ವಿಶ್ವಕಪ್ 2018: 'ಸೆಕ್ಸಿ ಮಹಿಳೆ'ಯರತ್ತ ಕ್ಯಾಮೆರಾ ಜೂಮ್ ಮಾಡಿದರೆ ಎಚ್ಚರ!: ಪ್ರಸಾರಕರ ವಿರುದ್ಧ ಫೀಫಾ ಗರಂ

ವಿಶ್ವಕಪ್ ಟೂರ್ನಿಯಲ್ಲಿ ಪಂದ್ಯವನ್ನು ಸೆರೆ ಹಿಡಿಯಬೇಕಾದ ಕ್ಯಾಮೆರಾಮನ್ ಗಳು ಕ್ರೀಡಾಂಗಣದಲ್ಲಿರುವ ಸೆಕ್ಸಿ ಮಹಿಳೆಯರತ್ತ ಕ್ಯಾಮೆರಾ ಜೂಮ್ ಮಾಡುವುದರ ವಿರುದ್ಧ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ ಫೀಫಾ ಅಸಮಾಧಾನ ವ್ಯಕ್ತಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಾಸ್ಕೋ: ವಿಶ್ವಕಪ್ ಟೂರ್ನಿಯಲ್ಲಿ ಪಂದ್ಯವನ್ನು ಸೆರೆ ಹಿಡಿಯಬೇಕಾದ ಕ್ಯಾಮೆರಾಮನ್ ಗಳು ಕ್ರೀಡಾಂಗಣದಲ್ಲಿರುವ ಸೆಕ್ಸಿ ಮಹಿಳೆಯರತ್ತ ಕ್ಯಾಮೆರಾ ಜೂಮ್ ಮಾಡುವುದರ ವಿರುದ್ಧ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ ಫೀಫಾ ಅಸಮಾಧಾನ ವ್ಯಕ್ತಪಡಿಸಿದೆ.
ಕ್ಯಾಮರಾಮನ್ ಗಳ ಆ ಪ್ರಕ್ರಿಯೆ ಆಟಗಾರರ ಚಿತ್ತ ಕೆಡಿಸುವುದಲ್ಲದೇ ಸೆಕ್ಸಿಸಮ್ ಗೆ ಆಹ್ವಾನ ನೀಡಿದಂತಾಗುತ್ತದೆ. ಹೀಗಾಗಿ ಇನ್ನು ಮುಂದೆ ಇಂತಹ ಕೃತ್ಯ ಬೇಡ ಎಂದು ಪ್ರಸಾರಕರಿಗೆ ಎಚ್ಚರಿಕೆ ನೀಡಿದೆ. 
ಟೂರ್ನಿ ಆರಂಭಕ್ಕೂ ಮುನ್ನವೇ ರಷ್ಯಾದಲ್ಲಿ ಸಲಿಂಗ ಕಾಮ, ಸಲಿಂಗ ವಿವಾಹ, ವಿದೇಶಿ ಪುರುಷರ ಜೊತೆ ಲೈಂಗಿಕ ಸಂಪರ್ಕದಂತಹ ಗಂಭೀರ ವಿಚಾರಗಳು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಇನ್ನು ಪಂದ್ಯಾವಳಿ ವೇಳೆ ಕ್ಯಾಮೆರಾ ಮನ್ ಗಳು ಮಾಡುವ ಈ ಜೂಮ್ ಪ್ರಕ್ರಿಯೆಯಿಂದಾಗಿ ಲೈಂಗಿಕ ಭಾವನೆಗಳಿಗೆ ಧಕ್ಕೆ ತಂದಾಗುತ್ತದೆ ಎಂದು ಕೆಲ ಸಲಿಂಗಿ ಫುಟ್ಬಾಲ್ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಆರಂಭದಲ್ಲಿ ಇದನ್ನು ಫೀಫಾ ನಿರ್ಲಕ್ಷಿಸಿತ್ತಾದರೂ, ಕ್ರಮೇಣ ಈ ಕೂಗು ಜೊರಾಗ ತೊಡಗಿದ್ದು, ಇದೀಗ ಎಚ್ಚೆತ್ತುಕೊಂಡಿರುವ ಫೀಫಾ ಸೆಕ್ಸಿ ಮಹಿಳೆಯರತ್ತ ಕ್ಯಾಮೆರಾ ಜೂಮ್ ಮಾಡದಂತೆ ಪ್ರಸಾರಕರಿಗೆ ಸೂಚನೆ ನೀಡಿದೆ.
ಈ  ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಫೀಪಾ ಆಯೋಜಕ ಅಧಿಕಾರಿ ಪಿಯರಾ ಪೊವಾರ್, ಪಂದ್ಯದ ವೇಳೆ ಸೆಕ್ಸಿ ಮಹಿಳೆಯರತ್ತ ಕ್ಯಾಮೆರಾ ಜೂಮ್ ಮಾಡುವ ಸುಮಾರು 30 ಪ್ರಕರಣಗಳು ಬೆಳಕಿಗೆ ಬಂದಿವೆ. ಪ್ರಮುಖವಾಗಿ ರಷ್ಯನ್ ಮಹಿಳೆಯರನ್ನು ಗುರಿಯಾಗಿಸಿಕೊಂಡು ಇಂತಹ ಕಾರ್ಯಗಳು ನಡೆಯುತ್ತಿದ್ದು, ಇಂತಹ ವರ್ತನೆಗಳು ಬೇರೆ ಬೇರೆ ರೀತಿಯ ಪ್ರತಿಕ್ರಿಯೆಗಳಿಗೆ ಪ್ರಚೋದನೆ ನೀಡಿದಂತಾಗುತ್ತದೆ. ಇನ್ನು ನಾವು ಮಾಧ್ಯಮಗಳಲ್ಲಿ ಸಾಕಷ್ಟು ಬಾರಿ ನೇರ ಪ್ರಸಾರದಲ್ಲೇ ನಿರೂಪಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಕುರಿತು ವರದಿಗಳು ಓದಿದ್ದೇವೆ.
ಸಾಕಷ್ಟು ಮಂದಿ ನಿರೂಪಕಿಯರು ನೇರ ಪ್ರಸಾರದಲ್ಲಿರುವಾಗ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಹೀಗಾಗಿ ಮೈದಾನದಲ್ಲಿ ಸೆಕ್ಸಿ ಮಹಿಳೆಯರತ್ತ ಕ್ಯಾಮೆರಾ ಜೂಮ್ ಮಾಡಬಾರದು ಎಂದು ಫೀಫಾ ಎಚ್ಚರಿಕೆ ನೀಡಿದೆ ಎಂದು ಪೊವಾರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com