1952 ರಿಂದ ಕರ್ನಾಟಕವನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದು ಕೇವಲ 13 ಮಹಿಳೆಯರು!

16 ನೇ ಲೋಕಸಭೆ ಮುಕ್ತಾಯಗೊಂಡು 17 ನೇ ಲೋಕಸಭೆಗೆ ಚುನಾವಣೆ ನಡೆಯುತ್ತಿದೆ. ಕಳೆದ 16 ಲೋಕಸಭೆಗೆ ಕರ್ನಾಟಕದಿಂದ ಆಯ್ಕೆಯಾಗಿರುವುದು ಮಾತ್ರ 13ಮಹಿಳೆಯರು ಮಾತ್ರ!
1952 ರಿಂದ ಕರ್ನಾಟಕವನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದು ಕೇವಲ 13 ಮಹಿಳೆಯರು!
1952 ರಿಂದ ಕರ್ನಾಟಕವನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದು ಕೇವಲ 13 ಮಹಿಳೆಯರು!
16 ನೇ ಲೋಕಸಭೆ ಮುಕ್ತಾಯಗೊಂಡು 17 ನೇ ಲೋಕಸಭೆಗೆ ಚುನಾವಣೆ ನಡೆಯುತ್ತಿದೆ. ಕಳೆದ 16 ಲೋಕಸಭೆಗೆ ಕರ್ನಾಟಕದಿಂದ ಆಯ್ಕೆಯಾಗಿರುವುದು ಮಾತ್ರ 13ಮಹಿಳೆಯರು ಮಾತ್ರ!
ಪುರುಷ ಪ್ರಧಾನವೆಂಬಂತಿರುವ ರಾಜಕೀಯದಲ್ಲಿ ಮಹಿಳೆಯರು ಪ್ರವೇಶಿಸಿ ಲೋಕಸಭೆಗೆ ಆಯ್ಕೆಯಾಗುವುದು ಹಲವರಿಗೆ ಸವಾಲಿನ ಸಂಗತಿಯೇ ಸರಿ ಎನ್ನುತ್ತಾರೆ ಮಹಿಳೆಯರು. 
ಕರ್ನಾಟಕದಿಂದ ಆಯ್ಕೆಯಾದ 13 ಮಹಿಳೆಯರ ಪೈಕಿ ಬಹುತೇಕ ಮಹಿಳಾ ಪ್ರತಿನಿಧಿಗಳು ಅಧಿಕಾರದಲ್ಲಿದ್ದದ್ದು ಒಂದು ಅವಧಿಗೆ ಮಾತ್ರ ಎಂಬುದು ಮತ್ತೊಂದು ಗಮನಾರ್ಹ ಸಂಗತಿ. 1952 ಅಂದರೆ ಮೈಸೂರು ರಾಜ್ಯ ಕರ್ನಾಟಕ ಎಂದು ಅಧಿಕೃತವಾಗಿ ಗುರುತಿಸಿಕೊಳ್ಳುವುದಕ್ಕೂ ಮುನ್ನ 5 ಲೋಕಸಭಾ ಚುನಾವಣೆಗಳು ನಡೆದಿದ್ದವು. ಮೈಸೂರು ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾದ ಮೊದಲ ಮಹಿಳಾ ಪ್ರತಿನಿಧಿ ಸರೋಜಿನಿ ಮಹಿಷಿ. 
ಸಂಸತ್ ನಲ್ಲಿ 4 ಅವಧಿಗೆ ಪ್ರತಿನಿಧಿಸಿದ್ದ ಅಪರೂಪದ ದಾಖಲೆಯೂ ಸಹ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಸರೋಜಿನಿ ಮಹಿಷಿ ಅವರ ಹೆಸರಲ್ಲೇ ಇದೆ.
ಇನ್ನು ರಾಜ್ಯದಲ್ಲಿ ಮಹಿಳಾ ಅಭ್ಯರ್ಥಿಗಳನ್ನೊಳಗೊಂಡ ಹೈ ವೋಲ್ಟೇಜ್ ಕದನ ಅಂದರೆ ಅದು ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ಸುಷ್ಮಾ ಸ್ವರಾಜ್ ಹಾಗೂ ದೇವೇಗೌಡರ ವಿರುದ್ಧ ತೇಜಸ್ವಿನಿ ಗೌಡ ಸ್ಪರ್ಧಿಸಿದ್ದ ಚುನಾವಣೆಗಳು 
ತುರ್ತು ಪರಿಸ್ಥಿತಿ ನಂತರ 1977 ರಲ್ಲಿ ರಾಯ್ ಬರೇಲಿ ಕ್ಷೇತ್ರದಿಂದ ರಾಜ್ ನಾರಾಯಣ್ ವಿರುದ್ಧ ಸೋತ ನಂತರ 1978 ರಲ್ಲಿ ಚಿಕ್ಕಮಗಳೂರಿನಿಂದ ಸ್ಪರ್ಧಿಸಿದ್ದ ಇಂದಿರಾ ಗಾಂಧಿ ಕರ್ನಾಟಕದಿಂದ ರಾಜಕೀಯ ಪುನರ್ಜನ್ಮ ಪಡೆದಿದ್ದರು. ಸುಷ್ಮಾ ಸ್ವರಾಜ್ ಹಾಗೂ ಸೋನಿಯಾ ಗಾಂಧಿ 1999 ರಲ್ಲಿ ಸೋನಿಯಾ ಗಾಂಧಿ ವಿರುದ್ಧ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.  ಬಳ್ಳಾರಿ ಹಾಗೂ ಅಮೇಥಿಯಿಂದ ಸ್ಪರ್ಧಿಸಿದ್ದ ಸೋನಿಯಾ ಗಾಂಧಿ ಅಮೇಥಿಯನ್ನು ಆಯ್ಕೆ ಮಾಡಿಕೊಂಡು ಬಳ್ಳಾರಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. 
