'ಫೀಫಾ ವಿಶ್ವಕಪ್ ಟ್ರೋಫಿ', ಅದರಲ್ಲಿನ ಚಿನ್ನದ ಪ್ರಮಾಣದ ಬಗ್ಗೆ ತಿಳಿದುಕೊಳ್ಳಿ!

ಫ್ರಾನ್ಸ್ ತಂಡಕ್ಕೆ ಅಸಲಿ ಟ್ರೋಫಿ ನೀಡದೇ ಅದರ ಪ್ರತಿಕೃತಿ ನೀಡಲಾಗಿದೆ. ಇಷ್ಟಕ್ಕೂ ಅಸಲಿ ಟ್ರೋಫಿ ನೀಡದೇ ಪ್ರತಿಕೃತಿ ನೀಡಿದ್ದೇಕೆ, ಈ ಅಸಲಿ ಟ್ರೋಫಿ ಕಥೆ ಏನು ಎಂಬುದಕ್ಕೆ ಉತ್ತರ ಇಲ್ಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಮಾಸ್ಕೋ: ಫೀಫಾ ವಿಶ್ವಕಪ್ ಟೂರ್ನಿ ಮುಕ್ತಾಯವಾಗಿದ್ದು, ಕ್ರೊವೇಷಿಯಾ ಮಣಿಸಿದ ಫ್ರಾನ್ಸ್ ತಂಡ ವಿಶ್ವಕಪ್ ಟ್ರೋಫಿ ಮುತ್ತಿಟ್ಟಿದೆ. ಆದರೆ ಫ್ರಾನ್ಸ್ ತಂಡಕ್ಕೆ ಅಸಲಿ ಟ್ರೋಫಿ ನೀಡದೇ ಅದರ ಪ್ರತಿಕೃತಿ ನೀಡಲಾಗಿದೆ. ಇಷ್ಟಕ್ಕೂ ಅಸಲಿ ಟ್ರೋಫಿ ನೀಡದೇ ಪ್ರತಿಕೃತಿ ನೀಡಿದ್ದೇಕೆ, ಈ ಅಸಲಿ ಟ್ರೋಫಿ ಕಥೆ ಏನು ಎಂಬುದಕ್ಕೆ ಉತ್ತರ ಇಲ್ಲಿದೆ.
1920ಕ್ಕೂ ಮೊದಲೇ ಅಂತಾರಾಷ್ಟ್ರೀಯ ಫುಟ್ಬಾಲ್ ಟೂರ್ನಿ ಆಯೋಜನೆಯಾಗುತ್ತಿತ್ತಾದರೂ, ಒಂದು ನಿರ್ಧಿಷ್ಟ ಟೂರ್ನಿಯ ಸ್ವರೂಪ ಪಡೆದ್ದಿದ್ದು ಮಾತ್ರ 1929ರಲ್ಲಿ.. ಅಂದು ಫೀಫಾ ಎಂಬ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆಯನ್ನು ಕಟ್ಟಿದ್ದು ಜೂಲ್ಸ್ ರಿಮೆಟ್ ಎಂಬುವವರು. 1930ರಿಂದ 1970ರವರೆಗೂ ಫೀಫಾ ವಿಶ್ವಕಪ್ ಟ್ರೋಫಿಯನ್ನು ಜೂಲ್ಸ್ ರಿಮೆಟ್ ಟ್ರೋಫಿ ಎಂದೇ ಕರೆಯಲಾಗುತ್ತಿತ್ತು. ಫೀಫಾ ಸಂಸ್ಥೆಯ ಮೊದಲ ಅಧ್ಯಕ್ಷರಾಗಿದ್ದ ಜೂಲ್ಸ್ ರಿಮೆಟ್ ಅವರ ಗೌರವಾರ್ಥ ಟ್ರೋಫಿಗೆ ಈ ಹೆಸರು ನೀಡಲಾಗಿತ್ತು. 
