ಮತಗಟ್ಟೆ ಸಮೀಕ್ಷೆಗೆ ಸಂಬಂಧಿಸಿದ ಎಲ್ಲಾ ಟ್ವೀಟ್ ಗಳನ್ನು ತೆಗೆಯುವಂತೆ ಟ್ವಿಟರ್ ಗೆ ಆಯೋಗ ಆದೇಶ

2019ರ ಲೋಕಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಗೆ ಸಂಬಂಧಿಸಿದ ಎಲ್ಲಾ ಟ್ವೀಟ್ ಗಳನ್ನು ತೆಗೆಯುವಂತೆ ಭಾರತೀಯ ಚುನಾವಣಾ ಆಯೋಗ ಭಾರತದ ಟ್ವೀಟರ್ ಗೆ ಆದೇಶಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: 2019ರ ಲೋಕಸಭಾ ಚುನಾವಣೆಯ ಮತಗಟ್ಟೆ  ಸಮೀಕ್ಷೆಗೆ ಸಂಬಂಧಿಸಿದ ಎಲ್ಲಾ ಟ್ವೀಟ್ ಗಳನ್ನು ತೆಗೆಯುವಂತೆ ಭಾರತೀಯ ಚುನಾವಣಾ ಆಯೋಗ ಭಾರತದ ಟ್ವೀಟರ್ ಗೆ ಆದೇಶಿಸಿದೆ.

ಇದಕ್ಕೂ ಮುನ್ನ ಚುನಾವಣಾ ಸಮೀಕ್ಷೆ ಪ್ರಕಟಿಸಿದ ಮೂರು ಮಾಧ್ಯಮ ಸಂಸ್ಥೆಗಳ ಮೇಲೆ ಏಕೆ ಕ್ರಮ ಕೈಗೊಳ್ಳಬಾರದೆಂದು ಎಂದು ಹೇಳಿ ಅವುಗಳಿಂದ ವಿವರಣೆ ಕೋರಿದೆ.

ಕ್ಷೇತ್ರವೊಂದರಲ್ಲಿ ಚುನಾವಣಾ ಮುಗಿಯುವ  ಒಂದು ಗಂಟೆ ಮುಂಚಿತವಾಗಿ  ಟಿವಿ, ಇಂಟರ್ನೆಟ್ ಅಥವಾ ಯಾವುದೇ ಮಾಧ್ಯಮದಲ್ಲೂ  ಮತಗಟ್ಟೆಗೆ ಸಂಬಂಧಿಸಿದ ವಿಷಯವನ್ನು ಪ್ರಕಟಿಸಬಾರೆಂದು ಜನಪ್ರತಿನಿಧಿಗಳ ಕಾಯ್ದೆ 1951ರ ಸೆಕ್ಷನ್  126 ನಿಷೇಧಿಸಿದೆ.

ಏಳು ಹಂತಗಳ ಲೋಕಸಭಾ ಚುನಾವಣೆ ಏಪ್ರಿಲ್ 12 ರಿಂದ ಆರಂಭವಾಗಿದ್ದು, ಮೇ 19 ರಂದು ಕೊನೆಗೊಳ್ಳಲಿದೆ. ಮೇ 23 ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com