ಇತ್ತೀಚಿನ ದಶಕದಲ್ಲಿ 2004 ರಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ವಿರುದ್ಧ ಕನಕಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ತೇಜಸ್ವಿನಿ ಗೌಡ 1 ಲಕ್ಷ ಮತಗಳ ಅಂತರದಿಂದ ಮಾಜಿ ಪ್ರಧಾನಿಯನ್ನು ಮಣಿಸಿದ್ದು ಇಂದಿಗೂ ಇತಿಹಾಸ. 
ಮಹಿಳೆಯೊಬ್ಬರಿಗೆ ರಾಜಕೀಯ ಕುಟುಂಬದ ಹಿನ್ನೆಲೆಯಿದ್ದರೆ ಚುನಾವಣೆಗೆ ಸ್ಪರ್ಧಿಸುವ ಅವಕಾಶಗಳು ಹೆಚ್ಚು. ಯಾವುದೇ ಪಕ್ಷವಾದರೂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೊದಲು ಗೆಲುವಿನ ಸಾಮರ್ಥ್ಯವನ್ನು ಪರಿಗಣಿಸಲಾಗುತ್ತದೆ. ರಾಜಕೀಯ ಇಂದಿಗೂ ಪುರುಷ ಪ್ರಧಾನವಾದದ್ದು ಎಂದು ವಿಧಾನ ಪರಿಷತ್ ಸದಸ್ಯೆಯಾಗಿರುವ ತೇಜಸ್ವಿನಿ ಹೇಳಿದ್ದಾರೆ. 
ಈಗ 2019 ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ತೇಜಸ್ವಿನಿ ಅನಂತ್ ಕುಮಾರ್ ಹಾಗೂ ಮಂಡ್ಯದಿಂದ ಸುಮಲತಾ ಅಂಬರೀಷ್ ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. 
ಇದೇ ವೇಳೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ಜಯನಗರ ಶಾಸಕಿ ಸೌಮ್ಯ ರೆಡ್ಡಿ, ಪಂಚಾಯತ್ ಹಾಗೂ ನಗರಸಭೆಗಳಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ನೀಡಲಾಗಿದೆ. ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಹೆಚ್ಚು ಮಹಿಳೆಯರು ಸ್ಪರ್ಧಿಸಿ ಗೆಲ್ಲಬೇಕಾದರೆ ಶೇ.33 ರಷ್ಟು ಮೀಸಲಾತಿ ಮಸೂದೆ ನೀಡಬೇಕೆಂದು ಹೇಳಿದ್ದಾರೆ. 
ಇನ್ನು ಮಹಿಳೆಯರು ರಾಜಕಾರಣಕ್ಕೆ ಬರುವುದರ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಮಾತನಾಡಿದ್ದು, ಶಿಕ್ಷಣ ಹಾಗೂ  ಕ್ರಿಯಾತ್ಮಕ ವ್ಯಕ್ತಿತ್ವವಷ್ಟೇ ರಾಜಕೀಯಕ್ಕೆ ಅರ್ಹತೆಯಾಗುವುದಿಲ್ಲ. ಹಣಬಲ ತೋಳ್ಬಲವೂ ಅಗತ್ಯವಿರುತ್ತದೆ. ಇಂತಹ ವಾತಾವರಣಗಳಲ್ಲಿ ಮಹಿಳೆಯರು ಚುನಾವಣೆ ಎದುರಿಸುವುದು ಕಷ್ಟ ಸಾಧ್ಯ.  ಈಗಾಗಲೇ ಹಲವು ಬದಲಾವಣೆಗಳಾಗಿವೆ, ಇನ್ನು ಮುಂದಿನ ದಿನಗಳಲ್ಲಿ ಮತ್ತ ಬದಲಾವಣೆಯಾಗಲಿವೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com