ಫೀಫಾ ವಿಶ್ವಕಪ್ 2018: ಕೊಲಂಬಿಯಾ ಶೂಟ್ 'ಔಟ್'; ಕ್ವಾರ್ಟರ್‌ ಫೈನಲ್ಸ್ ಗೆ ಇಂಗ್ಲೆಂಡ್

ರಷ್ಯಾದಲ್ಲಿ ನಡೆತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮಂಗಳವಾರ ನಡೆದ ನಾಕೌಟ್ ಹಂತದ ಕೊನೆಯ ಪಂದ್ಯದಲ್ಲಿ ಕೊಲಂಬಿಯಾ ತಂಡವನ್ನು ಪ್ರಬಲ ಇಂಗ್ಲೆಂಡ್ ತಂಡ 4-3 ಅಂತರದ ಗೋಲುಗಳ ಅಂತರದಲ್ಲಿ ಮಣಿಸುವ ಮೂಲಕ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆದಿದೆ.
ಕೊಲಂಬಿಯಾ ವಿರುದ್ಧ ಗೆದ್ದ ಇಂಗ್ಲೆಂಡ್
ಕೊಲಂಬಿಯಾ ವಿರುದ್ಧ ಗೆದ್ದ ಇಂಗ್ಲೆಂಡ್
ಮಾಸ್ಕೋ: ರಷ್ಯಾದಲ್ಲಿ ನಡೆತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮಂಗಳವಾರ ನಡೆದ ನಾಕೌಟ್ ಹಂತದ ಕೊನೆಯ ಪಂದ್ಯದಲ್ಲಿ ಕೊಲಂಬಿಯಾ ತಂಡವನ್ನು ಪ್ರಬಲ ಇಂಗ್ಲೆಂಡ್ ತಂಡ 4-3 ಅಂತರದ ಗೋಲುಗಳ ಅಂತರದಲ್ಲಿ ಮಣಿಸುವ ಮೂಲಕ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆದಿದೆ.
ಪಂದ್ಯದ ನಿಗದಿತ 90 ನಿಮಿಷಗಳ ಅವಧಿಯಲ್ಲಿ ಎರಡೂ ತಂಡಗಳು ತಲಾ 1-1 ಗೋಲುಗಳ ಅಂತರದಲ್ಲಿ ಸಮಬಲ ಕಾಯ್ದುಕೊಂಡವು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ 57ನೇ ನಿಮಿಷದಲ್ಲಿ ಹ್ಯಾರಿ ಕೇನ್ ಇಂಗ್ಲೆಂಡ್ ಪರ ಮೊದಲ ಗೋಲು ದಾಖಲಿಸಿದರು. ಆ ಮೂಲಕ ಇಂಗ್ಲೆಂಡ್ ಗೆ ಗೆಲುವಿನ ಆಸೆ ಹುಟ್ಟಿಸಿದರು. ಆದರೆ ಪಂದ್ಯ ಇನ್ನೇನು ಅಂತ್ಯಗೊಳ್ಳಲು ಕೆಲವೇ ಕ್ಷಣಗಳು ಮಾತ್ರ ಬಾಕಿ ಉಳಿದಿರುವಾಗ ಇಂಜುರಿ ಸಮಯದಲ್ಲಿ ಕೊಲಂಬಿಯಾದ ಆಟಗಾರ ಯೆರ್ರಿ ಮಿನಾ (90+3 ನಿಮಿಷ) ದಾಖಲಿಸಿದ ರೋಚಕ ಗೋಲು ಪಂದ್ಯವನ್ನು ಪೆನಾಲ್ಟಿ ಶೂಟೌಟ್ ಹಂತಕ್ಕೆ ತಂದು ನಿಲ್ಲಿಸಿತು.
ನಿಗದಿತ ಅವಧಿ ಮುಕ್ತಾಯದ ವೇಳೆಗೆ ಎರಡೂ ತಂಡಗಳು 1-1 ಸಮಬಲ ಸಾಧಿಸಿದ್ದರಿಂದ ಪಂದ್ಯದ ಫಲಿತಾಂಶದ ನಿರ್ಧಾರಕ್ಕೆ ಶೂಟೌಟ್ ಮೊರೆ ಹೋಗಲಾಯಿತು. ಆದರೆ ಪೆನಾಲ್ಟಿ ಶೂಟೌಟ್‌ನಲ್ಲಿ ಕೊಲಂಬಿಯಾಗೆ ಅದೃಷ್ಟ ಸಾಥ್ ನೀಡಲಿಲ್ಲ. ಪರಿಣಾಮ 4-3 ಗೋಲುಗಳ ಅಂತರದ ಸೋಲು ಅನುಭವಿಸಿ ಕೂಟದಿಂದಲೇ ನಿರ್ಗಮಿಸಬೇಕಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com