ಆರ್ಥಿಕತೆ ಗುಲಾಮಗಿರಿಯತ್ತ ದೇಶ

ಅಂದು ಇಂಗ್ಲಿಷರಿಗೆ ಗುಲಾಮರಾಗಿದ್ದ ನಾವು, ಇಂದು ಆರ್ಥಿಕತೆಯ ಗುಲಾಮರಾಗಿದ್ದೇವೆ. ವಿಶ್ವದ ಶ್ರೇಷ್ಠ ಪ್ರಜಾಪ್ರಭುತ್ವ ಹೊಂದಿರುವ ಭಾರತ, ಪ್ರಜಾಪ್ರತಿನಿಧಿಗಳ ದೇಶವಾಗಿ ಮಾರ್ಪಾಡಾಗುತ್ತಿದೆ. ದೇಶ ಕಟ್ಟುವುದಕ್ಕಾಗಿ ರಾಜಕೀಯ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರೆ...
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)

ಬೆಂಗಳೂರು: ಅಂದು ಇಂಗ್ಲಿಷರಿಗೆ ಗುಲಾಮರಾಗಿದ್ದ ನಾವು, ಇಂದು ಆರ್ಥಿಕತೆಯ ಗುಲಾಮರಾಗಿದ್ದೇವೆ. ವಿಶ್ವದ ಶ್ರೇಷ್ಠ ಪ್ರಜಾಪ್ರಭುತ್ವ ಹೊಂದಿರುವ ಭಾರತ, ಪ್ರಜಾಪ್ರತಿನಿಧಿಗಳ ದೇಶವಾಗಿ ಮಾರ್ಪಾಡಾಗುತ್ತಿದೆ. ದೇಶ ಕಟ್ಟುವುದಕ್ಕಾಗಿ ರಾಜಕೀಯ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರೆ, ಪರಸ್ಪರ ಕಾಲೆಳೆದುಕೊಂಡು ಕಿತ್ತಾಡುತ್ತಿದ್ದಾರೆ. ಇವರಿಗೆ ನಿಜವಾಗಿಯೂ ನಾಚಿಕೆ ಮಾರ್ಯಾದೆ ಇದೆಯೇ?...

ಈಸ್ಟ್ ಇಂಡಿಯಾ ಕಂಪನಿಯೊಂದನ್ನು ಭಾರತದಿಂದ ತೊಲಗಿಸಲು ನೂರಾರು ವರ್ಷ ಹೋರಡ ಬೇಕಾಯಿತು. ಇಂದು ಮೇಕ್ ಇನ್ ಇಂಡಿಯಾಕ್ಕಾಗಿ ಲೆಕ್ಕಲವಿಲ್ಲದಷ್ಟು ಕಂಪನಿಗಳನ್ನು ದೇಶಕ್ಕೆ ಕೆಂಪು ಹಾಸು ಹಾಸಿ ಸ್ವಾಗತ ನೀಡುತ್ತಿರುವ ಪ್ರಧಾನಿ, ಮುಖ್ಯಮಂತ್ರಿಗಳು ಇದರ ಪರಿಣಾಮ ಅರಿತಿದ್ದಾರೆಯೇ?

ಹೀಗೆ ಖಡಕ್ಕಾಗಿ ಪ್ರಶ್ನಿಸಿ, ಕೇಂದ್ರ, ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡವರು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿಯವರು, ನಗರದ ಗಾಂಧಿ ಭವನದಲ್ಲಿ ಹುರುವಾರ ಗವೀಶ್ ಹಿರೇಮಠ ಸಂಪಾದಕ್ವದ ಲಿಂಗೈಕ್ಯ ಶರಣಯ್ಯ ವಸ್ತ್ರದ ಸಂಸ್ಕರಣ ಸಂಪುಟ ಗಾಂಧಿ ನೆನಪು ತಂದ ಗಾಂಧಿ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ರಾಜಕಾರಣಿಗಳ ನಡೆಯನ್ನು ಹಂದಿಗಳು ಈಜುವ ಗಟಾರಕ್ಕೆ ಹೋಲಿಕೆ ಮಾಡಿದ ಅವರು, ಮೇಕ್ ಇನ್ ಇಂಡಿಯಾ ಕಲ್ಪನೆ ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದಾಗಲೇ ಕೇಳಿಬಂದಿತ್ತು. ಇದೀಗ ಮೋದಿ ವಿದೇಶಗಳಿಗೆ ಹೋಗಿ ಭಾರತಕ್ಕೆ ಬನ್ನಿ ನಮ್ಮನ್ನು ಸುಲಿಗೆ ಮಾಡಿ ಎಂದು ಆಹ್ವಾನ ನೀಡುತ್ತಿದ್ದಾರೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್, ಹೆಸರಿಟ್ಟುಕೊಂಡೇ ಯಾರೂ ಹುಟ್ಟುವುದಿಲ್ಲ. ಅದೇ ಸಾಯುವ ಮುನ್ನ ಹೆಸರು ಉಳಿಯುವಂತಹ ಕೆಲಸ ಮಾಡಿರೇಬೇಕು. ನೈತಿಕತೆ, ಮಾನವೀಯತೆ ಅಳವಡಿಸಿಕೊಳ್ಳದ ಶಿಕ್ಷಿತರಿಂದಲೇ ದೇಶದಲ್ಲಿ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಕೆಲ ವ್ಯಕ್ತಿಗಳು, ವಾಕ್ ಸ್ವಾಂತ್ರ್ಯವಿದೆ ಎಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com