ಫೀಫಾ ವಿಶ್ವಕಪ್ 2018 ಟೂರ್ನಿಯಿಂದ ಸೂಪರ್ ಸ್ಟಾರ್ ಗಳಾದ ಆಟಗಾರರು ಇವರು!

ರಷ್ಯಾದಲ್ಲಿ ನಡೆಯುತ್ತಿದ್ದ ಫೀಫಾ ವಿಶ್ವಕಪ್ ಟೂರ್ನಿ ಮುಕ್ತಾಯವಾಗಿದ್ದು, ಪ್ರತೀ ಬಾರಿಯಂತೆಯೇ ಈ ಬಾರಿ ಸಾಕಷ್ಟು ಆಟಗಾರರು ತಮ್ಮ ಪ್ರದರ್ಶನದ ಮೂಲಕ ಸ್ಟಾರ್ ಆಟಗಾರರಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಮಾಸ್ಕೋ: ರಷ್ಯಾದಲ್ಲಿ ನಡೆಯುತ್ತಿದ್ದ ಫೀಫಾ ವಿಶ್ವಕಪ್ ಟೂರ್ನಿ ಮುಕ್ತಾಯವಾಗಿದ್ದು, ಪ್ರತೀ ಬಾರಿಯಂತೆಯೇ ಈ ಬಾರಿ ಸಾಕಷ್ಟು ಆಟಗಾರರು ತಮ್ಮ ಪ್ರದರ್ಶನದ ಮೂಲಕ ಸ್ಟಾರ್ ಆಟಗಾರರಾಗಿದ್ದಾರೆ.
ತೀವ್ರ ನಿರೀಕ್ಷೆ ಹುಟ್ಟಿಸಿದ್ದ ಫೀಫಾ ವಿಶ್ವಕಪ್ 2018ರ ಟೂರ್ನಿ ಮುಕ್ತಾಯವಾಗಿದೆ. ಫೈನಲ್ ನಲ್ಲಿ ಕ್ರೊವೇಷಿಯಾ ತಂಡವನ್ನು ಮಣಿಸಿದ ಫ್ರಾನ್ಸ್ ತಂಡ ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿದೆ. ಟೂರ್ನಿಯಲ್ಲಿ ಒಟ್ಟು 48 ದೇಶಗಳ ತಂಡಗಳು ಪಾಲ್ಗೊಂಡಿದ್ದು ಈ ಪೈಕಿ ಫ್ರಾನ್ಸ್ ಮತ್ತು ಕ್ರೊವೇಷಿಯಾ ತಂಡ ಮೊದಲ ಎರಡು ಸ್ಥಾನಗಳನ್ನು ಅಲಂಕರಿಸಿದೆ.
ಇನ್ನು ಇಡೀ ಟೂರ್ನಿಯಲ್ಲಿ ಹಲವು ಆಟಗಾರರು ಗಮನ ಸೆಳೆದಿದ್ದು, ಈ ಪೈಕಿ ಹಲವು ಉದಯೋನ್ಮುಖ ಆಟಗಾರರು ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ಪದಾರ್ಪಣೆ ಮಾಡಿದ್ದು, ಮತ್ತಷ್ಟು ಆಟಗಾರರು ಸ್ಟಾರ್ ಗಿರಿ ಸಂಪಾದಿಸಿದ್ದಾರೆ.
ಈ ಪೈಕಿ ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಸೂಪರ್ ಸ್ಟಾರ್ ಗಿರಿ ಪಡೆದ ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ.
