ಫೀಫಾ ವಿಶ್ವಕಪ್ 2018: ನೇಮರ್ ಗಾಯದ ನಾಟಕ ಪುನರಾವರ್ತಿಸಿದ ಸ್ವಿಸ್ ಶಾಲಾ ಮಕ್ಕಳು, ವಿಡಿಯೋ ವೈರಲ್

ಬ್ರೆಜಿಲ್ ತಂಡ ಸ್ಚಾರ್ ಆಟಗಾರ ನೇಮರ್ ತಮ್ಮ ಫುಟ್ಬಾಲ್ ಚಾತುರ್ಯದಿಂದ ಮಾತ್ರವಲ್ಲದೇ ಮೈದಾನದಲ್ಲಿ ಆಡುವ ಗಾಯದ ನಾಟಕದಿಂದಲೂ ಭಾರಿ ಖ್ಯಾತಿ ಗಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಾಸ್ಕೋ: ಬ್ರೆಜಿಲ್ ತಂಡ ಸ್ಚಾರ್ ಆಟಗಾರ ನೇಮರ್ ತಮ್ಮ ಫುಟ್ಬಾಲ್ ಚಾತುರ್ಯದಿಂದ ಮಾತ್ರವಲ್ಲದೇ ಮೈದಾನದಲ್ಲಿ ಆಡುವ ಗಾಯದ ನಾಟಕದಿಂದಲೂ ಭಾರಿ ಖ್ಯಾತಿ ಗಳಿಸಿದ್ದಾರೆ.
ಇಂದಿಗೂ ಯೂಟ್ಯೂಬ್ ನಲ್ಲಿ ನೇಮರ್ ಎಂದು ಟೈಪಿಸಿದರೆ ಆತ ಗೋಲು ಬಾರಿಸಿದ ವಿಡಿಯೋಗಳ ಜೊತೆಗೇ ಆತ ಮೈದಾನದಲ್ಲಿ ದಿಢೀರ್ ಕುಸಿದು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ನಾಟಕದ ವಿಡಿಯೋಗಳು ಕೂಡ ಸಾಕಷ್ಟು ಲಭ್ಯವಾಗುತ್ತವೆ. ಅಷ್ಟರ ಮಟ್ಟಿಗೆ ನೇಮರ್ ಮೈದಾನದ ಗಾಯದ ನಾಟಕ ಖ್ಯಾತಿ ಗಳಿಸಿದೆ.
ಇನ್ನು ನೇಮರ್ ಗಾಯದ ನಾಟಕ ರಷ್ಯಾದಲ್ಲಿ ನಡೆಯುತ್ತಿರುವ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲೂ ಮುಂದುವರೆದಿತ್ತು. ಮೆಕ್ಸಿಕೋ ವಿರುದ್ಧ ಲೀಗ್ ಹಂತದ ಪಂದ್ಯದಲ್ಲಿ ಬ್ರೆಜಿಲ್ ಆ ತಂಡವನ್ನು ಸೋಲಿಸಿತ್ತು. ಈ ಪಂದ್ಯದ ಬಳಿಕ ಮಾತನಾಡಿದ್ದ ಆ ತಂಡದ ಕೋಚ್ ಆರಂಭದಲ್ಲಿ ನಾವು ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದೆವು. ಪಂದ್ಯ ಗೆಲ್ಲುವ ಅವಕಾಶ ಕೂಡ ಇತ್ತು. ಆದರೆ ಓರ್ವ ಆಟಗಾರನ ನಾಟಕಕ್ಕೆ ಸಾಕಷ್ಟು ಸಮಯ ವ್ಯರ್ಥವಾಯಿತು ಎಂದು ಪರೋಕ್ಷವಾಗಿ ಕಿಡಿಕಾರಿದ್ದರು.
ಇದೀಗ ನೇಮರ್ ಅವರ ಈ ಮೈದಾನ ಹೈಡ್ರಾಮಾದ ಕುರಿತು ಸ್ವಿಟ್ಜರ್ಲೆಂಡ್ ಶಾಲಾ ಮಕ್ಕಳು ಕೂಡ ವ್ಯಂಗ್ಯ ಮಾಡಿದ್ದು, ಒಂದಷ್ಟು ಮಕ್ಕಳ  ಸಮೂಹ ಫುಟ್ಬಾಲ್ ಆಡಿ ಕೆಳಗೆ ಬಿದ್ದು ನೇಮರ್ ರಂತೆ ಗಾಯದ ನಾಟಕ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದೆ.
ಅಂದಹಾಗೆ ವಿಶ್ವಕಪ್ ಟೂರ್ನಿಯಲ್ಲಿ ಇಂದಿನಿಂದ ಕ್ವಾರ್ಟರ್ ಫೈನಲ್ಸ್ ಪಂದ್ಯಗಳು ಆರಂಭವಾಗಲಿದ್ದು, ಬ್ರೆಜಿಲ್ ತಂಡ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com