ಆದರೆ 1966ರಲ್ಲಿ ಈ ಚಿನ್ನದ ಟ್ಱೋಫಿಯನ್ನು ದುಷ್ಕರ್ಮಿಗಳು ಅಪಹರಣ ಮಾಡಿದ್ದರು. ಈ ವೇಳೆ ನಾಯಿಯೊಂದು ಈ ಟ್ರೋಫಿ ಹುಡುಕುವಲ್ಲಿ ಮಹತ್ತರ ಪಾತ್ರವಹಿಸಿತ್ತು. ಆಗ ಬಾಬಿ ಮೂರೆ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡ ವಿಶ್ವಕಪ್ ಗೆದ್ದಿತ್ತು. 1974 ರಲ್ಲಿ ಜೂಲ್ಸ್ ರಿಮೆಟ್ ಟ್ರೋಫಿಯನ್ನು ಮರು ನಾಮಕರಣ ಮಾಡಿ, ಫೀಫಾ ವಿಶ್ವಕಪ್ ಟ್ರೋಫಿ ಎಂದು ಕರೆಯಲಾಗುತ್ತಿದೆ. ನೂತನ ಟ್ರೋಫಿಯನ್ನು ಇಟಲಿ ಮೂಲದ ಕಲೆಗಾರ ಸಿಲ್ವಿಯೊ ಗಝಾನಿಕ ಅವರು ನಿರ್ಮಿಸಿದ್ದರು. ಬಳಿಕ  1983ರಲ್ಲಿ ಮತ್ತೆ ಎರಡನೇ ಬಾರಿಗೆ ಟ್ರೋಫಿ ಕಳ್ಳತನವಾಯಿತು. ದುರಾದೃಷ್ಟವೆಂದರೆ ಈ ಬಾರಿ ಕಳ್ಳರು ಚಿನ್ನದ ಟ್ರೋಫಿಯನ್ನು ಕರಗಿಸಿ ಅದರಲ್ಲಿದ್ದ ಚಿನ್ನವನ್ನು ಕದ್ದಿದ್ದರು. ಈ ಘಟನೆ ಬಳಿಕ ಎಚ್ಚೆತ್ತ ಫೀಫಾ ಮತ್ತೆ ಚಿನ್ನದ ಪ್ರಶಸ್ತಿ ತಯಾರಿಸಿತ್ತು. 
ಅಂತೆಯೇ ಈ ಘಟನೆ ಬಳಿಕ ಫೀಫಾ ಅಧ್ಯಕ್ಷರಾಗಿದ್ದ ಜೂಲ್ಸ್ ರಿಮೆಟ್ ಅವರು ಮೂರು ಬಾರಿ ಪ್ರಶಸ್ತಿ ಗೆಲ್ಲುವ ತಂಡಕ್ಕೆ ಮಾತ್ರ ನಿಜವಾದ ಚಿನ್ನದ ಟ್ರೋಫಿ ನೀಡುವಂತೆ ಸೂಚನೆ ನೀಡಿದ್ದರು. 1970ರಲ್ಲಿ ಮೂರು ಬಾರಿ ಪ್ರಶಸ್ತಿ ಗೆದ್ದಿದ್ದ ಬ್ರೆಜಿಲ್ ತಂಡ ತನ್ನ ಬಳಿಯಲ್ಲಿ ಅಸಲಿ ಟ್ರೋಫಿಯನ್ನು ಉಳಿಸಿಕೊಂಡಿತ್ತು. ಆ ಬಳಿಕ ಪ್ರಶಸ್ತಿ ಗೆಲ್ಲುವ ತಂಡಗಳಿಗೆ ನಿಜವಾದ ಟ್ರೋಫಿ ನೀಡದೇ ಚಿನ್ನದ ಲೇಪನವಿರುವ ಕಂಚಿನ ಟ್ರೋಫಿಯನ್ನು ನೀಡಿ ಅಸಲಿ ಟ್ರೋಫಿಯನ್ನು ತನ್ನ ಮ್ಯೂಸಿಯಂಗೆ ರವಾನಿಸುತ್ತದೆ.
ಅಸಲಿ ಟ್ರೋಫಿಯಲ್ಲಿದೆ ಬರೊಬ್ಬರಿ 5.2 ಕೆಜಿ ಚಿನ್ನ
ಇನ್ನು ಫೀಫಾ ವಿಶ್ವಕಪ್ ಟ್ರೋಫಿ ಒಟ್ಟು 6.2 ಕೆಜಿ ತೂಕವಿದ್ದು. ಈ ಪೈಕಿ 5.2ಕೆಜಿಯಷ್ಟು 18 ಕ್ಯಾರೆಟ್ ನ ಅಸಲಿ ಚಿನ್ನವಿದೆ. ಇದೇ ಟ್ರೋಫಿಯನ್ನೇ ಪ್ರಸ್ತುತ ಫೀಫಾ ಮ್ಯೂಸಿಯಂಗೆ ರವಾನೆ ಮಾಡಲಾಗಿದೆ. ಈ ಟ್ರೋಫಿಯ ಮೊತ್ತ ಸುಮಾರು 121,000 ಯೂರೋಗಳಾಗುತ್ತವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com