ಹಿಂದೂ ರಾಷ್ಟ್ರದ ಉಳಿವಿಗೆ ಹಿಂಸೆಗೂ ಸಿದ್ದರಾಗಬೇಕಿದೆ: ಚಿಮೂ

ದೇಶವನ್ನು ಹಿಂದೂ ರಾಷ್ಟ್ರವಾಗಿ ಉಳಿಸುವುದು ಮತ್ತು ಧರ್ಮಕ್ಕೆ ಸಂಕಟ ಎದುರಾದಾಗ ಹಿಂಸೆಗೆ ಸಿದ್ಧರಿರಬೇಕಾಗುವುದು ಅನಿವಾರ್ಯವಾಗಿರುತ್ತದೆ ಎಂದು ...
ಚಿದಾನಂದ ಮೂರ್ತಿ
ಚಿದಾನಂದ ಮೂರ್ತಿ

ಬೆಂಗಳೂರು: ದೇಶವನ್ನು ಹಿಂದೂ ರಾಷ್ಟ್ರವಾಗಿ ಉಳಿಸುವುದು ಮತ್ತು ಧರ್ಮಕ್ಕೆ ಸಂಕಟ ಎದುರಾದಾಗ ಹಿಂಸೆಗೆ ಸಿದ್ಧರಿರಬೇಕಾಗುವುದು ಅನಿವಾರ್ಯವಾಗಿರುತ್ತದೆ ಎಂದು ಸಂಶೋಧಕ ಡಾ.ಎಂ, ಚಿದಾನಂದಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

ಅಖಿಲ ಭಾರತ ಹಿಂದೂ ಮಹಾಸಭಾ ಶನಿವಾರ ಆಯೋಜಿಸಿದ್ದ ಅಖಿಲ ಭಾರತ ಹಿಂದೂ ಮಹಸಭಾ ಕರ್ನಾಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಧರ್ಮಕ್ಕಾಗಿ ಕೊಲ್ಲು ಎಂದು ಕುರಾನ್ ಹೇಳಿದರೇ ಧರ್ಮಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧನಿರು ಎಂದು ಹಿಂದೂ ಧರ್ಮ ಗ್ರಂಥಗಳು ಹೇಳುತ್ತವೆ. ಹಿಂದೂ ಧರ್ಮ ಗ್ರಂಥಗಳು ಹೇಳುತ್ತವೆ, ಹಿಂದೂ ಧರ್ಮಕ್ಕೆ ಕುತ್ತು ಬರುತ್ತಿರುವ ಈ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಅವರು ಬದುಕಿದ್ದರೇ ತಮ್ಮ  ಅಹಿಂಸಾ ಸಿದ್ಧಾಂತವನ್ನು ಬದಲಿಸಿಕೊಳ್ಳುತ್ತಿದ್ದದರು.

ಕಳೆದ ಜನಗಣತಿಯ ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ ಹಿಂದೂಗಳ ಸಂಖ್ಯೆ ಶೇ. 7ರಷ್ಟು ಇಳಿಕೆಯಾಗಿದೆ. ಮುಸ್ಲಿಮರ ಸಂಖ್ಯೆ ಶೇ.8ರಷ್ಟು ಹೆಚ್ಚಳವಾಗಿದೆ. ಮುಂದೊಂದು ದಿನ ಭಾರತ ಮುಸ್ಲಿಂ ರಾಷ್ಟ್ರವಾಗುವುದರಲ್ಲಿ ಸಂಶಯವೇ ಇಲ್ಲ. ಆದ್ದರಿಂದ ಹಿಂದೂಗಳು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಎಂದು ಹೇಳಿದರು.

ಮಹಾಸಭಾದ ರಾಜ್ಯಾಧ್ಯಕ್ಷ ನಾ. ಸುಬ್ರಮಣ್ಯ ರಾಜು, ಹಿಂದೂ ಮಹಾಸಭಾದ ನಿಕಟ ಪೂರ್ವರಾಜ್ಯ ಅಧ್ಯಕ್ಷ ಶ್ರವಣ್ ಕುಮಾರ್, ನೂತನ ಕಾರ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಮತ್ತಿತರು ಹಾಜರಿದ್ದರು,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com