ಟಿಎಂಸಿಗೆ ಮತ ಹಾಕದ ಪತ್ನಿ ಬಾಯಿಗೆ ಆ್ಯಸಿಡ್ ಸುರಿದ ಪತಿ!

ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದಿದ್ದಕ್ಕೆ ಆ ಪಕ್ಷದ ಬೆಂಬಲಿಗನೊಬ್ಬ ತನ್ನ ಹೆಂಡತಿ ಮೇಲೆ ಹಲ್ಲೆ ನಡೆಸಿ, ಬಾಯಿಗೆ ಆ್ಯಸಿಡ್ ಸುರಿದಿರುವ ಘಟನೆ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಲ್ಕತ್ತಾ:  ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದಿದ್ದಕ್ಕೆ ಆ ಪಕ್ಷದ ಬೆಂಬಲಿಗನೊಬ್ಬ ತನ್ನ ಹೆಂಡತಿ ಮೇಲೆ ಹಲ್ಲೆ ನಡೆಸಿ, ಬಾಯಿಗೆ  ಆ್ಯಸಿಡ್ ಸುರಿದಿರುವ ಘಟನೆ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಈ ರೀತಿ ಹಲ್ಲೆಗೊಳಗಾದ  ಅಂಸುರಾ ಬಿಬಿ ಎಂಬ ಮಹಿಳೆಗೆ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ ಬಳಿಕ ಮುರ್ಷಿದಾಬಾದ್ ನಲ್ಲಿರುವ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.  ಆಕೆಯ ಶ್ವಾಸನಾಳ ಸುಟ್ಟು ಹೋಗಿದ್ದು, ಮುಂದಿನ 48 ಗಂಟೆಗಳ ಕಾಲ ವೈದ್ಯಕೀಯ ನಿಗಾವಣೆಯಲ್ಲಿ ಇಡಲಾಗಿದೆ.

ತಾಯಿ ಅಂಸುರಾ ಬಿಬಿಯ ತಲೆ ಕೂದಲನ್ನು ಹಿಡಿದು ಎಳೆದಾಡಿ ಹಲ್ಲೆ ನಡೆಸಿದ ನಂತರ ಬಾಯಿಗೆ ಆ್ಯಸಿಡ್ ಸುರಿಯಲಾಗಿದೆ ಎಂದು ಆಕೆಯ ಮಗ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.  ಈ  ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ಮತ ಚಲಾವಣೆ ಮಾಡಿ ಮನೆಗೆ ವಾಪಾಸ್ ಆದ ನಂತರ ತನ್ನ ತಾಯಿ ಮೇಲೆ ತಂದೆಯ ಕುಟುಂಬದವರಿಂದ ಹಲ್ಲೆ ನಡೆಸಲಾಗಿದೆ ಎಂದು ರುಪ್ಸಾನ್ ಹೇಳಿದ್ದಾನೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com