ಲೈಲಾ-ಮಜ್ನುಗಿಂತ ಪ್ರಧಾನಿ ಮೋದಿ-ನಿತೀಶ್ ಕುಮಾರ್ ಸ್ಟ್ರಾಂಗ್ ಜೋಡಿಯಂತೆ!

ಪ್ರಧಾನಿ ಮೋದಿ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಅವರದ್ದು ಲೈಲಾ ಮಜ್ನುಗಿಂತಲೂ ಸ್ಟ್ರಾಂಗ್ ಜೋಡಿ ಎಂದು ಎಐಎಂಎಂ ನಾಯಕ ಅಸಾವುದ್ದೀನ್ ಒವೈಸಿ ಲೇವಡಿ ಮಾಡಿದ್ದಾರೆ.

Published: 14th April 2019 12:00 PM  |   Last Updated: 14th April 2019 09:25 AM   |  A+A-


Love of Modi-Nitish Kumar is stronger than Laila-Majnu Says Asaduddin Owaisi

ಸಂಗ್ರಹ ಚಿತ್ರ

Posted By : SVN SVN
Source : ANI
ನವದೆಹಲಿ: ಪ್ರಧಾನಿ ಮೋದಿ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಅವರದ್ದು ಲೈಲಾ ಮಜ್ನುಗಿಂತಲೂ ಸ್ಟ್ರಾಂಗ್ ಜೋಡಿ ಎಂದು ಎಐಎಂಎಂ ನಾಯಕ ಅಸಾವುದ್ದೀನ್ ಒವೈಸಿ ಲೇವಡಿ ಮಾಡಿದ್ದಾರೆ.

ಹೈದರಾಬಾದ್ ನಲ್ಲಿ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿರುವ ಒವೈಸಿ ಇಬ್ಬರ ಪ್ರೀತಿ ಲೈಲಾ ಮಜ್ನುಗಿಂತಲೂ ಸ್ಟ್ರಾಂಗ್ ಆಗಿದೆ. ಇಬ್ಬರೂ ಎಂಥಾ ಜೋಡಿ ಎಂದರೆ ಲೈಲಾ ಮಜ್ನುಗಿಂತಲೂ ಸ್ಟ್ರಾಂಗ್. ಇವರಿಬ್ಬರೂ ಜತೆ ಸೇರಿದರೆ ದೇಶದಲ್ಲಿ ಕೋಮು ಸೌಹಾರ್ದ ಮುರಿಯುತ್ತಾರೆ ಎಂದೇ ಅರ್ಥ. ಒಂದು ವೇಳೆ ಈ ಇಬ್ಬರ ಲವ್ ಸ್ಟೋರಿ ಬರೆದರೆ, ಯಾರು ಲೈಲಾ ಯಾರು ಮಜ್ನು ಎಂದು ಮಾತ್ರ ಕೇಳಬೇಡಿ. ಈ ಬಗ್ಗೆ ನೀವೆ ನಿರ್ಧರಿಸಿ..ಕೊಳ್ಳಿ,  ಎಂದು ಒವೈಸಿ ವ್ಯಂಗ್ಯ ಮಾಡಿದ್ದಾರೆ. 

ಇನ್ನು ಈ ಹಿಂದೆ ಪ್ರಧಾನಿ ಮೋದಿಯನ್ನು ಸುಳ್ಳುಗಳ ಫ್ಯಾಕ್ಟರಿ ಎಂದು ಒವೈಸಿ ಟೀಕಿಸಿದ್ದರು.
Stay up to date on all the latest ದೇಶ news with The Kannadaprabha App. Download now
facebook twitter whatsapp