ಸೋತಿರುವವರು ಎಲ್ಲವನ್ನೂ ಕಳೆದುಕೊಂಡಿಲ್ಲ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಕ್ಷ ಗೆಲುವಿನ ನಗೆ ಬೀರುತ್ತಿರುವ ಸಂದರ್ಭದಲ್ಲಿ ಪ್ರತಿಕ್ರಿಯೆ ...

Published: 23rd May 2019 12:00 PM  |   Last Updated: 23rd May 2019 02:04 AM   |  A+A-


Mamata Banerjee

ಮಮತಾ ಬ್ಯಾನರ್ಜಿ

Posted By : SUD SUD
Source : The New Indian Express
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಕ್ಷ ಗೆಲುವಿನ ನಗೆ ಬೀರುತ್ತಿರುವ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಗೆದ್ದವರಿಗೆ ಅಭಿನಂದನೆಗಳು, ಆದರೆ ಸೋತವರು ಎಲ್ಲ ಕಳೆದುಕೊಂಡವರಲ್ಲ ಎಂದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ಗೆಲುವು ಕಾಣದಂತೆ ತಮ್ಮ ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ ನ್ನು ಜಯದ ಉತ್ತುಂಗಕ್ಕೆ ಕೊಂಡೊಯ್ಯಬೇಕೆಂದು ಮಮತಾ ಬ್ಯಾನರ್ಜಿ ಭಾರೀ ಪ್ರಯತ್ನ ಪಟ್ಟಿದ್ದರು. ಆದರೆ ಬಿಜೆಪಿ ಸಹ ಬಿಟ್ಟುಕೊಡಲಿಲ್ಲ. ಪ್ರಧಾನಿ ಮೋದಿಯಾಗಿ ಅಮಿತ್ ಶಾ ಎಲ್ಲರೂ ವ್ಯಾಪಕವಾಗಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. 42 ಕ್ಷೇತ್ರಗಳಲ್ಲಿ ಸುತ್ತಾಡಿ ಜನಮನ ಗೆಲ್ಲಲು ಪ್ರಯತ್ನಿಸಿದ್ದರು.

ಇದರಿಂದಾಗಿ ತೃಣಮೂಲ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ 23 ಸ್ಥಾನಗಳನ್ನು ಗೆದ್ದರೆ ಬಿಜೆಪಿ ಸ್ಪರ್ಧಿಸಿದ 42 ಕ್ಷೇತ್ರಗಳಲ್ಲಿ 17 ಕ್ಷೇತ್ರಗಳಲ್ಲಿ ಕಮಲ ಅರಳುವಂತೆ ಮಾಡಿದೆ.

ನಾವು ಈ ಸಂದರ್ಭದಲ್ಲಿ ಸಂಪೂರ್ಣ ಪರಾಮರ್ಶೆ ನಡೆಸಿ ನಂತರ ನಮ್ಮ ಪರಾಮರ್ಶೆಯನ್ನು ನಿಮ್ಮಲ್ಲಿ ಹಂಚಿಕೊಳ್ಳುತ್ತೇವೆ. ಮತ ಎಣಿಕೆ ಕಾರ್ಯ ಸಂಪೂರ್ಣ ಮುಗಿದ ನಂತರ ವಿವಿಪ್ಯಾಟ್ ಹೊಂದಿಕೆಯಾಗಲಿ ಎಂದು ಟ್ವೀಟ್ ಮಾಡಿದ್ದಾರೆ.

ಇದುವರೆಗೆ ಪಶ್ಚಿಮ ಬಂಗಾಳದಲ್ಲಿ 34 ತೃಣಮೂಲ ಕಾಂಗ್ರೆಸ್ ಸಂಸದರು ಮತ್ತು ಬಿಜೆಪಿಯ ಕೇವಲ ಇಬ್ಬರು ಸಂಸದರು ಮಾತ್ರ ಇದ್ದರು. ಕಾಂಗ್ರೆಸ್ ಮತ್ತು ಸಿಪಿಎಂನ ಎಡರಂಗದ ಆರು ಸಂಸದರನ್ನು ಹೊಂದಿದ್ದರು.
Stay up to date on all the latest ದೇಶ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp