ಆತಿಶಿ ವಿವಾದ: ಗಂಭೀರ್ ಯಾವುದೇ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಲ್ಲ- ಹರ್ಭಜನ್ ಸಿಂಗ್

ಗೌತಮ್ ಗಂಭೀರ್ ಎಂದಿಗೂ ಯಾವುದೇ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವುದಿಲ್ಲ ಎಂದು ಹರ್ಭಜನ್ ಸಿಂಗ್ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.

Published: 10th May 2019 12:00 PM  |   Last Updated: 10th May 2019 02:55 AM   |  A+A-


Harbhajan Singh, Gautam Gambhir

ಗೌತಮ್ ಗಂಭೀರ್,ಹರ್ಭಜನ್ ಸಿಂಗ್

Posted By : ABN ABN
Source : PTI
ನವದೆಹಲಿ: ಪೂರ್ವ ದೆಹಲಿಯ ಎಎಪಿ ಅಭ್ಯರ್ಥಿ ಆತಿಶಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯುಳ್ಳ ಕಾಗದ ಪತ್ರಗಳನ್ನು ಹಂಚಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಅವರನ್ನು ಹರ್ಭಜನ್ ಸಿಂಗ್ ಬೆಂಬಲಿಸಿದ್ದಾರೆ.

ಗೌತಮ್ ಗಂಭೀರ್ ಎಂದಿಗೂ ಯಾವುದೇ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವುದಿಲ್ಲ ಎಂದು ಹರ್ಭಜನ್ ಸಿಂಗ್ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.

ಗೌತಮ್ ಗಂಭೀರ್ ಅವರ ಬಗ್ಗೆ ನಿನ್ನೆ ಕೇಳಿಬಂದ ಆರೋಪ ಕೇಳಿ ಶಾಕ್ ಆಯಿತು. ಅವನನ್ನು ಚೆನ್ನಾಗಿ ಬಲ್ಲೆ, ಯಾವುದೇ ಮಹಿಳೆಯರ ಬಗ್ಗೆ ಎಂದಿಗೂ ಕೆಟ್ಟದಾಗಿ ಮಾತನಾಡಿಲ್ಲ, ಆತ ಗೆಲ್ಲಲಿ ಅಥವಾ ಸೋಲಲಿ ಅದು ಬೇರೆ ವಿಷಯ ಆದರೆ,  ಮನುಷ್ಯ ಈ ಎಲ್ಲಾದಕ್ಕಿಂತ ಮೇಲಿದ್ದಾನೆ ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಕಳೆದ ತಿಂಗಳಷ್ಟೇ ರಾಜಕಾರಣ ಪ್ರವೇಶಿಸಿರುವ ಗಂಭೀರ್ , ಪೂರ್ವ ದೆಹಲಿಯ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ತಮ್ಮ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ನಿನ್ನೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಆತಿಶಿಗೆ ಸರಣಿ ಟ್ವೀಟ್ ಮಾಡಿದ್ದ ಗಂಭೀರ್, ಒಂದು ವೇಳೆ ನನ್ನ ವಿರುದ್ಧದ ಆರೋಪ ಸಾಬೀತಾದರೆ ಕಣದಿಂದ ಹಿಂದೆ ಸರಿಯುವುದಾಗಿ ಸವಾಲು ಹಾಕಿದ್ದರು.

Stay up to date on all the latest ದೇಶ news with The Kannadaprabha App. Download now
facebook twitter whatsapp