1.ಕಿಲ್ಯಾನ್ ಮ್ಬಪ್ಪೆ (ಫ್ರಾನ್ಸ್)
ಫ್ರಾನ್ಸ್ ತಂಡದ ಉದಯೋನ್ಮುಖ ಆಟಗಾರ. ವಯಸ್ಸು ಈಗಿನ್ನೂ 19 ವರ್ಷ.. ಇದೇ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಗೆ ಪದಾರ್ಪಣೆ ಮಾಡಿರುವ ಕಿಲ್ಯಾನ್ ಮ್ಬಪ್ಪೆ ಪದಾರ್ಪಣೆ ವಿಶ್ವಕಪ್ ಟೂರ್ನಿಯಲ್ಲೇ ಪ್ರಶಸ್ತಿ ಪಡೆದಿದ್ದಾರೆ. ಒಟ್ಟು 7 ಪಂದ್ಯಗಳಿಂದ ಮ್ಬಪ್ಪೆ 4 ಗೋಲು ಗಳಿಸಿದ್ದು, ಈ ಪೈಕಿ ಫೈನಲ್ ಪಂದ್ಯದಲ್ಲಿ 65ನೇ ನಿಮಿಷದಲ್ಲಿ ಗಳಿಸಿದ ಗೋಲು ದಾಖಲೆ ನಿರ್ಮಾಣ ಮಾಡಿದೆ.ಫುಟ್ಬಾಲ್ ದಂತಕಥೆ ಪೀಲೆ ಬಳಿಕ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೋಲು ಗಳಿಸಿದ ಅತ್ಯಂತ ಚಿಕ್ಕ ವಯಸ್ಸಿನ ಆಟಗಾರ ಎಂಬ ಕೀರ್ತಿಗೆ ಮ್ಬಪ್ಪೆ ಭಾಜನರಾಗಿದ್ದಾರೆ. ಇದೇ ಕಾರಣಕ್ಕೆ ಟೂರ್ನಿಯ ಉದಯೋನ್ಮುಖ ಆಟಗಾರ ಎಂಬ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದಾರೆ.
2. ಹಿರ್ವಿಂಗ್ ಲೊಜಾನೊ (ಮೆಕ್ಸಿಕೊ)
ಹಾಲಿ ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ಉದಯಸಿದ ಮತ್ತೋರ್ವ ಸ್ಟಾರ್ ಆಟಗಾರ ಹಿರ್ವಿಂಗ್ ಲೊಜಾನೊ. ಮೆಕ್ಸಿಕೋ ತಂಡ 22 ವರ್ಷದ ಆಟಗಾರ ಲೊಜಾನೊ ಬಾಲ್ ಪಾಸಿಂಗ್ ವಿಭಾಗದಲ್ಲಿ ಶೇ.86.5ರಷ್ಟು ನಿಖರತೆ ಹೊಂದಿದ್ದಾರೆ. ಇನ್ನು ಪಿಎಸ್ ವಿ ಐಂಡ್ಹೋವನ್ ಕ್ಲಬ್ ಪರ ಆಡುತ್ತಿರುವ ಲೊಜಾನೋ, ಈ ವರೆಗೂ 17 ಗೋಲು ಗಳಿಸಿದ್ದಾರೆ. ವಿಶ್ಪಕಪ್ ಟೂರ್ನಿಯಲೂ ಗಮನಾರ್ಹ ಪ್ರದರ್ಶನ ನೀಡಿರುವ ಲೊಜಾನೋ ಮೇಲೆ ಫುಟ್ಬಾಲ್ ಕ್ಷೇತ್ರದ ಅಗ್ರಗಣ್ಯ ಕ್ಲಬ್ ಗಳಾದ ಮ್ಯಾಂಚೆಸ್ಟರ್ ಯುನೈಟೆಡ್, ಬಾರ್ಸಿಲೋನಾ ತಂಡಗಳು ಕಣ್ಣಿಟ್ಟಿವೆ.
3. ಕೀರನ್ ಟ್ರಿಪ್ಪಿರ್ (ಇಂಗ್ಲೆಂಡ್)
ಇಂಗ್ಲೆಂಡ್ ತಂಡದ ಪ್ರಮುಖ ಸ್ಚ್ರೈಕರ್ ಕೀರನ್ ಟ್ರಿಪ್ಪಿರ್ 2018ರ ವಿಶ್ವಕಪ್ ಟೂರ್ನಿಯ ಮತ್ತೊರ್ವ ಪ್ರಮುಖ ಸ್ಚಾರ್ ಆಟಗಾರ. ವಿಶ್ವಕಪ್ ಸೆಮಿಫೈನಲ್ ನಲ್ಲಿ ಗೋಲು ಬಾರಿಸಿ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟಿದ್ದರು. ಆದರೆ ಇದೇ ಆರಂಭವನ್ನು ಮುಂದುವರೆಸಿಕೊಂಡು ಹೋಗಲಾಗದ ಇಂಗ್ಲೆಂಡ್ ತಂಡ ಸೆಮಿಫೈನಲ್ ನಲ್ಲಿ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದಿತ್ತು.
