ರಾಜ್ಯದ 14 ಕ್ಷೇತ್ರಗಳಲ್ಲಿ ನಾಳೆ ಮತದಾನ; ತೀವ್ರ ಪೊಲೀಸ್ ಭದ್ರತೆ

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಾಳೆ ಮತ್ತು ಎರಡನೇ ಹಂತದ ಚುನಾವಣೆ ...
ಪೊಲೀಸ್ ಸಿಬ್ಬಂದಿ ನಿಯೋಜನೆ
ಪೊಲೀಸ್ ಸಿಬ್ಬಂದಿ ನಿಯೋಜನೆ
Updated on

ಬೆಂಗಳೂರು: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಾಳೆ ಮತ್ತು ಎರಡನೇ ಹಂತದ ಚುನಾವಣೆ ನಾಡಿದ್ದು 23ರಂದು ನಡೆಯಲಿದ್ದು ಈ ಸಂದರ್ಭದಲ್ಲಿ ಮತಗಟ್ಟೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

ಪೊಲೀಸರು, ಗೃಹ ಇಲಾಖೆ ರಕ್ಷಣಾ ಪಡೆ ಮತ್ತು ಜೈಲಿನ ವಾರ್ಡನ್ ಗಳು ಸೇರಿದಂತೆ ಸುಮಾರು 90 ಸಾವಿರ ಸಿಬ್ಬಂದಿ ಮತದಾನದ ದಿನ ರಕ್ಷಣೆಗೆ ನಿಯೋಜನೆಗೊಂಡಿದ್ದಾರೆ.
ಯಾವುದೇ ಅಹಿತಕರ ಘಟನೆ ನಡೆಯದೆ ಚುನಾವಣೆ ಸುಗಮವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಡಿಜಿ ಮತ್ತು ಐಜಿಪಿ ನೀಲಮಣಿ ಎನ್ ರಾಜು ತಿಳಿಸಿದರು.
ಕರ್ನಾಟಕ ನಕ್ಸಲ್ ಚಟುವಟಿಕೆಗಳಿಂದ ಮುಕ್ತವಾಗಿದ್ದು ಚಿಕ್ಕಮಗಳೂರು, ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಮಂಡ್ಯ ಕ್ಷೇತ್ರ ಅತ್ಯಂತ ಸೂಕ್ಷ್ಮ ಕ್ಷೇತ್ರವಾಗಿದ್ದು ಅಲ್ಲಿ ಮತದಾನಕ್ಕೆ ಮುಕ್ತ ವಾತಾವರಣ ಸಿಗಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ, ಕೆಲವು ಸಣ್ಣಪುಟ್ಟ ಅಹಿತಕರ ಘಟನೆಗಳು ಬಿಟ್ಟರೆ ಮಂಡ್ಯದಲ್ಲಿ ಕೂಡ ಚುನಾವಣಾ ಪ್ರಚಾರ ಶಾಂತವಾಗಿ ನಡೆಯಿತು. ಐಜಿಪಿ ದಕ್ಷಿಣ ವಲಯ ಮಂಡ್ಯದಲ್ಲಿ ಕುಳಿತು ಅಗತ್ಯ ರಕ್ಷಣಾ ಕ್ರಮ ಕೈಗೊಂಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಕಮಲ್ ಪಂತ್, ಸೀಮಿತ ಕೇಂದ್ರ ಪೊಲೀಸ್ ಪಡೆ ಮತ್ತು ರಾಜ್ಯ ಪೊಲೀಸರು ಮತದಾನ ದಿನ ಮತಗಟ್ಟೆಗಳಲ್ಲಿ ಹೆಚ್ಚುವರಿ ಭದ್ರತೆ ಕಲ್ಪಿಸಲಿದೆ. ಕೇಂದ್ರ ಸೇನಾ ಪೊಲೀಸ್ ಪಡೆಗಳ 10 ಪಡೆಯನ್ನು ರಾಜ್ಯಕ್ಕೆ ಕಳುಹಿಸಲಾಗಿದೆ. ರಾಜ್ಯಾದ್ಯಂತ 58 ಸಾವಿರದ 225 ಮತಗಟ್ಟೆಗಳಿದ್ದು ಅವುಗಳಲ್ಲಿ ಶೇಕಡಾ 20ರಷ್ಟು ಸೂಕ್ಷ್ಮ ಮತಗಟೇಟೆಗೆಂದು ಘೋಷಿಸಲಾಗಿದೆ. ಅವುಗಳಲ್ಲಿ 90 ಸಾವಿರದ 997 ಅಧಿಕಾರಿಗಳು ಮತಗಟ್ಟೆಗಳ ಭದ್ರತೆಗೆ ಅಗತ್ಯವಾಗಿದೆ.  ರಾಜ್ಯ ಪೊಲೀಸರಲ್ಲಿ 49 ಸಾವಿರದ 476 ಸಿವಿಲ್ ಪೊಲೀಸರು, ಹೋಂ ಗಾರ್ಡ್ ಗಳು, ಸಿವಿಲ್ ಡಿಫೆನ್ಸ್, ಜೈಲ್ ವಾರ್ಡರ್ ಗಳು ಮತ್ತು ಅರಣ್ಯ ಸಿಬ್ಬಂದಿ ಇದ್ದಾರೆ ಎಂದು ವಿವರಿಸಿದರು.
ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಡ್ ಕಾನ್ಸ್ಟೇಬಲ್ ಮತ್ತು ಹೋಂ ಗಾರ್ಡ್ ಗಳನ್ನು ಮತ್ತು ಸಾಮಾನ್ಯ ಮತಗಟ್ಟೆಗಳಲ್ಲಿ ಒಬ್ಬ ಪೊಲೀಸ್ ಕಾನ್ಸ್ಟೇಬಲ್ ಮತ್ತು ಹೋಂ ಗಾರ್ಡ್ ನ್ನು ನಿಯೋಜಿಸಲಾಗಿದೆ. ಅಲ್ಲದೆ ಸೆಕ್ಟರ್ ಮೊಬೈಲ್ಸ್ ಮತ್ತು ಸೂಪರ್ವೈಸರಿ ಮೊಬೈಲ್ ಗಳನ್ನು ನಿಯೋಜಿಸಲಾಗುತ್ತದೆ. ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ 18 ಕೇಸುಗಳನ್ನು ದಾಖಲಿಸಲಾಗಿದ್ದು ಎಲ್ಲಾ ಕೇಸುಗಳು ತನಿಖೆ ಹಂತದಲ್ಲಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com