ಕರ್ನಾಟಕ

ಬೆಂಗಳೂರು: ಲೈವ್ ಬ್ಯಾಂಡ್ ಮೇಲೆ ದಾಳಿ, 17 ಮಂದಿ ಬಂಧನ; 10 ಯುವತಿಯರ ರಕ್ಷಣೆ

ಬೆಂಗಳೂರು: ಲೈವ್ ಬ್ಯಾಂಡ್ ಮೇಲೆ ದಾಳಿ, 17 ಮಂದಿ ಬಂಧನ; 10 ಯುವತಿಯರ ರಕ್ಷಣೆ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ನಗರದ  ಶ್ರಿನಿವಾಸ ಬಾರ್ ಅಂಡ್ ರೆಸ್ಟೂರೆಂಟ್ ಹೆಸರಿನಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಲೈವ್ ಬ್ಯಾಂಡ್ ಗಳ ಮೇಲೆ ದಾಳಿ ನಡೆಸಿರುವ ಪೊಲೀಸರು, ಬಾರ್ ಮಾಲೀಕರು, ವ್ಯವಸ್ಥಾಪಕರು ಹಾಗೂ 13 ಗ್ರಾಹಕರು ಸೇರಿದಂತೆ ಒಟ್ಟು 17 ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ, ಪಂಜಾಬ್ ಹಾಗೂ ದೆಹಲಿಯ 10 ಯುವತಿಯರನ್ನು ರಕ್ಷಿಸಿದ್ದಾರೆ.
ದಾಳಿಯ ವೇಳೆ ಬಾರ್ ಮಾಲೀಕರು ಹಾಗೂ ವ್ಯವಸ್ಥಾಪಕರಾದ ಸಂತೋಷ್, ಅಭಿಷೇಕ್, ಉಮೇಶ್, ರಮೇಶ್ ಹಾಗೂ 13 ಗ್ರಾಹಕರನ್ನು ಬಂಧಿಸಲಾಗಿದೆ. ಮತ್ತೊಬ್ಬ ಬಾರ್ ಮಾಲೀಕ ವೆಂಕಟೇಶ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ಷಿಸಲಾಗಿರುವ ಯುವತಿಯರನ್ನು ಬಾರ್ ಗರ್ಲ್ ಗಳೆಂದು ನೇಮಕ ಮಾಡಿಕೊಂಡು, ಅವರನ್ನು ಗ್ರಾಹಕರ ಬಳಿ ಅಶ್ಲೀಲವಾಗಿ ನೃತ್ಯ ಮಾಡುವಂತೆ ಒತ್ತಾಯಿಸುತ್ತಿದ್ದರು, ಇದರಿಂದ  ಹುಚ್ಚೆದ್ದ ಗ್ರಾಹಕರು ನೃತ್ಯ ಮಾಡುವ ಯುವತಿಯರ ಮೇಲೆ ನೋಟುಗಳನ್ನು ಎಸೆಯುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ದಾಳಿಯ ವೇಳೆ ಪೊಲೀಸರು 19 ಮೊಬೈಲ್ ಪೋನ್ ಗಳು, 1 ಲಕ್ಷದ 30 ಸಾವಿರ 890ರೂಪಾಯಿ ನಗದು, ಸುಮಾರು 2.50 ಲಕ್ಷ ಮೌಲ್ಯದ ಮ್ಯೂಸಿಕ್ ಸಿಸ್ಟಮ್ ವಶಪಡಿಸಿಕೊಂಡಿದ್ದಾರೆ. ವೈಯಾಲಿಕಾವಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.