4.ಬೆಂಜಮಿನ್ ಪಾವರ್ಡ್ (ಫ್ರಾನ್ಸ್)
ಫ್ರಾನ್ಸ್ ಸ್ಚಾರ್ ಆಟಗಾರರಲ್ಲಿ ಬೆಂಜಮಿನ್ ಪಾವರ್ಡ್ ಕೂಡ ಒಬ್ಬರು. ಫ್ರಾನ್ಸ್ ತಂಡದ ಪ್ರಮುಖ ಡಿಫೆಂಡರ್ ಆಗಿರುವ ಪಾವರ್ಡ್ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
5.ಅಂಟೆ ರೆಬಿಕ್ (ಕ್ರೊವೇಷಿಯಾ)
2017ರಲ್ಲಿ ಕ್ರೊವೇಷಿಯಾದ ಎಂಟ್ರಾಚ್ಟ್ ಫ್ರಾಂಕ್ಫರ್ಟ್ ಕ್ಲಬ್ ಪರ ಆಡಿದ್ದ ರೆಬಿಕ್ ಕನಸಿನಲ್ಲೂ ತಾವು ವಿಶ್ನಕಪ್ ಟೂರ್ನಿಯಲ್ಲಿ ಕ್ರೊವೇಷಿಯಾ ತಂಡವನ್ನು ಪ್ರತಿನಿಧಿಸುತ್ತೇವೆ ಎಂದು ಭಾವಿಸಿರಲಿಲ್ಲ. ತಂಡಕ್ಕೆ ಆಯ್ಕೆಯಾಗಿದ್ದು ಮಾತ್ರವಲ್ಲದೇ ಉತ್ತಮ ಪ್ರದರ್ಶನದ ಮೂಲಕ ರೆಬಿಕ್ ಇದೀಗ ಅಗ್ರಗಣ್ಯ ಕ್ಲಬ್ ಗಳ ಗಮನ ಸೆಳೆದಿದ್ದಾರೆ.
6.ಡೆನಿಸ್ ಚೆರ್ಶೇವ್ (ರಷ್ಯಾ)
ರಷ್ಯಾ ತಂಡಕ್ಕೆ ಹೆಚ್ಚುವರಿ ಆಟಗಾರನಾಗಿ ಕಣಕ್ಕಿಳಿದಿದ್ದ ಡೆನಿಸ್ ಚೆರ್ಶೇವ್ ಇದೀಗ ತಮ್ಮ ಉತ್ತಮ ಪ್ರದರ್ಶನದ ಮೂಲಕ ಸ್ಟಾರ್ ಆಟಗಾರರಾಗಿ ಮಾರ್ಪಟ್ಟಿದ್ದಾರೆ. ಈ ಹಿಂದೆ ತಂಡಕ್ಕೆ ಆಯ್ಕೆಯಾಗಿದ್ದ ಅಲನ್ ಡಿಜೋಜೆವ್ ಗಾಯಗೊಂಡ ಪರಿಣಾಮ ಅವರ ಸ್ಥಾನಕ್ಕೆ ಡೆನಿಸ್ ಚೆರ್ಶೇವ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಚೆರ್ಶೇವ್ ತಮಗೆ ಸಿಕ್ಕ ಸಣ್ಣ ಅವಕಾಶವನ್ನು ಸದ್ಬಳಕೆ ಮಾಡಿಕೊಂಡರು. ರಷ್ಯಾ ಆಡಿದ ಐದು ಪಂದ್ಯಗಳಿಂದ ಡೆನಿಸ್ ಚೆರ್ಶೇವ್ ಒಟ್ಟು 4 ಗೋಲುಗಳನ್ನು ಗಳಿಸಿ ತಂಡ ನಾಕೌಟ್ ಗೇರಲು ಕಾರಣರಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com