ನೂತನ ಚೆಂಡು
ಫೀಫಾ ವಿಶ್ವ ಕಪ್ 2018
ಫೀಫಾ ವಿಶ್ವಕಪ್ 2018: ನಾಕೌಟ್ ಹಂತಕ್ಕೆ ಹೊಸ ಚೆಂಡು!
ಫಿಫಾ ವಿಶ್ವಕಪ್ 2018ರ ನಾಕೌಟ್ ಹಂತದ ಪಂದ್ಯಗಳಿಗೆ ಹೊಸ ರೀತಿಯ ಅಡಿಡಾಸ್ ಚೆಂಡುಗಳು ಬಳಕೆಯಾಗಲಿವೆ ಎಂದು ತಿಳಿದುಬಂದಿದೆ.
ಮಾಸ್ಕೋ: ಫಿಫಾ ವಿಶ್ವಕಪ್ 2018ರ ನಾಕೌಟ್ ಹಂತದ ಪಂದ್ಯಗಳಿಗೆ ಹೊಸ ರೀತಿಯ ಅಡಿಡಾಸ್ ಚೆಂಡುಗಳು ಬಳಕೆಯಾಗಲಿವೆ ಎಂದು ತಿಳಿದುಬಂದಿದೆ.
ಟೆಲ್ಸ್ಟಾರ್ ಮೆಷ್ಟಾ ಎಂಬುದು ಈ ನೂತನ ಚೆಂಡಿನ ಹೆಸರಾಗಿದ್ದು, ಇದು ಕೆಂಪು, ಬಿಳಿ ಮತ್ತು ಕಪ್ಪು ಬಣ್ಣವನ್ನು ಒಳಗೊಂಡಿದೆ. ರಷ್ಯನ್ ಭಾಷೆಯಲ್ಲಿ ‘ಮೆಷ್ಟಾ’ ಎಂದರೆ ಕನಸು ಅಥವಾ ಮಹಾತ್ವಾಕಾಂಕ್ಷೆ ಎಂಬ ಅರ್ಥವಿದೆ.
ವಿಶ್ವಕಪ್ ಟೂರ್ನಿ ಇದೀಗ ನಾಕೌಟ್ ಹಂತ ತಲುಪಿದ್ದು, ಈ ನಿರ್ಣಾಯಕ ಹಂತದಲ್ಲಿ ತಂಡಗಳು ಹೊಸ ಚೆಂಡಿನಲ್ಲಿ ಆಡಲಿವೆ.
ಲೀಗ್ ಹಂತದಲ್ಲಿ ಬಳಸುತ್ತಿರುವ 'ಟೆಲ್ಸ್ಟಾರ್ 18' ಚೆಂಡು ಕಪ್ಪು-ಬಿಳಿ ಬಣ್ಣದ ವಿನ್ಯಾಸದಿಂದ ಕೂಡಿದೆ. ಇದೀಗ ನೀಡಲಾಗಿರುವ ಕೆಂಪು ಬಣ್ಣ, ನಾಕೌಟ್ ಹಂತದಲ್ಲಿ ವಿಶ್ವಕಪ್ ಬಿಸಿ ಏರಿರುವುದನ್ನು ಪ್ರತಿಬಿಂಬಿಸಲಿದೆ.
ಜೂನ್ 30ರ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇದು ಮೊದಲ ಬಾರಿ ಬಳಕೆಯಾಗಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