ಕೆಲಹೊತ್ತು ಹೊಟೆಲ್ ನ ಭದ್ರತಾ ಸಿಬ್ಬಂದಿ ಅವರನ್ನು ದೂರ ಕಳುಹಿಸುವ ಪ್ರಯಚತ್ನ ಮಾಡಿದರಾದರೂ ಮತ್ತೆ ಆಗಮಿಸಿದ ಅಭಿಮಾನಿಗಳು ಮತ್ತೆ ಜೋರಾಗಿ ಕೂಗಲು ಆರಂಭಿಸಿದ್ದಾರೆ. ಆದರೆ ಇದಕ್ಕೆ ಸೊಪ್ಪು ಹಾಕದ ಪೋರ್ಚುಗಲ್ ಆಟಗಾರರು ತಮ್ಮ ತಮ್ಮ ಕೋಣೆಯಲ್ಲಿ ಮಲಗಿದ್ದಾರೆ. ಆದರೆ ಆ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಮಾತ್ರ ಕಿಟಕಿ ಬಳಿ ಬಂದು ಅಭಿಮಾನಿಗಳಿಗೆ ಸನ್ನೆ ಮಾಡುತ್ತಾ, ಕಿರುಚಾಡಬೇಡಿ.. ಮಲಗಬೇಕು ಎಂದು ಹೇಳಿದ್ದಾರೆ. ಈ ಹಾಸ್ಯಾತ್ಮಕ ದೃಶ್ಯಗಳನ್ನು ಕೆಲ ಅಭಿಮಾನಿಗಳು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.