ ಮಾರ್ಗದ ಜಲಸಂಗಿ ಗ್ರಾಮದ ಬಳಿ ಮೈಲಾರ ಮಲ್ಲಣ್ಣನ ದರ್ಶನ ಪಡೆದು ಕಾರಿನಲ್ಲಿ ವಾಪಸ್ಸಾಗುತ್ತಿದ್ದಾಗ ಎದುರಿನಿಂದ ಬಂದ ಟೆಂಪೋ ಡಿಕ್ಕಿ ಹೊಡೆದು ಕಾರಿನಲ್ಲಿದ್ದ 6 ಮಂದಿ ಸ್ಥಲದಲ್ಲೇ ಮೃತಪಟ್ಟಿದ್ದು, ಒಬ್ಬ ಮಹಿಳೆ ಗಾಯಗೊಂಡಿದ್ದಾರೆ.

ಮೃತರು ಕಲಬುರಗಿ ಜಿಲ್ಲೆಯ ಚಿತ್ತಾಪುರ್ ತಾಲೂಕಿನ ಹೆಬ್ಬಾಳ ಗ್ರಾಮದವರಾಗಿದ್ದಾರೆ. ಕಲಬುರಗಿಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ.

ಮತ್ತೊಂದು ಘಟನೆಯಲ್ಲಿ ಮಸ್ಕಿ ಪಟ್ಟಣದ ರಾಜ್ಯ ಹೆದ್ದಾರಿಯ ಲಿಂಗಸ್ಗೂರು ರಸ್ತೆಯ ಸಿಂಗಸನಹಳ್ಳ ಬಳಿ ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com