ಫೀಫಾ ವಿಶ್ವಕಪ್ 2018: ಇಂದಿನಿಂದ ಕ್ವಾರ್ಟರ್ ಫೈನಲ್ಸ್ ಪಂದ್ಯಗಳು ಆರಂಭ

ತೀವ್ರ ಕುತೂಹಲ ಕೆರಳಿಸಿರುವ ಫೀಫಾ ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪಿದ್ದು, ಶುಕ್ರವಾರದಿಂದ ಟೂರ್ನಿಯ ಕ್ವಾರ್ಟರ್ ಫೈನಲ್ಸ್ ಪಂದ್ಯಗಳು ಆರಂಭವಾಗಲಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಾಸ್ಕೋ: ತೀವ್ರ ಕುತೂಹಲ ಕೆರಳಿಸಿರುವ ಫೀಫಾ ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪಿದ್ದು, ಶುಕ್ರವಾರದಿಂದ ಟೂರ್ನಿಯ  ಕ್ವಾರ್ಟರ್ ಫೈನಲ್ಸ್ ಪಂದ್ಯಗಳು ಆರಂಭವಾಗಲಿವೆ.
ಕ್ವಾರ್ಟರ್ ಫೈನಲ್ಸ್ ಹಂತದಲ್ಲಿ ಒಟ್ಟು 8 ತಂಡಗಳಿದ್ದು, ಉರುಗ್ವೆ, ಫ್ರಾನ್ಸ್, ಬ್ರೆಜಿಲ್-ಬೆಲ್ಜಿಯಂ, ರಷ್ಯಾ, ಕ್ರೊವೇಷಿಯಾ, ಸ್ವೀಡನ್ ಮತ್ತು ಇಂಗ್ಲೆಂಡ್ ತಂಡಗಳಿದ್ದು, ಈ ಪೈಕಿ ಇಂದು ನಡೆಯುವ ಮೊದಲೆರಡು ಪಂದ್ಯಗಳಲ್ಲಿ ಉರುಗ್ವೆ ತಂಡ ಪ್ರಬಲ ಫ್ರಾನ್ಸ್ ತಂಡವನ್ನು ಎದುರಿಸಲಿದ್ದು, ಆ ಬಳಿಕ ನಡೆಯುವ ಪಂದ್ಯದಲ್ಲಿ ಬ್ರೆಜಿಲ್ ತಂಡ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.
ಉರುಗ್ವೆ ಮತ್ತು ಫ್ರಾನ್ಸ್ ನಡುವಿನ ಮೊದಲ ಕ್ವಾರ್ಟರ್ ಫೈನಲ್ಸ್ ಪಂದ್ಯ ಇಂದು  ಸಂಜೆ 7.30ಕ್ಕೆ ಆರಂಭವಾಗಲಿದ್ದು, ಆ ಬಳಿಕ ಅಂದರೆ ರಾತ್ರಿ 11.30ಕ್ಕೆ ಬ್ರೆಜಿಲ್ ಮತ್ತು ಬೆಲ್ಜಿಯಂ ತಂಡಗಳ ನಡುವಿನ ಪಂದ್ಯ ಆರಂಭವಾಗಲಿದೆ.
ನಾಳೆ ರಷ್ಯಾ-ಕ್ರೊವೇಷಿಯಾ ಮತ್ತು ಸ್ವೀಡನ್ ಇಂಗ್ಲೆಂಡ್ ತಂಡಗಳು ಸೆಮಿಫೈನಲ್ ಗಾಗಿ ಸೆಣಸಾಡಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com