ಅರ್ಜೆಂಟೀನಾ ಗೆಲುವಿನ ಬೆನ್ನಲ್ಲೇ ನೆಲಕ್ಕೆ ಕುಸಿದ ಫುಟ್ಬಾಲ್ ದಂತಕಥೆ ಮರಡೋನಾ!

ಮಂಗಳವಾರ ನಡೆದ ನೈಜಿರಿಯಾ ವಿರುದ್ಧ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಗೆಲುವು ಸಾಧಿಸುತ್ತಿದ್ದಂತೆಯೇ ಪಂದ್ಯ ವೀಕ್ಷಿಸುತ್ತಿದ್ದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅನಾರೋಗ್ಯಕ್ಕೆ ತುತ್ತಾದ ಘಟನೆ ನಡೆದಿದೆ.
ಭಾವೋದ್ವೇಗಕ್ಕೆ ಒಳಗಾದ ಮರಡೋನಾ
ಭಾವೋದ್ವೇಗಕ್ಕೆ ಒಳಗಾದ ಮರಡೋನಾ
ಮಾಸ್ಕೋ: ಮಂಗಳವಾರ ನಡೆದ ನೈಜಿರಿಯಾ ವಿರುದ್ಧ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಗೆಲುವು ಸಾಧಿಸುತ್ತಿದ್ದಂತೆಯೇ ಪಂದ್ಯ ವೀಕ್ಷಿಸುತ್ತಿದ್ದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅನಾರೋಗ್ಯಕ್ಕೆ ತುತ್ತಾದ ಘಟನೆ ನಡೆದಿದೆ.
ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನದಿಂದ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದ್ದ ಅರ್ಜೆಂಟೀನಾ ತಂಡ ನಿನ್ನೆಯ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ನೈಜಿರಿಯಾ ವಿರುದ್ಧ 2-1 ಅಂತರದ ರೋಚಕ ಗೆಲುವು ಸಾಧಿಸಿತು. ಅಷ್ಟು ಮಾತ್ರವಲ್ಲದೇ ನಾಕೌಟ್ ಹಂತಕ್ಕೇರಿತು. ಅತ್ತ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುತೂಹಲದಿಂದ ಪಂದ್ಯ ವೀಕ್ಷಣೆ ಮಾಡುತ್ತಿದ್ದ ಅರ್ಜೆಂಟೀನಾ ಫುಟ್ಬಾಲ್ ದಂತಕಥೆ ಮರಡೋನಾ ಭಾವೋದ್ವೇಗಕ್ಕೆ ಒಳಗಾಗಿ ಅನಾರೋಗ್ಯದಿಂದ ನೆಲಕ್ಕೆ ಕುಸಿದರು. ಕೊಠಡಿಯೊಳಗೆ ಕರೆದೊಯ್ದು ಅವರಿಗೆ ನೀರು ನೀಡಲಾಯಿತು.
ಈ ಪಂದ್ಯ ಅರ್ಜೆಂಟೀನಾ ತಂಡಕ್ಕೆ ನಿರ್ಣಾಯಕವಾಗಿತ್ತು. ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾ ತಂಡ ಮುಂದುವರೆಯ ಬೇಕಾದರೆ ಈ ಪಂದ್ಯವನ್ನು ಗೆಲ್ಲಲೇ ಬೇಕಾಗಿತ್ತು. ಡ್ರಾ ಕೂಡ ತಂಡವನ್ನು ಟೂರ್ನಿಯಿಂದ ಹೊರ ಹಾಕುತ್ತಿತ್ತು. ಹೀಗಾಗಿ ತಂಡದ ಗೆಲುವಿಗಾಗಿ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದರು. ಅತ್ತ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಮರಡೋನಾ ಕೂಡ ತೀವ್ರ ಕುತೂಹಲದಿಂದ ಪಂದ್ಯ ವೀಕ್ಷಣೆ ಮಾಡುತ್ತಿದ್ದರು. ಪಂದ್ಯದ 86ನೇ ನಿಮಿಷದಲ್ಲಿ ಮಾರ್ಕೋಸ್ ರೋಜೋ ಗೋಲು ಗಳಿಸುತ್ತಿದ್ದಂತೆಯೇ ಇತ್ತ ಮರಡೋನಾ ಸಂತಸದಿಂದ ಭಾವೋದ್ಗೇಗತ್ತೆ ತುತ್ತಾಗಿ ನೆಲಕ್ಕೆ ಕುಸಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ಪ್ರಸ್ತುತ ಮರಡೋನಾಗೆ ಯಾವುದೇ ಅಪಾಯವಿಲ್ಲ. ಅವರಿಗೆ ವಿಶ್ರಾಂತಿ ಬೇಕು ಎಂದು ವೈದ್ಯರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com