‘ಚೌಕಿದಾರ್​​ ಚೋರ್​​​ ಹೈ’ ಜಾಹೀರಾತಿಗೆ ಚುನಾವಣಾ ಆಯೋಗ ನಿರ್ಬಂಧ; ಕಾಂಗ್ರೆಸ್​​​ಗೆ​ ಭಾರೀ ಹಿನ್ನಡೆ!

ಹಾಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜನಪ್ರಿಯ ಸ್ಲೋಗನ್ ಗಳಲ್ಲಿ ಒಂದಾಗಿದ್ದ 'ಚೌಕೀದಾರ್ ಚೋರ್‌ ಹೈ' ಜಾಹಿರಾತನ್ನು ಕೇಂದ್ರ ಚುನಾವಣಾ ಆಯೋಗ ನಿಷೇಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಹಾಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜನಪ್ರಿಯ ಸ್ಲೋಗನ್ ಗಳಲ್ಲಿ ಒಂದಾಗಿದ್ದ 'ಚೌಕೀದಾರ್ ಚೋರ್‌ ಹೈ' ಜಾಹಿರಾತನ್ನು ಕೇಂದ್ರ ಚುನಾವಣಾ ಆಯೋಗ ನಿಷೇಧಿಸಿದೆ.
ಈ ಬಗ್ಗೆ ಗುರುವಾರ ಚುನಾವಣಾ ಆಯೋಗ ತನ್ನ ಅಧಿಕೃತ ಆದೇಶ ಹೊರಡಿಸಿದ್ದು, 'ಚೌಕೀದಾರ್ ಚೋರ್‌ ಹೈ' ಜಾಹೀರಾತು ನಿಷೇಧಿಸಿದೆ. ಮೊದಲಿಗೆ ಮಧ್ಯಪ್ರದೇಶ ಕಾಂಗ್ರೆಸ್ ಘಟಕವು ಚೌಕೀದಾರ್‌ ಚೋರ್ ಹೈ ಎನ್ನುವ ಜಾಹೀರಾತು ಪ್ರಕಟಿಸುತ್ತಿತ್ತು. ಇದನ್ನು ಪ್ರಶ್ನಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ಮೊರೆ ಹೋಗಿತ್ತು. ಇದೀಗ ಬಿಜೆಪಿ ದೂರಿನ ಅನ್ವಯ ಈ ಜಾಹೀರಾತಿಗೆ ಆಯೋಗ ನಿರ್ಬಂಧ ಹೇರಿದೆ. ಇನ್ನೊಂದೆಡೆ ಸುಪ್ರೀಂಕೋರ್ಟ್ ನಲ್ಲಿಯೂ ಬಿಜೆಪಿ ದೂರು ದಾಖಲಿಸಿದ್ದು, ಕಾಂಗ್ರೆಸ್​​ ಅಧ್ಯಕ್ಷ ರಾಹುಲ್​​​ ಗಾಂಧಿ ಮತ್ತಿತ್ತರೆ ನಾಯಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ ಎನ್ನಲಾಗಿದೆ.
ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ‘ಚೌಕಿದಾರ್ ಚೋರ್ ಹೈ’ ಎಂದು ಪ್ರಧಾನಿ ಮೋದಿಯನ್ನು ಟೀಕಿಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ‘ಮೈ ಭೀ ಚೌಕಿದಾರ್’(ನಾನೂ ಕಾವಲುಗಾರ) ಅಭಿಯಾನ ಶುರು ಮಾಡಿದ್ದರು. ಬಳಿಕ ಈ ಅಭಿಯಾನಕ್ಕೆ ವ್ಯಾಪಕ ಬೆಂಬಲ ದೊರೆತು, ಬಿಜೆಪಿ ನಾಯಕರೂ ಸೇರಿದಂತೆ ಬಿದೆಪಿ ಕಾರ್ಯಕರ್ತ ಹಾಗೂ ಅಭಿಮಾನಿಗಳೂ ಕೂಡ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಸದ್ಯ ಮೈ ಭೀ ಚೌಕಿದಾರ್​’ (ನಾನೂ ಕಾವಲುಗಾರ) ಅಭಿಯಾನದ ದೇಶಾದ್ಯಂತ ಭಾರೀ ಜೋರಾಗಿ ನಡೆಯುತ್ತಿದೆ. ಈಗಾಗಲೇ ಈ ಅಭಿಯಾನದ ಭಾಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಟ್ವಿಟರ್​ ಖಾತೆಯಲ್ಲಿ ತಮ್ಮ ಹೆಸರನ್ನು ‘ಚೌಕಿದಾರ್​ ನರೇಂದ್ರ ಮೋದಿ’ ಎಂದು ಬದಲಿಸಿಕೊಂಡಿದ್ದಾರೆ.
ಪ್ರಧಾನಿ ಮೋದಿ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ, ಕೇಂದ್ರ ಸಚಿವ ಪಿಯೂಷ್​ ಗೋಯಲ್​ ಸೇರಿದಂತೆ ಹಲವು ಬಿಜೆಪಿ ನಾಯಕರು ತಮ್ಮ ಹೆಸರಿನ ಹಿಂದೆ ಚೌಕಿದಾರ್​ ಎಂದು ಸೇರಿಸಿಕೊಂಡು ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​ ಯಡಿಯೂರಪ್ಪ ಸೇರಿದಂತೆ ಕರ್ನಾಟಕ ಬಿಜೆಪಿಯ ಬಹುತೇಕ ನಾಯಕರೂ ಕೂಡ ತಮ್ಮ ತಮ್ಮ ಹೆಸರಿನ ಮುಂದೆ ಚೌಕಿದಾರ್ ಎಂದು ಸೇರಿಸಿಕೊಳ್ಳುವ ಮೂಲಕ ಅಭಿಯಾನಕ್ಕೆ ಬೆಂಬಲಿಸಿದ್ದಾರೆ.
ರಫೇಲ್ ಹಗರಣದ ವಿಚಾರವಾಗಿ ಪ್ರಧಾನಿ ಮೋದಿ ಅವರೇ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಲು ರಾಹುಲ್ ಗಾಂಧಿ ಅವರು 'ಚೌಕಿದಾರ್ ಚೋರ್ ಹೈ' ಎಂಬ ಪದ ಪ್ರಯೋಗ ಮಾಡಿದ್ದರು. ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬರ್ಥದಲ್ಲಿ ರಾಹುಲ್ ಆರೋಪ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com